ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿರುವ ಕೃಷ್ಣ ಜನ್ಮಭೂಮಿ (Krishna Janmabhoomi) ಹಾಗೂ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿ ಕುರಿತು ನಾಲ್ಕು ತಿಂಗಳಲ್ಲಿ ಆದೇಶ ಹೊರಡಿಸಬೇಕು ಎಂದು ಮಥುರಾ ಕೋರ್ಟ್‌ಗೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದೆ.
ಶಾಹಿ ಈದ್ಗಾ ಮಸೀದಿಯ ಜಾಗದಲ್ಲಿ ಮೊದಲು ದೇವಾಲಯ ಇತ್ತು. ಆದರೆ, ದೇವಾಲಯವನ್ನು ಕೆಡವಿ ಮಸೀದಿ ಕಟ್ಟಲಾಗಿದೆ. ಹಾಗಾಗಿ, ಇದರ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ASI) ಸೂಚಿಸಬೇಕು ಎಂದು ಕೋರಿ ಭಗವಾನ್ ಶ್ರೀ ಕೃಷ್ಣ ವಿರಾಜಮಾನ್ ಸೇರಿ ಇಬ್ಬರು ಅರ್ಜಿ ಸಲ್ಲಿಸಿದ್ದರು.
ಅಲಹಾಬಾದ್ ಹೈಕೋರ್ಟ್ ಅರ್ಜಿ ವಿಚಾರಣೆಗೆ ನಿರಾಕರಿಸಿದ್ದು, ಮಥುರಾ ನ್ಯಾಯಾಲಯವೇ ನಾಲ್ಕು ತಿಂಗಳಲ್ಲಿ ಈ ಕುರಿತು ಆದೇಶ ನೀಡಲಿ ಎಂದು ನಿರ್ದೇಶಿಸಿತು. “ಮಸೀದಿಯ ಜಾಗವು ಕೃಷ್ಣನ ಜನ್ಮಸ್ಥಾನವಾಗಿದೆ. ದ್ವಾಪರ ಯುಗದಲ್ಲಿ ಕಂಸನು ಕೃಷ್ಣನ ತಂದೆ-ತಾಯಿಯನ್ನು ಮಸೀದಿಯ ಜಾಗದಲ್ಲಿಯೇ ಬಂಧಿಸಿ ಇರಿಸಿದ್ದನು” ಎಂಬುದು ಅರ್ಜಿದಾರರ ವಾದವಾಗಿದೆ.
ಇದನ್ನೂ ಓದಿ | ಕಾಶಿ, ಮಥುರಾ ಬಗ್ಗೆ ಏನೂ ಹೇಳಲ್ಲ, ಕೋರ್ಟ್, ಸಂವಿಧಾನ ನಿರ್ಧರಿಸಲಿ ಎಂದ ಬಿಜೆಪಿ