ನವ ದೆಹಲಿ: ದೇಶದೊಳಗೆ ಯಾವುದೇ ಚೆಕ್ -ಇನ್ ಬ್ಯಾಗೇಜ್ (No check-In Baggage) ಇಲ್ಲದೆಯೇ ನೀವು ವಿಮಾನ ಪ್ರಯಾಣ ಮಾಡುವುದಿದ್ದರೆ ಶೀಘ್ರದಲ್ಲಿಯೇ ಏರ್ ಟಿಕೆಟ್ ದರ ಅಗ್ಗವಾಗುವ ಸಾಧ್ಯತೆ ಇದೆ. ಏಕೆಂದರೆ ಏರ್‌ಲೈನ್‌ಗಳು ಕೇವಲ ಕೈಯಲ್ಲೇ ತೆಗೆದುಕೊಂಡು ಹೋಗಬಹುದಾದ ಒಂದು ಸಾಮಾನ್ಯ ಲಗ್ಗೇಜ್ (ಕೈಚೀಲ, ಸಣ್ಣ ಬ್ಯಾಗ್) ಮಾತ್ರ ಹೊಂದಿದ್ದರೆ ಅಂಥ ಪ್ರಯಾಣಕ್ಕೆ ಏರ್ ಟಿಕೆಟ್ ದರದಲ್ಲಿ ಕೂಡ ವಿಶೇಷ ಡಿಸ್ಕೌಂಟ್ ನೀಡಲು ನಿರ್ಧರಿಸಿವೆ.
ದೇಶೀಯವಾಗಿ ಯಾವ ಮಾರ್ಗಗಳಲ್ಲಿ ಇಂಥ ಆಫರ್‌ಗಳನ್ನು ನೀಡಬಹುದು ಎಂಬುದನ್ನು ಏರ್‌ಲೈನ್‌ಗಳು ಪರಿಶೀಲಿಸುತ್ತಿವೆ. ಹೀಗಾಗಿ ಕೇವಲ ಒಂದು ಕ್ಯಾಬಿನ್ ಬ್ಯಾಗ್‌ನಲ್ಲಿ ಪ್ರಯಾಣಿಸುವವರಿಗೆ ಟಿಕೆಟ್ ದರ ಕೂಡ ಅಗ್ಗವಾಗುವ ನಿರೀಕ್ಷೆ ಉಂಟಾಗಿದೆ. ಇದರಿಂದ ಆಗಾಗ್ಗೆ ಪ್ರಯಾಣ ಮಾಡುವ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು, ಹಿರಿಯ ಅಧಿಕಾರಿಗಳಿಗೆ ಅನುಕೂಲವಾಗಲಿದೆ.
ಪ್ರಸ್ತುತ 7 ಕಿಲೋ ಗ್ರಾಮ್ ತನಕ ಭಾರವಿರುವ ಬ್ಯಾಗ್ ಅಥವಾ ಕೈಚೀಲವನ್ನು ಚೆಕ್-ಇನ್ ಬ್ಯಾಗೇಜ್ ರಹಿತವಾಗಿ ತೆಗೆದುಕೊಂಡು ಹೋಗಬಹುದು. 15 ಕೆಜಿ ಭಾರತದ ತನಕ ಚೆಕ್ -ಇನ್ ಬ್ಯಾಗೇಜ್ ಪ್ರಕ್ರಿಯೆ ಮೂಲ ಸಾಗಿಸಬಹುದು. ಆರೆ ಅದಕ್ಕಿಂತ ಹೆಚ್ಚು ತೂಕವಿದ್ದರೆ ಅದಕ್ಕೆ ಹೆಚ್ಚುವರಿ ಶುಲ್ಕ ನೀಡಬೇಕಾಗುತ್ತದೆ. ಈ ಹಿಂದೆ ಏರ್‌ಲೈನ್‌ಗಳು 2017ರಲ್ಲಿ ಇಂಥ ಆಫರ್ ನೀಡಲು ಮುಂದಾಗಿದ್ದರೂ, ಡಿಜಿಸಿಎ ತಿರಸ್ಕರಿಸಿತ್ತು.