Site icon Vistara News

Twin Tower Demolition | ಅವಳಿ ಕಟ್ಟಡಗಳ ನೆಲಸಮದ ಕೊನೆಯ ಕ್ಷಣಗಳು, ನಂತರದ ಬೆಳವಣಿಗೆ ಏನು? ಇಲ್ಲಿದೆ ಮಾಹಿತಿ

Twin Towers

ನೋಯ್ಡಾ: ಅವಳಿ ಗಗನಚುಂಬಿ ಕಟ್ಟಡಗಳ (Twin Tower Demolition) ನೆಲಸಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಟ್ಟಡಗಳ ಸುತ್ತಲೂ ವಾಸವಿದ್ದ ೫ ಸಾವಿರಕ್ಕೂ ಅಧಿಕ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಹಾಗೆಯೇ, ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ಹಹಣಾ ಪಡೆ (ಎನ್‌ಡಿಆರ್‌ಎಫ್‌), ಮೀಸಲು ಪಡೆಗಳು ಸ್ಥಳಕ್ಕೆ ಆಗಮಿಸಿವೆ. ಕಟ್ಟಡಗಳ ನೆಲಸಮಕ್ಕೆ ಸಿದ್ಧತೆ ಭಾಗಶಃ ಪೂರ್ಣಗೊಂಡಿದ್ದು, ನೆಲಸಮವೊಂದೇ ಬಾಕಿ ಉಳಿದಿದೆ. ಹಾಗಾಗಿ ನೆಲಸಮದ ಕೊನೆಯ ಹಾಗೂ ನಂತರ ಏನಾಗುತ್ತದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

ಹೀಗಿದೆ ಟೈಮ್‌ಲೈನ್‌

ಮಧ್ಯಾಹ್ನ ೨.೧೫: ನೋಯ್ಡಾ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳ ಸಂಚಾರ ಸ್ಥಗಿತ

೨.೩೦: ಅವಳಿ ಕಟ್ಟಡಗಳ ನೆಲಸಮ ಆರಂಭ

೩: ಧೂಳೆಲ್ಲ ಕಡಿಮೆಯಾದ ಬಳಿಕ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚಾರಕ್ಕೆ ಅವಕಾಶ

ಸಂಜೆ ೪: ಸ್ಥಳಾಂತರಗೊಂಡ ಸುತ್ತಮುತ್ತಲಿನ ನಿವಾಸಿಗಳ ಆಗಮನ

೪.೩೦: ಎಲೆವೇಟರ್‌ಗಳ ಕಾರ್ಯಾರಂಭ

೪.೪೦-೫ ಗಂಟೆ: ವಿದ್ಯುತ್‌ ಮತ್ತು ನೀರಿನ ಸರಬರಾಜು ಪುನರಾರಂಭ

ಸೆಕ್ಟರ್‌ ೯೩ ಎ ಪ್ರದೇಶದಲ್ಲಿರುವ ಸೂಪರ್‌ಟೆಕ್‌ ಕಟ್ಟಡಗಳ ನೆಲಸಮ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನೆಲಸಮದ ಬಳಿಕ ಕಟ್ಟಡದ ಸುತ್ತಲೂ ವಾಯುಮಾಲಿನ್ಯ ಉಂಟಾಗುವುದರಿಂದ ಜನರ ಆರೋಗ್ಯದ ದೃಷ್ಟಿಯಿಂದ ಮೂರು ಆಸ್ಪತ್ರೆಗಳನ್ನು ಮೀಸಲಿಡಲಾಗಿದೆ. ಸುಮಾರು ೫೬೦ ಪೊಲೀಸರು, ೧೦೦ ಮೀಸಲು ಪಡೆ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಮಾಲಿನ್ಯದ ಪ್ರಮಾಣವನ್ನು ಅಳೆಯಲು ಡಸ್ಟ್‌ ಮಷೀನ್‌ಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ | Twin Tower Demolition | 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಅವಳಿ ಕಟ್ಟಡ ಕೆಡವಲು ಆಗುವ ಖರ್ಚೆಷ್ಟು?

Exit mobile version