ಅಮೃತಸರ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಂತಕರಾದ (Indira Gandhi killers) ಸತ್ವಂತ್ ಸಿಂಗ್ ಮತ್ತು ಕೆಹರ್ ಸಿಂಗ್ ಅವರ ಪುಣ್ಯತಿಥಿಯನ್ನು ಇಲ್ಲಿನ ಅಕಾಲ್ ತಖ್ತ್‌ನಲ್ಲಿ ಶುಕ್ರವಾರ ಬೆಳಗ್ಗೆ ಆಯೋಜಿಸಲಾಗಿತ್ತು. ಆಶ್ಚರ್ಯ ಎಂದರೆ, ಪಂಜಾಬ್‌ನ ಮಾಜಿ ಡಿಸಿಎಂ ಹಾಗೂ ಶಿರೋಮಣಿ ಅಕಾಲಿ ದಳ(SAD)ದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರು ಪಾಲ್ಗೊಂಡಿದ್ದರು.
ಹಂತಕರ ಪುಣ್ಯತಿಥಿಯ ಅಂಗವಾಗಿ ಅಕಾಲ್ ತಖ್ತ್ ಆವರಣದಲ್ಲಿರುವ ಗುರುದ್ವಾರ ಝಂಡೆ ಭುಂಗೆಯಲ್ಲಿ ಅಖಂಡ ಪಥದ ಭೋಗ್ ಆಯೋಜಿಸಲಾಗಿತ್ತು. ಈ ವೇಳೆ ಕೀರ್ತನೆ ನಡೆಯುತ್ತಿತ್ತು. ಆಗ ಅಕಾಲಿ ದಳದ ನಾಯಕ ಬಾದಲ್ ಅವರು ಆಗಮಿಸಿ, ಗುರು ಗ್ರಂಥ ಸಾಹಿಬ್‌ಗೆ ನಮಸ್ಕರಿಸಿದರು. ಅಲ್ಲಿಂದ ಸ್ವಲ್ಪ ಹೊತ್ತಿನಲ್ಲಿಯೇ ತೆರಳಿದರು.
ಪಂಜಾಬ್‌ನ ಗುರುದಾಸ್ಪುರ್ ಜಿಲ್ಲೆಯ ಅಗ್ವಾನ್ ಹಳ್ಳಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಂತಕರ ನೆನಪಿಗೆ ಗುರುದ್ವಾರ ನಿರ್ಮಾಣ ಮಾಡಲಾಗುತ್ತಿದೆ. ಈ ಸ್ಥಳಕ್ಕೂ ವಾರದ ಹಿಂದೆ ಬಾದಲ್ ಅವರು ಭೇಟಿ ನೀಡಿದ್ದರು. ಹೀಗೆ ಭೇಟಿ ನೀಡಿದ ಮೊದಲ ರಾಜಕೀಯ ನಾಯಕ ಇವರಾಗಿದ್ದಾರೆ. ಈ ವೇಳೆ, ಅವರು ಗುರುದ್ವಾರ ಹಾಗೂ ಹಂತಕ ಸತ್ವಂತ್ ಸಿಂಗ್ ಕುಟುಂಬವನ್ನು ಭೇಟಿ ಮಾಡಿದ್ದರು. ಇದು ಹಲವರಿಗೆ ಅಚ್ಚರಿಯೂ ಆಗಿದೆ.
ಇದನ್ನೂ ಓದಿ | ‘ನನ್ನ ಅಜ್ಜಿ, ನನ್ನ ಅಮ್ಮನ ಬಗ್ಗೆ ಆಡಿದ್ದ ಮಾತು ಸತ್ಯ‘; ಇಂದಿರಾ ಗಾಂಧಿಯವರ ಆ ಮಾತು ನೆನಪಿಸಿಕೊಂಡ ರಾಹುಲ್ ಗಾಂಧಿ