Site icon Vistara News

Ajmer 92 Controversy: ದಿ ಕೇರಳ ಸ್ಟೋರಿ ಆಯ್ತು, ಈಗ ‘ಅಜ್ಮೇರ್ 92’ ನಿಷೇಧಕ್ಕೆ ಒತ್ತಾಯ! ಏನಿದೆ ಸಿನಿಮಾದಲ್ಲಿ?

Ajmer 92 Controversy, muslim organisations demanding ban on this film

ಮುಂಬೈ: ದಿ ಕಾಶ್ಮೀರ್ ಫೈಲ್ಸ್ (The Kashmir Files), ದಿ ಕೇರಳ ಸ್ಟೋರಿ (The Keral Story) ಬಳಿಕ, ಇದೇ ರೀತಿಯ ಮತ್ತೊಂದು ಸಿನಿಮಾ ಜುಲೈ 14ಕ್ಕೆ ಬಿಡುಗಡೆಗೆ ಸಿದ್ದವಾಗಿದ್ದು, ವಿವಾದಕ್ಕೆ ಕಾರಣವಾಗಿದೆ (Ajmer 92 Controversy). 72 ಹೂರೇ ಚಿತ್ರದ ಮೇಲೂ ನಿಷೇಧಕ್ಕೆ ಒತ್ತಡ ಕೇಳಿ ಬಂದ ಬೆನ್ನಲ್ಲೇ, ಅಜ್ಮೇರ್ 92 (Ajmer 92) ಚಿತ್ರದ ವಿರುದ್ಧವೂ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕೆಲವು ಮುಸ್ಲಿಮ್ ಸಂಘಟನೆಗಳು ಅಜ್ಮೇರ್ 92 ಚಿತ್ರದ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿವೆ. ದೇಶದಲ್ಲಿ ಕೋಮು ದ್ವೇಷಗಳನ್ನು ಹರಡುವುದಕ್ಕಾಗಿ ಈ ರೀತಿಯ ಪ್ರಾಪಗ್ಯಾಂಡ ಚಿತ್ರಗಳನ್ನು ತಯಾರು ಮಾಡಲಾಗುತ್ತಿದೆ ಎಂದು ಅಭಿಪ್ರಾಯ ಕೇಳಿ ಬರುತ್ತಿದೆ.

ಝರೀನಾ ವಹಾಬ್, ಕರನ್ ವರ್ಮಾ, ಸಮಿತ್ ಸಿಂಗ್, ಸಯಾಜಿ ಶಿಂಧಿ ಮತ್ತು ಮನೋಜ್ ಜೋಶಿ ಇನ್ನಿತರರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಉಮೇಶ್ ಕುಮಾರ್ ತಿವಾರಿ ನಿರ್ಮಾಣ ಮಾಡಿರುವ ಅಜ್ಮೇರ್ 92 ಸಿನಿಮಾವನ್ನು ಪುಷ್ಪೇಂದ್ರ ಸಿಂಗ್ ಅವರು ನಿರ್ದೇಶನ ಮಾಡಿದ್ದಾರೆ.

ನೈಜ ಘಟನೆಗಳ ಆಧಾರದ ಮೇಲೆ ನಿರ್ಮಾಣ ಮಾಡಲಾಗಿದೆ ಎನ್ನಲಾಗುವ ಅಜ್ಮೇರ್ 92 ಚಿತ್ರದಲ್ಲಿ 1992ರಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದ್ದಾರೆ. ಪ್ರಭಾವಿ ವ್ಯಕ್ತಿಗಳು, ರಾಜಕಾರಣಿಗಳು ಸೇರಿದಂತೆ ಅಜ್ಮೇರ್ ದರ್ಗಾದ ನಿರ್ವಾಹಕರು 250 ಕಾಲೇಜು ಹುಡುಗಿಯರನ್ನು ವರ್ಷಗಳ ಕಾಲ ಲೈಂಗಿಕವಾಗಿ ಶೋಷಣೆ ಮಾಡಿದ ಕಥೆಯನ್ನು ಈ ಸಿನಿಮಾ ಹೊಂದಿದೆ. ಈ ಪ್ರಕರಣವು 1992ರಲ್ಲಿ ಬೆಳಕಿಗೆ ಬಂದಿತ್ತು.

ಅಜ್ಮೇರ್ 92 ಚಿತ್ರದ ಬಿಡುಗಡೆಯ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ಆಲ್ ಇಂಡಿಯಾ ಮುಸ್ಲಿಮ್ ಜಮಾತ್ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ಧೀನ್ ರಾಜ್ವೀ ಬರೇಲ್ವಿ ಅವರು, ಸಿನಿಮಾದ ಮೂಲಕ ನಿರ್ದಿಷ್ಟ ಧರ್ಮವನ್ನು ಟಾರ್ಗೆಟ ಮಾಡಲಾಗುತ್ತಿದೆ. ಈ ಚಿತ್ರವು ದೇಶದ ಜನರನ್ನು ಗೊಂದಲಗೊಳಿಸುತ್ತಿದೆ ಮತ್ತು ಸಮಾಜದಲ್ಲಿ ಒಡಕು ಮೂಡಿಸುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: 72 Hoorain: ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ’72 ಹೂರೇ’ ತೆರೆಗೆ ಬರಲು ಸಿದ್ಧ

ಅಜ್ಮೇರ್ 92 ಸಿನಿಮಾದಲ್ಲ ದರ್ಗಾವನ್ನು ತಪ್ಪಾಗಿ ಪ್ರತಿನಿಧಿಸಿದೆ. ಅಲ್ಲಿ ನೀಡಲಾಗುತ್ತಿರುವ ಶಿಕ್ಷಣವನ್ನು ತಪ್ಪು ಎಂಬಂತೆ ಹೇಳಲಾಗುತ್ತಿದೆ. ಚಿತ್ರವನ್ನು ನಿಷೇಧಿಸುವಂತೆ ನಿಷೇಧ ಮಾಡಬೇಕೆಂದು ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅಜ್ಮೀರ್ ದರ್ಗಾದ ಅಂಜುಮನ್ ಸಮಿತಿಯ ಕಾರ್ಯದರ್ಶಿ ಸರ್ವರ್ ಚಿಶ್ತಿ ಅವರು ಅಜ್ಮೇರ್ 92 ಸಿನಿಮಾವನ್ನು ಪಾಲಿಟಿಕಲ್ ಸ್ಟಂಟ್ ಎಂದು ಕರೆದಿದ್ದಾರೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version