Site icon Vistara News

Opposition Unity : ಸೋನಿಯಾ, ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ

Rahul

ಭೋಪಾಲ್: ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನವು ಮಧ್ಯಪ್ರದೇಶದ ಭೋಪಾಲ್​​ನಲ್ಲಿ ಮಂಗಳವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿದೆ. ಭೋಪಾಲ್ ಪೊಲೀಸರ ಪ್ರಕಾರ ಪ್ರತಿಕೂಲ ಹವಾಮಾನದಿಂದಾಗಿ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡಿಂಗ್​ ಮಾಡಲಾಯಿತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನವು ಭೋಪಾಲ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ” ಎಂದು ಪೊಲೀಸರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಕೆಲವು ಗಂಟೆಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಭಾಗವಹಿಸಿದ್ದರು. “ತುರ್ತು ಲ್ಯಾಂಡಿಂಗ್ ಬಗ್ಗೆ ಮಾಹಿತಿ ಪಡೆದ ನಂತರ ನಾವು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದೇವೆ” ಎಂದು ಹಿರಿಯ ಕಾಂಗ್ರೆಸ್ ನಾಯಕಿ ಶೋಭಾ ಓಜಾ ಹೇಳಿದ್ದಾರೆ.

NDA vs INDIA : ಮಿತ್ರ ಕೂಟಕ್ಕೆ INDIA ಹೆಸರಿಟ್ಟಿದ್ದು ಯಾರು? ಚುನಾವಣಾ ಚಾಣಕ್ಯರಲ್ಲ, ಒಬ್ಬ ಮಹಿಳಾ ಲೀಡರ್‌!

ಬೆಂಗಳೂರು: ದೇಶದ ವಿಪಕ್ಷಗಳ ಒಕ್ಕೂಟಕ್ಕೆ UPA ಬದಲು INDIA ಎಂಬ ಹೆಸರನ್ನು ಆಯ್ಕೆ ಮಾಡುವ ಮೂಲಕ ದೊಡ್ಡ ಟ್ವಿಸ್ಟ್‌ ನೀಡಲಾಗಿದೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ 26 ಪಕ್ಷಗಳ 49 ನಾಯಕರ ಸಭೆಯಲ್ಲಿ (Opposition Meet) ಹೆಸರು ಬದಲಾವಣೆಯೂ ಒಂದು ಪ್ರಮುಖ ಅಜೆಂಡಾ ಆಗಿತ್ತು. ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಮಿತ್ರ ಕೂಟಕ್ಕೆ INDIA ಎಂಬ ಹೆಸರು ಇಟ್ಟಿರುವುದಾಗಿ ಪ್ರಕಟಿಸಿದರು.

ಇದನ್ನೂ ಓದಿ : NDA vs INDIA: ಕಾಂಗ್ರೆಸ್‌ ಜತೆಗಿನ ಪಕ್ಷಗಳನ್ನು ʼತುಂಡರಸರುʼ ಎಂದ ಬಿಜೆಪಿ: ಈಸ್ಟ್‌ INDIAಗೆ ಹೋಲಿಕೆ!

ಕೇಂದ್ರದಲ್ಲಿ ಅಧಿಕಾರದಲ್ಲಿರುವ ನ್ಯಾಷನಲ್‌ ಡೆಮಾಕ್ರಟಿಕ್‌ ಅಲಯನ್ಸ್‌ (NDA) ಅನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ವಿರೋಧ ಪಕ್ಷಗಳು ಒಂದಾಗಿ ರೂಪಿಸಿದ ಕಾರ್ಯತಂತ್ರದಲ್ಲಿ INDIA ಎಂಬ ಹೆಸರಿನ ಆಯ್ಕೆಯೂ ಒಂದು ದೊಡ್ಡ ಯಶಸ್ಸು ಎಂದು ಆ ಪಕ್ಷಗಳು ಸಂಭ್ರಮಿಸಿವೆ.

