Site icon Vistara News

Gujarat GIFT City: ಗುಜರಾತ್‌ನ ಗಿಫ್ಟ್‌ ಸಿಟಿಯಲ್ಲಿ ಮದ್ಯ ಸೇವನೆಗೆ ಅವಕಾಶ!

Alcohol consumption allowed in Gujarat Gift City!

ಗಾಂಧಿನಗರ: ಮಹಾತ್ಮ ಗಾಂಧಿಯ ನಾಡು (Land of Mahatma Gandhi) ಗುಜರಾತ್‌ನಲ್ಲಿ (Gujarat) ಮದ್ಯ ಸೇವನೆ ಮತ್ತು ಮಾರಾಟಕ್ಕೆ ಅಲ್ಲಿನ ಸರ್ಕಾರ ಅವಕಾಶ ಕಲ್ಪಿಸಿದೆ(Alcohol consumption). ಗುಜರಾತ್ ಸರ್ಕಾರವು ಶುಕ್ರವಾರ ಗುಜರಾತ್ ಇಂಟರ್‌ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ (GIFT City)ನಲ್ಲಿ ವೈನ್ ಮತ್ತು ಡೈನ್(Wine and Dine) ನೀಡುವ ಹೋಟೆಲ್‌ಗಳು/ರೆಸ್ಟೋರೆಂಟ್‌ಗಳು/ಕ್ಲಬ್‌ಗಳಲ್ಲಿ ಮದ್ಯ ಸೇವನೆಗೆ ಅನುಮತಿ ನೀಡಿದೆ. ಗಾಂಧಿನಗರದ ಸಂಪೂರ್ಣ ಗಿಫ್ಟ್ ಸಿಟಿಯಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳು/ಮಾಲೀಕರಿಗೆ ಮದ್ಯ ಸೇವನೆ ಪರವಾನಗಿಯನ್ನು ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದಲ್ಲದೆ, ಪ್ರತಿ ಕಂಪನಿಯ ಅಧಿಕೃತ ಸಂದರ್ಶಕರು ಆ ಕಂಪನಿಯ ಕಾಯಂ ಉದ್ಯೋಗಿಗಳ ಉಪಸ್ಥಿತಿಯಲ್ಲಿ ತಾತ್ಕಾಲಿಕ ಪರವಾನಗಿ ಹೊಂದಿರುವ ಹೋಟೆಲ್‌ಗಳು/ರೆಸ್ಟೋರೆಂಟ್‌ಗಳು/ಕ್ಲಬ್‌ಗಳಲ್ಲಿ ಮದ್ಯ ಸೇವಿಸಲು ಅವಕಾಶ ಕಲ್ಪಿಸಲು ನೀಡಲಾಗಿದೆ.

ಗಿಫ್ಟ್ ಸಿಟಿಯಲ್ಲಿ ಇರುವ ಅಥವಾ ಬರುವ ಹೋಟೆಲ್‌ಗಳು/ರೆಸ್ಟೋರೆಂಟ್‌ಗಳು/ಕ್ಲಬ್‌ಗಳು ಅಲ್ಲಿ ವೈನ್ ಮತ್ತು ಡೈನ್ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಗಿಫ್ಟ್ ಸಿಟಿಯಲ್ಲಿ ಅಧಿಕೃತವಾಗಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳು ಮತ್ತು ಅಧಿಕೃತವಾಗಿ ಭೇಟಿ ನೀಡುವ ಸಂದರ್ಶಕರು ಹೋಟೆಲ್‌ಗಳು/ಕ್ಲಬ್‌ಗಳು/ರೆಸ್ಟೋರೆಂಟ್‌ಗಳಲ್ಲಿ ಮದ್ಯವನ್ನು ಸೇವಿಸಬಹುದು. ಆದರೆ, ಹೋಟೆಲ್‌ಗಳು/ಕ್ಲಬ್‌ಗಳು/ರೆಸ್ಟೋರೆಂಟ್‌ಗಳು ಮದ್ಯದ ಬಾಟಲಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸರ್ಕಾರ ಹೇಳಿದೆ.

ಗಿಫ್ಟ್ ಸಿಟಿಯು ತೆರಿಗೆ-ತಟಸ್ಥ ಹಣಕಾಸು ಕೇಂದ್ರವಾಗಿದ್ದು, ಸಿಂಗಾಪುರದಂತಹ ಕೇಂದ್ರಗಳೊಂದಿಗೆ ಸ್ಪರ್ಧಿಸುವ ಗುರಿಯನ್ನು ಹೊಂದಿದೆ. ಏಕೆಂದರೆ ಇದು ಹಣಕಾಸಿನ ಪ್ರೋತ್ಸಾಹ ಮತ್ತು ಸಡಿಲವಾದ ಕಾನೂನು ನಿಯಂತ್ರಣಗಳನ್ನು ಹೊಂದಿದೆ.

2023ರ ಜೂನ್ ಹೊತ್ತಿಗೆ ಎಚ್‌ಎಸ್‌ಬಿಸಿ, ಜೆಪಿ ಮೋರ್ಗಾನ್ ಮತ್ತು ಬಾರ್ಕ್ಲೇಸ್ ಸೇರಿದಂತೆ 23 ಬಹು-ರಾಷ್ಟ್ರೀಯ ಬ್ಯಾಂಕ್‌ಗಳು, 35 ಫಿನ್ಟೆಕ್ ಕಂಪನಿಗಳು ಗಿಫ್ಟ್ ಸಿಟಿಯಲ್ಲಿ ನೆಲೆಯನ್ನು ಹೊಂದಿವೆ. 30.6 ಶತಕೋಟಿ ಡಾಲರ್ ಸರಾಸರಿ ದೈನಂದಿನ ವ್ಯಾಪಾರದ ಪರಿಮಾಣಗಳೊಂದಿಗೆ ಎರಡು ಅಂತರರಾಷ್ಟ್ರೀಯ ಷೇರು ವಿನಿಮಯ ಕೇಂದ್ರಗಳಿವೆ. ಹಾಗೆಯೇ 75 ಜ್ಯುವೆಲರ್‌ಗಳೊಂದಿಗೆ ಭಾರತದ ಮೊದಲ ಅಂತರರಾಷ್ಟ್ರೀಯ ಬುಲಿಯನ್ ವಿನಿಮಯ ಕೇಂದ್ರವಾಗಿದೆ.

ಈ ಸುದ್ದಿಯನ್ನೂ ಓದಿ: Surat Diamond Bourse : ಸೂರತ್‌ ವಜ್ರಕ್ಕೆ ಹೊಸ ಹೊಳಪು ನೀಡಲಿದೆಯೇ ಡೈಮಂಡ್‌ ಬೋರ್ಸ್?

Exit mobile version