Site icon Vistara News

Vistara Airlines News: ದೆಹಲಿಗೆ ತೆರಳುವವರ ಟಿಕೆಟ್‌ ಶುಲ್ಕ ಮನ್ನಾ; ಏರ್‌ ಇಂಡಿಯಾ, ವಿಸ್ತಾರ ಏರ್‌ಲೈನ್ಸ್ ಆಫರ್‌ ಯಾರಿಗೆ?

Vistara Airlines Flight

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜಿ 20 ಶೃಂಗಸಭೆ ನಡೆಯುವುದರಿಂದ ಸಕಲ ಸಿದ್ಧತೆ, ಭದ್ರತೆ ಕೈಗೊಳ್ಳಲಾಗುತ್ತಿದೆ. ದೇಶ, ವಿದೇಶಗಳ ಗಣ್ಯರು ದೆಹಲಿಗೆ ಆಗಮಿಸಲಿದ್ದಾರೆ. ಇದಕ್ಕಾಗಿ ದೆಹಲಿಯಲ್ಲಿ ಟ್ರಾವೆಲ್‌ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡ ಏರ್‌ ಇಂಡಿಯಾ ಹಾಗೂ ವಿಸ್ತಾರ ವಿಮಾನಯಾನ (Vistara Airlines News) ಸಂಸ್ಥೆಗಳು ದೆಹಲಿಗೆ ಆಗಮಿಸುವವರ ಟಿಕೆಟ್‌ ಮನ್ನಾ ಮಾಡುವುದಾಗಿ ಘೋಷಿಸಿದೆ.

ಸೆಪ್ಟೆಂಬರ್‌ 9 ಹಾಗೂ 10ರಂದು ದೆಹಲಿಯಲ್ಲಿ ಅದ್ಧೂರಿಯಾಗಿ ಜಿ 20 ಶೃಂಗಸಭೆ ನಡೆಯಲಿದೆ. ಹಾಗಾಗಿ, ಸೆಪ್ಟೆಂಬರ್‌ 7ರಿಂದ ಸೆಪ್ಟೆಂಬರ್‌ 11ರ ಅವಧಿಯಲ್ಲಿ ಟಿಕೆಟ್‌ ಬುಕ್‌ ಮಾಡಿದವರು ಬೇರೆ ದಿನಾಂಕದಂದು ತೆರಳಲು ನಿರ್ಧರಿಸಿದರೆ, ಅವರಿಗೆ ಟಿಕೆಟ್‌ ಶುಲ್ಕವಿರುವುದಿಲ್ಲ ಎಂದು ವಿಮಾನಯಾನ ಸಂಸ್ಥೆಗಳು ಘೋಷಿಸಿವೆ. ಆ ಮೂಲಕ ಜಿ 20 ಶೃಂಗಸಭೆ ಹಿನ್ನೆಲೆಯಲ್ಲಿ ವಿಧಿಸಿದ ನಿರ್ಬಂಧಗಳನ್ನು ಪಾಲಿಸಲು ತೀರ್ಮಾನಿಸಿವೆ.

ಏರ್‌ ಇಂಡಿಯಾ ಪ್ರಕಟಣೆ

“ಜಿ20 ಶೃಂಗಸಭೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ 7ರಿಂದ ಸೆಪ್ಟೆಂಬರ್‌ 11ರ ಅವಧಿಯಲ್ಲಿ ದೆಹಲಿಗೆ ಆಗಮಿಸುವವರ ಸಂಖ್ಯೆ ಜಾಸ್ತಿ ಇರುವ ಕಾರಣ ಟ್ರಾವೆಲ್‌ ನಿರ್ಬಂಧಗಳನ್ನು ವಿಧಿಸಲಾಗಿದೆ. ಹಾಗಾಗಿ, ಎಲ್ಲ ವಿಮಾನಗಳ ಸಂಚಾರ ಕಷ್ಟವಾಗುತ್ತದೆ. ಈಗಾಗಲೇ ಟಿಕೆಟ್‌ ಬುಕ್‌ ಮಾಡಿದವರು ಪ್ರಯಾಣದ ದಿನಾಂಕ ಅಥವಾ ವಿಮಾನವನ್ನು ಬದಲಾಯಿಸಿದರೆ ಅವರ ಟಿಕೆಟ್‌ ಶುಲ್ಕ ಮನ್ನಾ ಮಾಡಲಾಗುತ್ತದೆ” ಎಂದು ವಿಸ್ತಾರ ಏರ್‌ಲೈನ್ಸ್‌ ಪ್ರಕಟಣೆ ತಿಳಿಸಿದೆ.

ವಿಸ್ತಾರ ಏರ್‌ಲೈನ್ಸ್‌ ಪ್ರಕಟಣೆ

ಇದನ್ನೂ ಓದಿ: Vistara Airlines news: ವೈದ್ಯರ ಪ್ರಯತ್ನದಿಂದಾಗಿ ವಿಸ್ತಾರ ವಿಮಾನದಲ್ಲಿ ಬದುಕುಳಿದಿದ್ದ ಮಗು ಕೊನೆಗೂ ಉಸಿರು ಚೆಲ್ಲಿತು!

“ವಿಮಾನಗಳ ಸಂಖ್ಯೆ ಕಡಿಮೆ ಮಾಡಿರುವುದರಿಂದ ಪ್ರಯಾಣಿಕರು ಮೊದಲು ವೆಬ್‌ಸೈಟ್‌ಗೆ ಹೋಗಿ ವಿಮಾನಗಳ ಲಭ್ಯತೆ ಬಗ್ಗೆ ದೃಢಪಡಿಸಿಕೊಳ್ಳಬೇಕು. ಯಾವುದೇ ರೀತಿಯ ಪ್ರಶ್ನೆ, ಗೊಂದಲಗಳಿಗೆ +91 124-2641407 / +91 20-26231407 ಸಂಪರ್ಕಿಸಿ” ಎಂದು ತಿಳಿಸಿದೆ. ಮತ್ತೊಂದೆಡೆ, ಸ್ಪೈಸ್‌ಜೆಟ್‌ ಏರ್‌ಲೈನ್ಸ್‌ ಕೂಡ ಪ್ರಯಾಣಿಕರು ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದೆ.

Exit mobile version