ಹೊಸದಿಲ್ಲಿ: ವಾಯು ಮಾಲಿನ್ಯ ದೇಶದಲ್ಲಿ silent killer ಆಗಿ ಕ್ರೌರ್ಯ ಮೆರೆಯುತ್ತಿದೆ. 2019ರಲ್ಲಿ ಭಾರತದಲ್ಲಿ 23 ಲಕ್ಷ ಮಂದಿ ವಾಯು ಮಾಲಿನ್ಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವುದು ಇದಕ್ಕೆ ನಿದರ್ಶನ. ನಿಜವೆಂದರೆ ಇಡೀ ಜಗತ್ತಿನಲ್ಲಿ ಮಾಲಿನ್ಯದ ಕಾರಣಕ್ಕೆ ಮೃತಪಟ್ಟವರ ಸಂಖ್ಯೆ 90 ಲಕ್ಷ. ಅಂದರೆ, ವಿಶ್ವಾದ್ಯಂತ ಈ ರೀತಿ ಮಾಲಿನ್ಯದಿಂದ 90 ಲಕ್ಷ ಮಂದಿ ಸಾವನ್ನಪ್ಪಿದ್ದು, ಭಾರತದಲ್ಲಿ ಇಂತಹ ಸಾವುಗಳ ಪ್ರಮಾಣ ಜಾಗತಿಕ ಅಂಕಿ-ಅಂಶದ ನಾಲ್ಕನೇ ಒಂದು ಭಾಗದಷ್ಟಿದೆ ಎಂದು ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್‌ನಲ್ಲಿ ಪ್ರಕಟವಾದ ಮಾಲಿನ್ಯ ಮತ್ತು ಆರೋಗ್ಯದ ಲ್ಯಾನ್ಸೆಟ್ ಆಯೋಗದ ವರದಿ ತಿಳಿಸಿದೆ.
ವಾತಾವರಣದ ಗಾಳಿ ಮತ್ತು ವಿಷಕಾರಿ ರಾಸಾಯನಿಕ ಸೇರಿದಂತೆ ಆಧುನಿಕ ರೀತಿಯ ಮಾಲಿನ್ಯದಿಂದ ಉಂಟಾಗುವ ಆರ್ಥಿಕ ನಷ್ಟಗಳು ಕಡಿಮೆಯೆಂದರೂ ದೇಶದ ಜಿಡಿಪಿಯ ಶೇ.. 1ರಷ್ಟಿದೆ ಎಂದು ಅದು ಹೇಳಿದೆ.
2019ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯ-ಸಂಬಂಧಿತ ಸಾವುಗಳು ಭಾರತದಲ್ಲಿ ಸಂಭವಿಸಿದೆ ಎಂದು ವರದಿ ಹೇಳುತ್ತದೆ. ಇದು ಚೀನಾದಲ್ಲಿ ಸುಮಾರು 22 ಲಕ್ಷ ಸಾವುಗಳು ಸಂಭವಿಸಿದ್ದವು. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಲ್ಲಿ ಸೂಚಿಸಿದ್ದ ಶೇ 93ರ ಪ್ರಮಾಣಕ್ಕಿಂತ ಅಧಿಕ ವಾಯುಮಾಲಿನ್ಯ ಭಾರತದಲ್ಲಿ ಉಂಟಾಗಿದೆ. ವಸತಿ ಮಾಲಿನ್ಯ ಮತ್ತು ಇತರ ಮಾಲಿನ್ಯಗಳನ್ನು ತಗ್ಗಿಸುವ ನಿಟ್ಟಿನಲ್ಲಿ ನಿಗಾವಣೆ ಮತ್ತು ಯೋಜನೆಗಾಗಿ ಭಾರತ ಸರಕಾರ ಗಣನೀಯ ಪ್ರಮಾಣದ ಹೂಡಿಕೆಗಳನ್ನು ಮಾಡಿದ್ದರೂ, ಮಾಲಿನ್ಯದಿಂದ ಆಗುವ ಸಾವಿನ ಸಂಖ್ಯೆಗಳನ್ನು ತಗ್ಗಿಸಲು ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ..
