Site icon Vistara News

Amarnath Yatra: ಆಗಸ್ಟ್‌ನಲ್ಲಿ ಪಾಕ್‌ ನಡೆಸುತ್ತಾ ಡೆಡ್ಲಿ ಅಟ್ಯಾಕ್‌? ಎರಡೆರಡು ಉಗ್ರ ಸಂಘಟನೆಗಳಿಂದ ದೊಡ್ಡ ಪ್ಲ್ಯಾನ್‌!

Amarnath Yatra

Amarnath Yatra

ಹೊಸದಿಲ್ಲಿ: ಪವಿತ್ರ ಅಮರನಾಥ ಯಾತ್ರೆ(Amarnath Yatra)ಗೆ ಭಯೋತ್ಪಾದಕಾ ದಾಳಿಯ ಕಂಟಕ ಎದುರಾಗಿದೆ. ಈ ಬಾರಿ ಯಾತ್ರೆಯನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯ ಎಸಗಲು ಪಾಕಿಸ್ತಾನ ಭಾರೀ ಸಂಚು ರೂಪಿಸಿರುವುದು ಬಯಲಾಗಿದೆ. ಲಷ್ಕರ್‌ ಉಗ್ರ ಸಂಘಟನೆ(Lashkar Terrorists) ಮುಖ್ಯಸ್ಥ ಅಬ್ದುಲ್‌ ರೆಹಮಾನ್‌ ಮಕ್ಕಿ ಲಾಹೋರ್‌ ಮತ್ತು ಬಹವಾಲ್‌ಪುರದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹಂಚುವ ಬಗ್ಗೆ ಮಹತ್ವ ಸಭೆ ನಡೆಸಿದ್ದಾನೆ. ಅಮರನಾಥ್‌ ಯಾತ್ರೆ ಸಂದರ್ಭದಲ್ಲಿ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಲು ಜಮ್ಮು ಮತ್ತು ಕಾಶ್ಮೀರಕ್ಕೆ ಅಮೆರಿಕ ನಿರ್ಮಿತ ಶಸ್ತ್ರಾಸ್ತಗಳನ್ನು ಪೂರೈಕೆ ಮಾಡುವುದೇ ಈ ಸಭೆಯ ಪ್ರಮುಖ ಉದ್ದೇಶವಾಗಿತ್ತು.

ಇನ್ನು ಬಹವಾಲ್‌ಪುರದಲ್ಲಿ ಎರಡನೇ ಸಭೆ ನಡೆದಿತ್ತು. ಈ ಸಭೆಯನ್ನು ಜೈಷೇ ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮುಫ್ತಿ ಅಬ್ದುಲ್‌ ರೌಫ್‌ ಪಾಕಿಸ್ತಾನದ ಐಎಸ್‌ಐ ಮತ್ತು ಉಗ್ರ ಸಂಘಟನೆಗಳ ಜೊತೆಗೂ ನಡೆಸಿದ್ದ. ಕಣಿವೆ ರಾಜ್ಯದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು. ಇದೀಗ ಈ ದಾಳಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿರುವ ಭಾರತ ಪಾಕಿಸ್ತಾನದ ವಿರುದ್ಧ ಪ್ರತಿದಾಳಿ ನಡೆಸುವ ಭೀತಿಯಲ್ಲಿ ಪಾಕಿಸ್ತಾನ ಇದೆ. ಹೀಗಾಗಿಯೇ ಪಾಕಿಸ್ತಾನ ಗಡಿಯಲ್ಲಿ ತನ್ನ ಸೈನಿಕರ ನಿಯೋಜನೆಯನ್ನು ಹೆಚ್ಚಿಸಿದೆ. 649 ಮುಜಾಹಿದ್ ಬೆಟಾಲಿಯನ್ (ಬರೋಹ್), 65 ಫ್ರಾಂಟಿಯರ್ ಫೋರ್ಸ್ (ತಂಡರ್) ಅನ್ನು ಪಾಕಿಸ್ತಾನ ನಿಯೋಜಿಸಿದೆ.