ಇಂಡಿಯಾ ಎಂಬ ಹೆಸರನ್ನು ಇಟ್ಟುಕೊಂಡು ದೇಶ ಭಕ್ತಿಗೆ ತಮ್ಮ ಮೊದಲ ಆದ್ಯತೆ ಎನ್ನುವುದನ್ನು ಮಿತ್ರ ಕೂಟ ಘೋಷಿಸಿದೆ. ಜತೆಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪ್ರದರ್ಶಿಸುವ ಟೆಕ್ನಿಕಲ್‌ ಬುದ್ಧಿವಂತಿಕೆಯನ್ನೇ ಕಾಂಗ್ರೆಸ್‌ ಪ್ರದರ್ಶಿಸಿದೆ ಎಂದು ವಿಶ್ಲೇಷಿಸಲಾಗಿದೆ.

INDIA ಎನ್ನುವ ಹೆಸರು ಇಟ್ಟದ್ದು ಯಾರು?

ಇಂಡಿಯಾ ಎನ್ನುವ ಹೆಸರು ಇಡುವ ಮೂಲಕ ಮಿತ್ರ ಪಕ್ಷಗಳ ನಡೆ ಭಾರಿ ಚರ್ಚೆಯನ್ನು, ಕುತೂಹಲವನ್ನು ಹುಟ್ಟುಹಾಕಿದೆ. Indian National Developmental Inclusive Alliance ಎಂಬ ಇಂಗ್ಲಿಷ್‌ ಪದಪುಂಜದ ಹೃಸ್ವರೂಪವಾಗಿರುವ INDIA ಎಂಬ ಪದವನ್ನು ಕ್ರಿಯೇಟ್‌ ಮಾಡಿದ್ದು ಯಾರು ಎನ್ನುವ ಕುತೂಹಲ ಎಲ್ಲ ಕಡೆ ಇದೆ.

ಕೆಲವು ಮೂಲಗಳ ಪ್ರಕಾರ, ರಾಜಕೀಯ ಕಾರ್ಯತಂತ್ರ ನಿಪುಣರು ಈ ಶಬ್ದವನ್ನು ಸೃಷ್ಟಿಸಿದ್ದಾರೆ ಎಂದು ಹೇಳಲಾಗಿತ್ತು. NDAಗೆ ಪ್ರತಿಯಾಗಿ INDIAವನ್ನು ಸೃಷ್ಟಿಸಲಾಗಿದೆ. INDIA ಎನ್ನುವ ಮೂಲಕ ನಮ್ಮದೇ ನಿಜವಾದ ಭಾರತ, ನೀವು ಪ್ರತಿನಿಧಿಸುವ ಭಾರತವಲ್ಲ ಎಂಬ ಸಂದೇಶವನ್ನು ನರೇಂದ್ರ ಮೋದಿ ಅವರಿಗೆ ರವಾನಿಸುವ ಪ್ರಯತ್ನ ಎಂದು ಹೇಳಲಾಗಿತ್ತು. ದೇಶ ನಮ್ಮದು ಇಂಡಿಯಾ ನಮ್ಮದು ಎನ್ನುವ ಸಂದೇಶವೂ ಇದರಲ್ಲಿ ಅಡಗಿದೆ ಎಂದು ಹೇಳಲಾಗಿತ್ತು. ಆದರೆ, ಇದು ಸ್ಟ್ರಾಟಜಿಸ್ಟ್‌ಗಳು ನೀಡಿದ ಹೆಸರಲ್ಲ.

ಯುಪಿಎ ಬದಲು ಹಲವು ಹೆಸರು ಪ್ರಸ್ತಾಪ

ನಿಜವೆಂದರೆ, ಯುಪಿಎ ಎಂಬ ಹೆಸರನ್ನು ಬದಲಾಯಿಸಿ ಹೊಸ ಹೆಸರು ಇಡಬೇಕು ಎಂಬ ಪ್ರಸ್ತಾಪ ಎದುರಾದಾಗ ಹಲವು ಹೆಸರುಗಳು ಕೇಳಿಬಂದಿದ್ದವು.

