ನವ ದೆಹಲಿ: 30 ದಿನಗಳ ವ್ಯಾಲಿಡಿಟಿ ಹೊಂದಿರುವ 199 ರೂ. ಹೊಸ ಪ್ಲ್ಯಾನ್ ಅನ್ನು ಭಾರ್ತಿ ಏರ್‌ಟೆಲ್ ಕಂಪನಿಯು ಲಾಂಚ್ (Airtel Plan) ಮಾಡಿದೆ. ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ಅನಿಯಮಿತ ಕಾಲಿಂಗ್ ಮತ್ತು 3ಜಿಬಿ ಡೇಟಾ ಪಡೆಯುತ್ತಾರೆ. ಈ ರೀತಿಯ 199 ರೂ. ಪ್ರೀಪೇಡ್ ಪ್ಲ್ಯಾನ್ ಅನ್ನು ಇದೇ ಮೊದಲ ಬಾರಿಗೇನೂ ಕಂಪನಿ ಪರಿಚಯಿಸುತ್ತಿಲ್ಲ. ಈ ಹಿಂದೆಯೂ ಇಂಥ ಪ್ಲ್ಯಾನ್ ಗ್ರಾಹಕರಿಗೆ ನೀಡಿದೆ. 2021ರಲ್ಲಿ 199 ರೂ.ಗೆ 24 ದಿನಗಳ ವ್ಯಾಲಿಡಿಟಿ ಪ್ಲ್ಯಾನ್ ಪರಿಚಯಿಸಿತ್ತು.
ಕೆಲವು ವರದಿಗಳ ಪ್ರಕಾರ, ಈ ಮೊದಲು ಜಾರಿಗೆ ತರಲಾಗಿದ್ದ ಪ್ಲ್ಯಾನ್‌ನಲ್ಲಿ ಕಂಪನಿಯು 199 ರೂ.ಗೆ ನಿತ್ಯ 1.5 ಜಿಬಿ ಡೇಟಾ ನೀಡುತ್ತಿತ್ತು. ಈ ಮೂಲಕ ಭಾರ್ತಿ ಏರ್‌ಟೆಲ್ ಕಂಪನಿಯು ಜಿಯೋ ಪ್ಲ್ಯಾನ್‌ಗೆ ಸ್ಪರ್ಧೆಯೊಡ್ಡಿತ್ತು. ಈಗ ಪರಿಚಯಿಸಲಾಗಿರುವ 199 ರೂ. ಪ್ಲ್ಯಾನ್‌ನಲ್ಲಿ ವ್ಯಾಲಿಡಿಟಿ ಅವಧಿಯನ್ನು ಹೆಚ್ಚಿಸಲಾಗಿದೆ. ಆದರೆ ಡೇಟಾವನ್ನು ಮಿತಿಗೊಳಿಸಿದೆ.
ಈಗ ನೀಡಲಾಗುತ್ತಿರುವ 199 ರೂ. ಪ್ಲ್ಯಾನ್‌ನಲ್ಲಿ ಗ್ರಾಹಕರು ಅನ್‌ಲಿಮಿಟೆಡ್ ವಾಯ್ಸ್ ಕಾಲಿಂಗ್, 30 ದಿನಕ್ಕೆ 300 ಎಸ್ಸೆಮ್ಮೆಸ್ ಸೌಲಭ್ಯ ಪಡೆಯಲಿದ್ದಾರೆ. ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮತ್ತು ಫ್ರೀ ಹೆಲೋ ಟ್ಯೂನ್ಸ್, ವ್ಯಾಂಕ್ ಮ್ಯೂಸಿಕ್ ಅನ್ನು ಹೆಚ್ಚುವರಿಯಾಗಿ ಗ್ರಾಹಕರು ಪಡೆಯಲಿದ್ದಾರೆ.
ಗ್ರಾಹಕರು ಗಮನಿಸಬೇಕಾದ ಸಂಗತಿಯೊಂದಿದೆ. ಏನೆಂದರೆ 3ಜಿ ಡೇಟಾ ಮತ್ತು 300 ಎಸ್ಸೆಮ್ಮೆಸ್ ಮಿತಿ ಮುಗಿದ ಬಳಿಕ, ಗ್ರಾಹಕರು ಪ್ರತಿ ಎಂಬಿ ಡೇಟಾಗೆ 50 ಪೈಸೆ ಮತ್ತು ಸ್ಥಳೀಯ ಎಸ್ಸೆಮ್ಮೆಸ್‌ಗೆ 1 ರೂ. ಹಾಗೂ ಎಸ್‌ಟಿಡಿಗೆ 1.5 ರೂ. ನೀಡಬೇಕಾಗುತ್ತದೆ. ಹಾಗೆಯೇ, 30 ದಿನಕ್ಕೆ 300 ಎಸ್ಮೆಮ್ಮೆಸ್‌ಗಳನ್ನು ಕಳುಹಿಸಲು ಅವಕಾಶವಿದ್ದರೂ, ದಿನಕ್ಕೆ 100 ಎಸ್ಸೆಮ್ಮೆಸ್‌ಗೆ ಮಿತ ಹೇರಲಾಗಿದೆ ಎಂಬುದನ್ನ ಗ್ರಾಹಕರು ಗಮನಿಸಬೇಕು.
ಇದನ್ನೂ ಓದಿ | 5G ಹರಾಜು: ಜಿಯೊ, ಏರ್‌ಟೆಲ್, ವೊಡಾಫೋನ್ ಐಡಿಯಾ ಜತೆ ಅದಾನಿ ಡೇಟಾದಿಂದಲೂ ಬಿಡ್!