ಭೌತಿಕ ದಾಳಿಗಳನ್ನು (ಮನೆಗಳಿಗೆ ಪ್ರವೇಶಿಸುವ ಮೂಲಕ ಅಥವಾ ಪಾಕಿಸ್ತಾನದ ಮುಂದಿನ ಸ್ಥಳಗಳ ಮೇಲೆ ದಾಳಿ ಮಾಡುವ ಮೂಲಕ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು) ಮತ್ತು ಕದನ ವಿರಾಮ ಉಲ್ಲಂಘನೆಗಳನ್ನು (ಪ್ರಸ್ತುತ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವಿದೆ) ತಡೆಯಲು ಭಾರತದ ಸರ್ಕಾರವು ಭಾರತೀಯ ಸೇನೆಯನ್ನು ಬಲ ಪಡಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಹಿಮಾಲಯದ ಅಮರನಾಥ ಯಾತ್ರೆ ಬಹಳ ಹಳೆಯದು ಮತ್ತು ಪವಿತ್ರವಾದದ್ದು. ಇಲ್ಲಿ ಸುಮಾರು 5000 ವರ್ಷಗಳಷ್ಟು ಹಳೆಯದಾದ ಶಿವಲಿಂಗವಿದ್ದು ಈ ಪರ್ವತ ಶಿಖರದ ಸಮೀಪದಲ್ಲಿರುವ ಅಮರನಾಥ ಗುಹೆಯು ಹಿಂದೂ ಧರ್ಮದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಮರನಾಥ ಯಾತ್ರೆ ಕೈಗೊಳ್ಳುತ್ತಾರೆ. ಇದನ್ನು ತೀರ್ಥಯಾತ್ರೆ ಎಂದು ಪರಿಗಣಿಸಲಾಗಿದೆ.

ಅಮರನಾಥ ಯಾತ್ರೆ ಯಾವಾಗ ಆರಂಭ?

ಈ ವರ್ಷದ ಶ್ರೀ ಬಾಬಾ ಅಮರನಾಥ ಯಾತ್ರೆಯು ಜೂನ್ 29 ರಿಂದ ಪ್ರಾರಂಭವಾಗುತ್ತಿದೆ. ಇದು ರಕ್ಷಾಬಂಧನ ದಿನದವರೆಗೆ ಇರಲಿದೆ. ಅಂದರೆ ಆಗಸ್ಟ್ 19 ರಂದು ಯಾತ್ರೆ ಕೊನೆಗೊಳ್ಳುತ್ತದೆ. ಹೀಗಾಗಿ ಜುಲೈ ಸಂಪೂರ್ಣ ತಿಂಗಳು ಹಾಗೂ ಆಗಸ್ಟ್ 19ರವರೆಗೆ ಭಕ್ತರು ಅಮರನಾಥನ ಯಾತ್ರೆ ಮಾಡಬಹುದು. ಇದಕ್ಕಾಗಿ ಮುಂಚಿತವಾಗಿ ಬುಕ್ ಮಾಡಿಕೊಳ್ಳಬೇಕಾಗುತ್ತದೆ.

ಅಮರನಾಥ ಯಾತ್ರೆ 2024 ಜೂನ್ 29, 2024 ರಿಂದ ಪ್ರಾರಂಭವಾಗಲಿದೆ. 19 ಆಗಸ್ಟ್ 2024 ರಂದು ಮುಕ್ತಾಯಗೊಳ್ಳುತ್ತದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗಾಗಿ ಮುಂಗಡ ನೋಂದಣಿಯು 15 ಏಪ್ರಿಲ್ 2024 ರಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಆಸಕ್ತರು ಏಪ್ರಿಲ್ 15 ಅಂದರೆ ನಾಳೆಯಿಂದ ನೊಂದಣಿ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ:Mamata Banerjee: ಬಾಂಗ್ಲಾದೇಶದೊಂದಿಗೆ ಜಲ ಹಂಚಿಕೆಯ ಮಾತುಕತೆ: ಮಮತಾ ಬ್ಯಾನರ್ಜಿ ವಿರೋಧ; ಪ್ರಧಾನಿಗೆ ಪತ್ರ

Exit mobile version