ಜಾಗತಿಕವಾಗಿ, 2015ರಂತೆಯೇ 2019ರಲ್ಲೂ ಮಾಲಿನ್ಯದಿಂದ 90 ಲಕ್ಷ ಸಾವುಗಳು ಸಂಭವಿಸಿವೆ. ಎಲ್ಲಾ ಬಗೆಯ ಸಾವುಗಳಿಗೆ ಕಾರಣವಾದ ಅಂಶಗಳಲ್ಲಿ ಶೇ. 75ರಷ್ಟು ಪಾಲು ವಾತಾವರಣದ ವಾಯು ಮಾಲಿನ್ಯದ್ದೇ ಆಗಿದೆ. ಚೀನಾದಲ್ಲಿ ಅತಿ ಹೆಚ್ಚು -ಅಂದರೆ- 18 ಲಕ್ಷ ಸಾವುಗಳು ಸಂಭವಿಸಿವೆ. ಜಾಗತಿಕವಾಗಿ 1.8 ಮಿಲಿಯನ್‌ಗಿಂತಲೂ ಹೆಚ್ಚು ಸಾವುಗಳು ವಿಷಕಾರಿ ರಾಸಾಯನಿಕ ಮಾಲಿನ್ಯದಿಂದ (ಸೀಸವನ್ನು ಒಳಗೊಂಡಂತೆ) ಉಂಟಾಗಿವೆ. 2000ನೆ ಇಸವಿಯಿಂದೀಚೆಗೆ ಈ ಪ್ರಮಾಣ 66% ರಷ್ಟು ಹೆಚ್ಚಳವಾಗಿದೆ.
ತೀವ್ರವಾದ ಬಡತನದೊಂದಿಗೆ ತಳುಕು ಹಾಕಿಕೊಂಡಿರುವ (ಒಳಾಂಗಣ ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯದಂತಹ) ಮಾಲಿನ್ಯದ ಮೂಲಗಳಿಂದ ಸಾವಿನ ಸಂಖ್ಯೆಯು ಕಡಿಮೆಯಾಗಿದೆ. ಆದರೆ ಕೈಗಾರಿಕಾ ಮಾಲಿನ್ಯಗಳಿಂದ (ವಾತಾವರಣದ ವಾಯು ಮಾಲಿನ್ಯ ಮತ್ತು ರಾಸಾಯನಿಕ ಮಾಲಿನ್ಯ) ಸಾವಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಒಟ್ಟಾರೆಯಾಗಿ ಮಾಲಿನ್ಯದಿಂದ ಉಂಟಾಗುವ ಸಾವಿನ ಪ್ರಮಾಣ ಏರುಗತಿಯಲ್ಲೇ ಇದೆ ಎಂದು ಪರಿಗಣಿಸಲಾಗಿದೆ.
ಜಗತ್ತಿನಾದ್ಯಂತ ಎಲ್ಲ ಬಗೆಯ ರೋಗಗಳು, ಕಾಯಿಲೆಗಳು ಮತ್ತು ಅಕಾಲಿಕ ಮರಣಗಳಿಗೆ ಮಾಲಿನ್ಯವೇ ಅತಿದೊಡ್ಡ ಕಾರಣವಾಗಿ ನಿಲ್ಲುತ್ತದೆ. ವಿಶೇಷವಾಗಿ, ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳ ಮೇಲೆ ಈ ಮಾಲಿನ್ಯವೆಂಬ ಪೆಡಂಭೂತ ಭಾರೀ ದುಷ್ಪರಿಣಾಮ ಬೀರುತ್ತಿದೆ.
ಮಾಲಿನ್ಯ ಮತ್ತು ಆರೋಗ್ಯದ ಕುರಿತು ಲ್ಯಾನ್ಸೆಟ್ ಆಯೋಗದ 2017ರ ವರದಿಯ ಪರಿಷ್ಕೃತ ಆವೃತ್ತಿ ಈ ನೂತನ ವರದಿಯಲ್ಲಿದೆ. ಇದು ಮನುಕುಲ ಮತ್ತು ಭೂ ಗ್ರಹದ ಮೇಲೆ ಗಾಳಿ, ನೀರು ಮತ್ತು ಮಣ್ಣಿನ ಮಾಲಿನ್ಯದಿಂದ ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಉಂಟಾಗುವ ವಿನಾಶಕಾರಿ ಪರಿಣಾಮವನ್ನು ವಿವರಿಸುತ್ತದೆ.