ಪಿಡಿಎ (ಪ್ರೊಗ್ರೆಸ್ಸಿವ್ ಡೆಮಾಕ್ರಟಿಕ್ ಅಲೈನ್ಸ್)
ಎನ್‌ಪಿಎ (ನ್ಯಾಷನಲ್ ಪ್ರೊಗ್ರೆಸ್ಸಿವ್ ಅಲೈನ್ಸ್)
ಐಡಿಎ (ಇಂಡಿಯಾ ಡೆಮಾಕ್ರಟಿಕ್ ಅಲೈನ್ಸ್ )
ಮತ್ತು ಯುಪಿಎ3 ಎಂಬ ಹೆಸರಿತ್ತು

ಇವೆಲ್ಲವೂ ಹೊರಗಡೆ ಚರ್ಚೆಯಾದ ಹೆಸರುಗಳಲ್ಲ. ಸಭೆಯಲ್ಲೇ ಚರ್ಚೆಯಾದವು. ಒಂದು ಹಂತದಲ್ಲಿ ಸಿಪಿಎಂ ನಾಯಕ ಸೀತಾರಾಮ ಯೆಚೂರಿ ಅವರು ʻವೀ ಫಾರ್‌ ಡೆಮಾಕ್ರಸಿʼ ಎಂಬ ಹೆಸರು ಪ್ರಸ್ತಾಪ ಮಾಡಿದರು. ಎಂಡಿಎಂಕೆಯ ವೈಕೋ ಅವರು ʻಇಂಡಿಯನ್‌ ಪೀಪಲ್ಸ್‌ ಅಲಾಯನ್ಸ್‌ʼ ಎಂಬ ಹೆಸರು ಹೇಳಿದರು.

ಈ ನಡುವೆ, ಟಿಎಂಸಿ ನಾಯಕ ಡೆರಿಕ್‌ ಒಬ್ರಾಯನ್‌ ಅವರು ʻಚಕ್‌ ದೇ ಇಂಡಿಯಾʼ (Chak de India) ಎಂದು ಟ್ವೀಟ್‌ ಮಾಡಿದರು.

ಮಿತ್ರ ಕೂಟಕ್ಕೆ ʻINDIA’ ಹೆಸರಿಟ್ಟಿರಬೇಕು ಎಂದು ಚರ್ಚೆ ಶುರುವಾಯಿತು. ಸ್ವಲ್ಪ ಹೊತ್ತಲ್ಲಿ INDIA ದ ಪೂರ್ಣ ಸ್ವರೂಪವೂ ಬಯಲಾಯಿತು.
Indian
National
Democratic
Inclusive
Alliance ಎಂದು ಚರ್ಚೆಯಾಯಿತು.

ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಕಟಿಸಿದಾಗ Democratic ಜಾಗದಲ್ಲಿ Developmental ಎಂಬ ಶಬ್ದ ಬಂತು.

ಅಂದ ಹಾಗೆ, INDIA ಎಂಬ ಪದವನ್ನು ಕೂಟಕ್ಕೆ ಕೊಡುಗೆಯಾಗಿ ಕೊಟ್ಟಿದ್ದು ಬೇರೆ ಯಾರೂ ಅಲ್ಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು. ಅವರು INDIA ಎಂಬ ಪದವನ್ನು ಸೂಚಿಸಿದಾಗ ಎಲ್ಲರೂ ಇದೇ ಆಗಬಹುದು ಎಂದು ಒಮ್ಮತದಿಂದ ಸಮ್ಮತಿಸಿದರು. ಬಳಿಕ ಅದರ ಒಂದೊಂದು ಅಕ್ಷರಕ್ಕೆ ಏನೇನು ಶಬ್ದ ಇರಬೇಕು ಎನ್ನುವ ಚರ್ಚೆಯಷ್ಟೇ ನಡೆಯಿತು.

Exit mobile version