Site icon Vistara News

Air India: ಒಬ್ಬಂಟಿ ಮಹಿಳಾ ಪ್ರಯಾಣಿಕರಿಗೆ ಏರ್‌ ಇಂಡಿಯಾ ವಿಮಾನದಲ್ಲಿ ಪರ್ಯಾಯ ಆಸನ ವ್ಯವಸ್ಥೆ!

Air India will provide alternative seating for solo females and Check details

ನವದೆಹಲಿ: ಒಬ್ಬಂಟಿ ಮಹಿಳಾ ಪ್ರಯಾಣಿಕರಿಗೆ (Solo Female Traveller) ಸೀಟ್ ಹಂಚಿಕೆಯಲ್ಲಿ ಅನುಕೂಲ ಕಲ್ಪಿಸಲು ಏರ್ ಇಂಡಿಯಾ ಮುಂದಾಗಿದೆ. ಒಬ್ಬಂಟಿಯಾಗಿ ಪ್ರಯಾಣಿಸುವ ಮಹಿಳೆಯರು ಮತ್ತು ತಾಯಂದಿರಿಗೆ ವಿಮಾನಗಳಲ್ಲಿ ಪರ್ಯಾಯ ಆಸನಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಏರ್ ಇಂಡಿಯಾ (Air India) ಒದಗಿಸಲು ಮುಂದಾಗಿದೆ. ಅಂಥ ಪ್ರಯಾಣಿಕರಿಗೆ ಅನುಕೂಲಕ್ಕೆ ಹಜಾರ ಅಥವಾ ಕಿಟಕಿ ಆಸನವನ್ನು ನೀಡಬೇಕು ಎಂದು ವಿಮಾನಯಾನ ಸಂಸ್ಥೆ ಹೇಳಿದೆ. ಆಚೆ ಈಚೆ ಇಬ್ಬರು ಪುರುಷರು ಇರುವ ಮಧ್ಯದ ಸೀಟಿನಲ್ಲಿ ಪ್ರಯಾಣಿಸಲು ಒಬ್ಬಂಟಿ ಮಹಿಳೆಯರು ತೀವ್ರ ಮುಜುಗರಪಡುತ್ತಾರೆ. ಹಾಗಾಗಿ, ಅವರು ಸೀಟು ಆಯ್ಕೆಯ (alternative seating) ಅವಕಾಶ ನೀಡಲಾಗುತ್ತಿದೆ.

ನಮ್ಮೊಂದಿಗೆ ಪ್ರಯಾಣಿಸುವ ಮಹಿಳಾ ಅತಿಥಿಗಳಿಗೆ ಆರಾಮದಾಯಕವಾದ ವಿಮಾನ ಸೀಟು ಆಯ್ಕೆ ಖಚಿತಪಡಿಸಿಕೊಳ್ಳಲು, ನಾವು ಒಂದು ಕಂಪನಿಯಾಗಿ ಲಿಂಗ-ಸೂಕ್ಷ್ಮ ಆಸನ ನಿಯೋಜನೆ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಸುತ್ತೋಲೆಯನ್ನು ಹೊರಡಿಸಲಾಗಿದೆ ಎಂದು ಅಕ್ಟೋಬರ್ 3ರ ಆಂತರಿಕ ಸಂವಹನದಲ್ಲಿ ತಿಳಿಸಲಾಗಿದೆ. ಅಲ್ಲದೇ, ಒಬ್ಬಂಟಿಯಾಗಿ ಪ್ರಯಾಣಿಸುವ ಮಕ್ಕಳಿಗೆ ಈ ಆಯ್ಕೆಯನ್ನು ವಿಮಾನ ಸಿಬ್ಬಂದಿಯನ್ನು ಒದಗಿಸಬೇಕಾಗುತ್ತದೆ ಎಂದು ತಿಳಿಸಿದೆ.

ಒಬ್ಬಂಟಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ಮಧ್ಯದ ಸೀಟ್ ದೊರೆತಾಗ ಅವರಿಗೆ ಅನಾನುಕೂಲವಾಗುತ್ತದೆ. ಮುಜುಗರವಾಗುತ್ತದೆ ಎಂಬ ಸಂಗತಿಯನ್ನು ಏರ್ ಇಂಡಿಯಾ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಲಿಂಗ-ಸೂಕ್ಷ್ಮ ಅಳವಡಿಕೆ ಪದ್ಧತಿಯನ್ನು ಜಾರಿಗೊಳಿಸಲು ಮುಂದಾಗಿದ್ದೇವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Air India: ವಿಮಾನದಲ್ಲಿ ಕಾಲು ಮೇಲೆ ಬಿಸಿ ನೀರು ಚೆಲ್ಲಿದರು! ಸಹಾಯ ಮಾಡದೇ ಸುಮ್ಮನಿದ್ದ ಸಿಬ್ಬಂದಿ

ಕಿಟಕಿ ಮತ್ತು ಹಜಾರದ ಎರಡೂ ಸೀಟುಗಳನ್ನು ಪುರುಷ ಪ್ರಯಾಣಿಕರು ಪಡೆದುಕೊಂಡಿದ್ದರೆ, ಒಬ್ಬಂಟಿಯಾಗಿರುವ ಮಹಿಳಾ ಪ್ರಯಾಣಿಕರಿಗೆ ಯಾವುದೇ ಮಧ್ಯದ ಸೀಟುಗಳನ್ನು ಒದಗಿಸಿದಂತೆ ಸಂಬಂಧಿಸಿದ ವಿಭಾಗಕ್ಕೆ ಕೇಳಿದ್ದೇವೆ ಎಂದು ಈ ಎಲ್ಲ ಬೆಳವಣಿಗೆಗಳ ಬಗ್ಗೆ ಮಾಹಿತಿ ಇರುವ ಜನರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಸಂಸ್ಥೆಯ ಈ ಕ್ರಮ ವಿಮಾನ ಸಿಬ್ಬಂದಿಗೆ ಅಷ್ಟೇನೂ ಖುಷಿ ನೀಡಿಲ್ಲ.

ಪ್ರತಿ ವಿಮಾನದಲ್ಲಿ ಶೇ.10ರಷ್ಟು ಒಬ್ಬಂಟಿ ಮಹಿಳಾ ಪ್ರಯಾಣಿಕರು ಇರುತ್ತಾರೆ. ಹಾಗಾಗಿ, ಎಲ್ಲರಿಗೂ ಪರ್ಯಾಯ ಆಸನ ವ್ಯವಸ್ಥೆ ಮಾಡುವುದು ಕಷ್ಟಕರ. ಸಂಸ್ಥೆಯು ನಿರ್ದೇಶನವು ಅಂಥ ಪರಿಣಾಮಕಾರಿಯಲ್ಲ ಎಂದು ಏರ್‌ಲೈನ್ ಉದ್ಯೋಗಿಯೊಬ್ಬರು ಹೇಳಿದ್ದಾರೆ. ಈ ರೀತಿಯ ನಿರ್ದೇಶನ ನೀಡುವುದರ ಬದಲಿಗೆ, ಟಿಕೆಟ್ ಬುಕ್ಕಿಂಗ್ ಹಂತದಲ್ಲೇ ಈ ವ್ಯವಸ್ಥೆಯನ್ನು ಜಾರಿಗೆ ತಂದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇಲ್ಲದೇ ಗೊಂದಲಕ್ಕೆ ಕಾರಣವಾಗುತ್ತದೆ ಎಂದು ವಿಮಾನಯಾನ ವಲಯದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version