ಪರಿಷ್ಕೃತ ವರದಿಯಲ್ಲಿ, ಜಾಗತಿಕ ಲೆಕ್ಕಾಚಾರಗಳನ್ನು ಪುನರಾವರ್ತಿಸುವ ಬದಲು, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಹೊಸ ಬಗೆಯ ವಿಂಗಡಣೆಗಳನ್ನು ಲ್ಯಾನ್ಸೆಟ್ ಆಯೋಗ ಮಾಡಿದೆ. ಅವುಗಳೆಂದರೆ:
ಜಾಗತಿಕವಾಗಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡು ದೇಶಗಳಾದ ಭಾರತ ಮತ್ತು ಚೀನಾ, ಆಫ್ರಿಕಾ ಖಂಡದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನೈಜೀರಿಯಾ ಮತ್ತು ಇಥಿಯೋಪಿಯಾ, ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಅಮೆರಿಕ, ಮತ್ತು ಸದಸ್ಯ ರಾಷ್ಟ್ರಗಳ ಪೈಕಿ ದೊಡ್ಡ ಆರ್ಥಿಕ ಘಟಕವಾಗಿರುವ ಐರೋಪ್ಯ ಒಕ್ಕೂಟ. (ಇವು ಸಾಮಾನ್ಯ ಮಾಲಿನ್ಯ ಮಾನದಂಡಗಳನ್ನು ಹೊಂದಿವೆ).
ಶಬ್ದ ಮಾಲಿನ್ಯ ನಿಯಂತ್ರಣ ಕಾನೂನಿನ ಕಟ್ಟುನಿಟ್ಟಿನ ಜಾರಿಗೆ ಕ್ರಮ: ಆರಗ ಜ್ಞಾನೇಂದ್ರ
“ಭಾರತ, ಚೀನಾ ಮತ್ತು ನೈಜೀರಿಯಾದಲ್ಲಿ 2000 ಮತ್ತು 2019ರ ನಡುವೆ ಆಧುನಿಕ ಮಾಲಿನ್ಯದ ಕಾರಣದಿಂದ ಸಂಭವಿಸಿದ ಆರ್ಥಿಕ ನಷ್ಟಗಳು ಜಿಡಿಪಿ ಅನುಪಾತದಲ್ಲಿ ಹೆಚ್ಚಾಗಿವೆ ಮತ್ತು ಪ್ರಸ್ತುತ ಪ್ರತಿಯೊಂದು ದೇಶಗಳಲ್ಲೂ ಜಿಡಿಪಿಯ ಸರಿಸುಮಾರು 1% ರಷ್ಟಿದೆ ಎಂದು ಅಂದಾಜಿಸಲಾಗಿದೆ.
ಭಾರತವು ಮಾಲಿನ್ಯ ಮೂಲಗಳನ್ನು ತಗ್ಗಿಸಲು ಸೂಕ್ತ ಉಪಕರಣಗಳು ಮತ್ತು ನಿಯಂತ್ರಣ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದೆ. ಆದರೆ ಮಾಲಿನ್ಯ ನಿಯಂತ್ರಣ ಪ್ರಯತ್ನಗಳನ್ನು ಮುಂದಕ್ಕೆ ಒಯ್ಯಲು ಮತ್ತು ಗಣನೀಯ ಸುಧಾರಣೆಗಳನ್ನು ಸಾಧಿಸಲು ಯಾವುದೇ ಕೇಂದ್ರೀಕೃತ ವ್ಯವಸ್ಥೆಯನ್ನು ಹೊಂದಿಲ್ಲ. ಭಾರತದ ಶೇ. 93ರ ಪೈಕಿ ಮಾಲಿನ್ಯದ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಮೀರಿದೆ ಎಂದು ವರದಿ ತಿಳಿಸಿದೆ.
ಶಬ್ದಮಾಲಿನ್ಯ ಮಾಡುವವರ ಮೇಲೆ ಕೇಸ್ ಹಾಕಿ: ಅಧಿಕಾರಿಗಳಿಗೆ ಡಿಜಿ-ಐಜಿಪಿ ಖಡಕ್ ಸೂಚನೆ