ನವ ದೆಹಲಿ: ಸಿಂಗಲ್ ಸೀಟರ್ ಟ್ರೇನಿ ವಿಮಾನವೊಂದು ಸೋಮವಾರ ಬೆಳಗ್ಗೆ ೧೧.೩೦ರ ಹೊತ್ತಿಗೆ ಪುಣೆ ಸಮೀಪ ಹೊಲದಲ್ಲಿ ಪತನಗೊಂಡಿದೆ. ವಿಮಾನದ ಕೆಲವು ಭಾಗಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ವಿಮಾನವನ್ನು ಚಲಾಯಿಸುತ್ತಿದ್ದ ೨೨ ವರ್ಷದ ಮಹಿಳಾ ಪೈಲಟ್ ಅಪಾಯದಿಂದ ಪಾರಾಗಿದ್ದಾರೆ. ಪುಣೆ ಜಿಲ್ಲೆಯ ಇಂದಪುರ ತಾಲೂಕಿನ ಕಡಬನವಾಡಿ ಗ್ರಾಮದ ಹೊಲದಲ್ಲಿ ಈ ವಿಮಾನ ಪತನಗೊಂಡಿದೆ.
ಖಾಸಗಿ ವಿಮಾನ ಯಾನ ಶಿಕ್ಷಣ ಸಂಸ್ಥೆಯಾಗಿರುವ ಕಾರ್ವೇರ್ ಏವಿಯೇಷನ್‌ಗೆ ಸೇರಿದ ವಿಮಾನ ಇದಾಗಿದ್ದು, ಪುಣೆಯ ಬಾರಾಮತಿ ವಿಮಾನ ನಿಲ್ದಾಣದಿಂದ ಹಾರಾಟ ಶುರು ಮಾಡಿತ್ತು. ಭಾವನಾ ರಾಥೋಡ್ ಅವರು ಈ ವಿಮಾನ ಚಲಾಯಿಸುತ್ತಿದ್ದು, ಪತನಗೊಂಡ ಹೊಡೆತಕ್ಕೆ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ನವ ದೆಹಲಿ: ಪುಣೆ ಸಮೀಪ ಸಿಂಗಲ್ ಸೀಟರ್ ಟ್ರೇನಿ ವಿಮಾನವೊಂದು ಹೊಲದಲ್ಲಿ ಪತನಗೊಂಡ ಘಟನೆ ಸೋಮವಾರ ಬೆಳಗ್ಗೆ ೧೧.೩೦ರ ಹೊತ್ತಿಗೆ ನಡೆದಿದೆ. ವಿಮಾನವನ್ನು ಚಲಾಯಿಸುತ್ತಿದ್ದ ೨೨ ವರ್ಷದ ಮಹಿಳಾ ಪೈಲಟ್ ಅಪಾಯದಿಂದ ಪಾರಾಗಿದ್ದಾರೆ. ಪುಣೆ ಜಿಲ್ಲೆಯ ಇಂದಪುರ ತಾಲೂಕಿನ ಕಡಬನವಾಡಿ ಗ್ರಾಮದ ಹೊಲದಲ್ಲಿ ಈ ವಿಮಾನ ಪತನಗೊಂಡಿದೆ.
ಖಾಸಗಿ ವಿಮಾನ ಯಾನ ಶಿಕ್ಷಣ ಸಂಸ್ಥೆಯಾಗಿರುವ ಕಾರ್ವೇರ್ ಏವಿಯೇಷನ್‌ಗೆ ಸೇರಿದ ವಿಮಾನ ಇದಾಗಿದ್ದು, ಪುಣೆಯ ಬಾರಾಮತಿ ವಿಮಾನ ನಿಲ್ದಾಣದಿಂದ ಹಾರಾಟ ಶುರು ಮಾಡಿತ್ತು. ಭಾವನಾ ರಾಥೋಡ್ ಅವರು ಈ ವಿಮಾನ ಚಲಾಯಿಸುತ್ತಿದ್ದು, ಪತನಗೊಂಡ ಹೊಡೆತಕ್ಕೆ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಕಾರ್ವೇರ್ ಏವಿಯೇಷನ್ ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಪತನಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಭಾವನಾ ರಾಥೋಡ್ ಎಂಬ ೨೨ ವರ್ಷದ ಪೈಲಟ್ ಈ ವಿಮಾನವನ್ನು ಹಾರಿಸುತ್ತಿದ್ದರು. ವಿಮಾನ ನೆಲಕ್ಕುರುಳಿದ ಹೊಡೆತಕ್ಕೆ ಹಲವು ಭಾಗಗಳು ನಜ್ಜುಗುಜ್ಜಾಗಿವೆ. ಇಷ್ಟಾದರೂ ಭಾವನಾ ಅವರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಏವಿಯೇಷನ್ ಕಾಲೇಜಿನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ವಿಮಾನ ಪತನಕ್ಕೆ ಏನು ಕಾರಣ ಎಂಬುದನ್ನು ಅರಿಯಲು ತನಿಖೆ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Nepal Plane Crash: ನೇಪಾಳ ವಿಮಾನ ಪತನಗೊಂಡ ಸ್ಥಳ ಪತ್ತೆ; 22 ಪ್ರಯಾಣಿಕರ ಸುಳಿವಿಲ್ಲ