ನವದೆಹಲಿ: ಭಾರತೀಯ ವಾಯುಪಡೆಯ ನೂತನ ಉಪ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಎ.ಪಿ.ಸಿಂಗ್ (Air Marshal AP Singh) ಅವರು ನೇಮಕಗೊಂಡಿದ್ದಾರೆ. ಏರ್ ಮಾರ್ಷಲ್ ಸಂದೀಪ್ ಸಿಂಗ್ ಅವರು ಮಂಗಳವಾರ (ಜನವರಿ 31) ನಿವೃತ್ತರಾಗುತ್ತಿರುವ ಕಾರಣ ಅವರ ಹುದ್ದೆಗೆ ಎ.ಪಿ.ಸಿಂಗ್ ಅವರನ್ನು ನೇಮಿಸಲಾಗಿದೆ.
ಎ.ಪಿ. ಸಿಂಗ್ ಅವರು ಸದ್ಯ ಸೆಂಟ್ರಲ್ ಏರ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿದ್ದಾರೆ. ಎ.ಪಿ.ಸಿಂಗ್ ಅವರು ಬುಧವಾರ (ಫೆಬ್ರವರಿ 1) ರಂದು ವಾಯುಪಡೆಯ ಉಪ ಮುಖ್ಯಸ್ಥರಾಗಿ ಪದಗ್ರಹಣ ಮಾಡಲಿದ್ದಾರೆ. 1984ರ ಡಿಸೆಂಬರ್‌ನಲ್ಲಿ ವಾಯುಪಡೆಗೆ ಸೇರ್ಪಡೆಯಾದ ಸಿಂಗ್, ಇದುವರೆಗೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಇದನ್ನೂ ಓದಿ: High Court : ಕರ್ನಾಟಕ ಹೈಕೋರ್ಟ್‌ಗೆ ಇಬ್ಬರು ನ್ಯಾಯಮೂರ್ತಿಗಳ ನೇಮಕ
ಕ್ವಾಲಿಫೈಡ್ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್ ಹಾಗೂ ಎಕ್ಸ್‌ಪೆರಿಮೆಂಟಲ್ ಟೆಸ್ಟ್ ಪೈಲಟ್ ಆಗಿ ಸುಮಾರು 4,900 ತಾಸು ಯುದ್ಧವಿಮಾನವನ್ನು ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ. ಅಲ್ಲದೆ, ಮಿಗ್ 29 ಅಪ್‌ಗ್ರೇಡ್ ಯೋಜನಾ ನಿರ್ಹವಣೆ ತಂಡವನ್ನು ಇವರು ಮುನ್ನಡೆಸಿದ್ದರು.