Site icon Vistara News

All are Hindu | ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದೂ, ಎಲ್ಲರ ಡಿಎನ್ಎ ಒಂದೇ: ಆರ್‌ಎಸ್ಎಸ್

rss baithak

ನವದೆಹಲಿ: ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದೂ ಆಗಿದ್ದಾನೆ (All are Hindu) ಮತ್ತು ಎಲ್ಲರ ಡಿಎನ್ಎ ಒಂದೇ ಆಗಿದೆ. ಹಾಗಂತ, ತಾವು ಮಾಡುವ ಪೂಜಾ ವಿಧಾನಗಳನ್ನು ಬದಲಿಸಬೇಕೆಂದೇನೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.

ಛತ್ತೀಸ್‌ಗಢನ ಸುರ್ಗುಜಾ ಜಿಲ್ಲೆಯ ಅಂಬಿಕಾಪುರದಲ್ಲಿ ಆರೆಸ್ಸೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈವಿಧ್ಯತೆಯಲ್ಲೇ ಭಾರತದ ಏಕತೆ ಇದೆ. ಇದು ಪ್ರಾಚೀನ ಕಾಲದಿಂದಲೂ ಭಾರತದ ಹೆಮ್ಮೆಯ ಮಂತ್ರವಾಗಿದೆ. ಪ್ರತಿಯೊಬ್ಬರನ್ನು ಜತೆಗೆ ಕೊಂಡೊಯ್ಯವ ನೀತಿಯನ್ನು ಹಿಂದುತ್ವ ಮಾತ್ರ ನಂಬುತ್ತದೆ ಎಂದು ಅವರು ತಿಳಿಸಿದರು.

ನಾವು 1925(ಆರ್‌ಎಸ್ಎಸ್ ಸ್ಥಾಪನೆ)ರಿಂದಲೂ ಹೇಳುತ್ತಿದ್ದೇವೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬರೂ ಹಿಂದೂಗಳೇ ಆಗಿದ್ದಾರೆ. ಯಾರು ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುತ್ತಾರೋ ಮತ್ತು ವೈವಿಧ್ಯತೆಯಲ್ಲಿ ಸಾಂಸ್ಕೃತಿಕ ಏಕತೆಯೊಂದಿಗೆ ಬದಕುತ್ತಾರೋ ಧರ್ಮ, ಸಂಸ್ಕೃತಿ, ಭಾಷೆ ಮತ್ತು ಆಚಾರ ವಿಚಾರ, ಉಡುಗೆ ತೊಡುಗೆ ಬೇರೆ ಬೇರೆ ಇದ್ದರೂ ಇದೇ ದಿಸೆಯಲ್ಲಿ ಅವರ ಚಿಂತನೆಗಳಿರುತ್ತವೆ ಎಂದು ಅವರು ಹೇಳಿದ್ದಾರೆ.

ಹಿಂದುತ್ವ ಸಿದ್ಧಾಂತವು ವೈವಿಧ್ಯತೆಯನ್ನು ಪರಿಗಣಿಸುತ್ತದೆ ಮತ್ತು ಜನರ ಏಕತೆಯನ್ನು ಬೆಂಬಲಿಸುತ್ತದೆ. ಪ್ರತಿಯೊಬ್ಬರ ನಂಬಿಕೆಯನ್ನು ನಾವು ಗೌರವಿಸಬೇಕು ಮತ್ತು ಎಲ್ಲ ಭಾರತೀಯರ ಡಿಎನ್ಎ ಒಂದೇ ಆಗಿದೆ. ಎಲ್ಲರೂ ಕಾಮನ್ ವಂಶಜರನ್ನು ಹೊಂದಿದ್ದಾರೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

ಇದನ್ನೂ ಓದಿ | Mohan Bhagwat | ಮಾದರಿ ಸಮಾಜ ನಿರ್ಮಿಸುವುದೇ ಆರೆಸ್ಸೆಸ್‌ ಗುರಿ ಎಂದ ಮೋಹನ್‌ ಭಾಗವತ್‌

Exit mobile version