Site icon Vistara News

Western Ghats: ಪಶ್ಚಿಮಘಟ್ಟ ಸಂರಕ್ಷಣೆಗೆ ಅಮೆಜಾನ್‌ನಿಂದ 24 ಕೋಟಿ ರೂ. ಹೂಡಿಕೆ

Amazon

ನವದೆಹಲಿ: ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಪ್ರಕೃತಿ ಆಧಾರಿತ ಕಾರ್ಯಕ್ರಮಗಳಿಗೆ ಧನ ಸಹಾಯ ಮಾಡುವುದಾಗಿ ಅಮೆಜಾನ್ (Amazon) ಸೋಮವಾರ ಘೋಷಿಸಿದೆ. ರೈಟ್ ನೌ ಕ್ಲೈಮೇಟ್ ಫಂಡ್‌ನಿಂದ (Right Now Climate Fund) ಒಟ್ಟು 100 ಮಿಲಿಯನ್ ಡಾಲರ್ ಪೈಕಿ 15 ಮಿಲಿಯನ್ ಡಾಲರ್ ನೀಡಲಾಗುವುದು. ಈ ಪೈಕಿ ಮೊದಲ 3 ಮಿಲಿಯನ್ ಡಾಲರ್ (24 ಕೋಟಿ ರೂಪಾಯಿ) ಹಣವನ್ನು ಭಾರತದಲ್ಲಿನ ಪ್ರಕೃತಿ ಆಧಾರಿತ ಕಾರ್ಯಕ್ರಮಗಳಿಗೆ (Indian Programme) ನೀಡಲಾಗುವುದು. ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ (Center for Wild life Studies – CWS) ಜತೆಗೂಡಿ ಅಮೆಜಾನ್ ಈ ಹಣವನ್ನು ಪಶ್ಚಿಮ ಘಟ್ಟದಲ್ಲಿ (Western Ghats) ವೆಚ್ಚ ಮಾಡಲಿದೆ.

ಅಮೆಜಾನ್ ತನ್ನ ‘ವೈಲ್ಡ್ ಕಾರ್ಬನ್’ ಕಾರ್ಯಕ್ರಮಕ್ಕಾಗಿ 1 ಮಿಲಿಯನ್ ಡಾಲರ್ ಹಣವನ್ನು ಪಡೆಯುಲಿದ್ದು, ಪಶ್ಚಿ ಘಟ್ಟದಲ್ಲಿನ 10,000 ರೈತರಿಗೆ ಲಕ್ಷಾಂತರ ಹಣ್ಣುಕೊಡುವ ಮರಗಳು ಮತ್ತು ಔಷಧೀಯ ಮರಗಳನ್ನು ನೆಡಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದ ಘೋಷಣೆ ಮಾಡಿದೆ.

ಅಮೆಜಾನ್ ಮತ್ತು ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ ಸಂಸ್ಥೆಗಳು ಪಶ್ಚಿಮ ಘಟ್ಟಗಳಲ್ಲಿನ ಸಂರಕ್ಷಣಾ ಪ್ರಯತ್ನಗಳು ಮತ್ತು ಸಮುದಾಯಗಳನ್ನು ಬೆಂಬಲಿಸಲು ಒಟ್ಟಾಗಿ ಕೆಲಸ ಮಾಡಲಿವೆ. ಪಶ್ಚಿಮ ಘಟ್ಟವು ದೇಶದ 30 ಪ್ರತಿಶತ ವನ್ಯಜೀವಿ ಪ್ರಭೇದಗಳಿಗೆ ನೆಲೆಯಾಗಿದೆ ಮತ್ತು ವಿಶ್ವ ಪರಂಪರೆಯ ತಾಣವಾಗಿದೆ. ಇದು ವಿಶ್ವದ ಅತಿದೊಡ್ಡ ಹುಲಿಗಳು ಮತ್ತು ಏಷ್ಯಾ ಆನೆಗಳನ್ನು ಒಳಗೊಂಡಿದೆ.

ಮುಂದಿನ ವರ್ಷಗಳಲ್ಲಿ ಪಶ್ಚಿಮ ಘಟ್ಟದಲ್ಲಿ 2 ಸಾವಿರ ಕುಟುಂಬಗಳು 3 ಲಕ್ಷ ಮರಗಳನ್ನು ನೆಡಲಿವೆ. ಇದರಿಂದ ವನ್ಯಜೀವಿ-ಮಾನವ ಸಂಘರ್ಷ ಕಡಿಮೆಯಾಗುವುದು ಮಾತ್ರವಲ್ಲದೇ, ಪ್ರಾಣಿಗಳ ಭೂ ಪ್ರದೇಶವೂ ಹೆಚ್ಚಾಗಲಿದೆ ಎಂದು ಅಮೆಜಾನ್ ಹೇಳಿದೆ. ಈ ಕೆಲಸವನ್ನ ಸಿಡಬ್ಲ್ಯೂಎಸ್‌ ಜತೆಗೂಡಿ ಮಾಡಲಾಗುವುದು ಎಂದು ಹೇಳಿದೆ.

ಸಿಡಬ್ಲ್ಯೂಎಸ್ ರಿಮೋಟ್ ಸೆನ್ಸಿಂಗ್ ಮತ್ತು ಡ್ರೋನ್‌ಗಳನ್ನು ಬಳಸಿಕೊಂಡು ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯಕ್ರಮದ ಫಲಿತಾಂಶಗಳನ್ನು ಪರಿಶೀಲಿಸಲು ಆನ್-ಗ್ರೌಂಡ್ ಸಮೀಕ್ಷೆಗಳನ್ನು ನಡೆಸಲು ಈ ಧನಸಹಾಯವನ್ನು ಬಳಸಲಿದೆ.

ಪರಿಹಾರದ ಭಾಗವಾಗಲು ರೈತರೊಂದಿಗೆ ಪಾಲುದಾರಿಕೆ ಮತ್ತು ಪ್ರೋತ್ಸಾಹಿಸುವ ಮೂಲಕ, ನಾವು ಹುಲಿಗಳು, ಆನೆಗಳು ಮತ್ತು ಇತರ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ಆವಾಸಸ್ಥಾನಗಳನ್ನು ಸುಲಭಗೊಳಿಸಲು ಸಾಧ್ಯವಾಗುತ್ತದೆ ಎಂಗದು ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಕೃತಿ ಕಾರಂತ್ ಹೇಳಿದರು.

Exit mobile version