Site icon Vistara News

ವಿಶ್ವದಲ್ಲೇ ಬಲಿಷ್ಠ ಸೇನಾಪಡೆ ಹೊಂದಿರುವ ದೇಶ ಯುಎಸ್​; ಲಿಸ್ಟ್​​ನಲ್ಲಿ ಮೇಲೇರಿದ ಪಾಕ್​, ಭಾರತಕ್ಕೆ ಎಷ್ಟನೇ ಸ್ಥಾನ?

Indian Army

ವಿಶ್ವದಲ್ಲೇ ಅತ್ಯಂತ ಬಲಿಷ್ಠ ಸೇನೆ (Strongest Military Force in the World) ಹೊಂದಿರುವ ಟಾಪ್​ 10 ದೇಶಗಳು ಯಾವವು? ಹಾಗೇ, ಅತ್ಯಂತ ದುರ್ಬಲ ಸೇನೆ ಇರುವ ದೇಶಗಳು ಯಾವವು?-ವಿಶ್ವದ ಮಿಲಿಟರಿ ಫೋರ್ಸ್​ಗಳ ಸಾಮರ್ಥ್ಯದ ಶ್ರೇಯಾಂಕ ಮತ್ತು ಇತರ ವಿಷಯಗಳ ಬಗ್ಗೆ ಅಂಕಿ-ಸಂಖ್ಯೆ ನೀಡುವ ವೆಬ್​ಸೈಟ್​ ಗ್ಲೋಬಲ್​ ಫೈರ್​ಪವರ್​​ (Global Firepower)ಈಗ ಲಿಸ್ಟ್​ ಬಿಡುಗಡೆ ಮಾಡಿದೆ. ಸುಮಾರು 145ಕ್ಕೂ ಹೆಚ್ಚು ರಾಷ್ಟ್ರಗಳ, 60ಕ್ಕೂ ಹೆಚ್ಚು ಪ್ರಾದೇಶಿಕ ಅಂಶಗಳನ್ನು ಆಧರಿಸಿ, ಶ್ರೇಯಾಂಕವನ್ನು ನಿರ್ಧರಿಸಲಾಗಿದೆ. ಆಯಾ ದೇಶಗಳ ಮಿಲಿಟರಿ ಘಟಕಗಳ ಸಂಖ್ಯೆ, ಸೇನೆಯ ಆರ್ಥಿಕ ಬಲ, ಭೌಗೋಳಿಕ ಪರಿಸ್ಥಿತಿ, ಲಾಜಿಸ್ಟಿಕಲ್​ ಸಾಮರ್ಥ್ಯಗಳನ್ನು ಪರಿಗಣಿಸಲಾಗಿದೆ ಎಂದು ಗ್ಲೋಬಲ್ ಫೈರ್​ಪವರ್ ಹೇಳಿಕೊಂಡಿದೆ.

ಗ್ಲೋಬಲ್ ಫೈರ್​ಪವರ್ ವೆಬ್​ಸೈಟ್​ನ ಅಂಕಿಸಂಖ್ಯೆ ಪ್ರಕಾರ ವಿಶ್ವದಲ್ಲೇ ಅತ್ಯಂತ ಬಲಿಷ್ಠ ಸೇನೆ ಹೊಂದಿರುವ ರಾಷ್ಟ್ರ ಅಮೆರಿಕ (US). ಎರಡನೇ ಸ್ಥಾನದಲ್ಲಿ ರಷ್ಯಾ, ಮೂರನೇ ಸ್ಥಾನದಲ್ಲಿ ಚೀನಾ ದೇಶಗಳು ಇವೆ. ಒಂದು ಖುಷಿಯ ಸಂಗತಿಯೆಂದರೆ ಪ್ರಪಂಚದಲ್ಲೇ ಬಲಿಷ್ಠ ಸೇನೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿ ಇರುವುದು. ಇನ್ನುಳಿದಂತೆ 5ನೇ ಸ್ಥಾನದಲ್ಲಿ ಇಂಗ್ಲೆಂಡ್​, 6ರಲ್ಲಿ ದಕ್ಷಿಣ ಕೊರಿಯಾ, 7ನೇ ಸ್ಥಾನದಲ್ಲಿ ಪಾಕಿಸ್ತಾನ ಇದೆ. ಹಾಗೇ. 8ನೇ ಸ್ಥಾನದಲ್ಲಿ ಜಪಾನ್​, 9ರಲ್ಲಿ ಫ್ರಾನ್ಸ್​, 10ನೇ ಸ್ಥಾನದಲ್ಲಿ ಇಟಲಿ ರಾಷ್ಟ್ರಗಳು ಇವೆ.

ಅತ್ಯಂತ ದುರ್ಬಲ ಮಿಲಿಟರಿ ಫೋರ್ಸ್​ ಇರುವ ದೇಶಗಳು ಯಾವವು?
ವಿಶ್ವದಲ್ಲೇ ದುರ್ಬಲ ಮಿಲಿಟರಿ ಸಾಮರ್ಥ್ಯ ಹೊಂದಿರುವ 10 ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಭೂತಾನ್​ಗೆ. 2ರಲ್ಲಿ ಬೆನಿನ್​, 3ನೇ ಸ್ಥಾನದಲ್ಲಿ ಮೋಲ್ಡೋವಾ, 4ರಲ್ಲಿ ಸೊಮೆಲಿಯಾ, 5ನೇ ಸ್ಥಾನದಲ್ಲಿ ಲೈಬೀರಿಯಾ, 6ರಲ್ಲಿ ಸುರಿನಾಮ್​, 7ನೇ ಸ್ಥಾನದಲ್ಲಿ ಬೆಲೀಜ್​, 8ರಲ್ಲಿ ಮಧ್ಯ ಆಫ್ರಿಕಾ ಗಣರಾಜ್ಯ, 9ನೇ ಸ್ಥಾನದಲ್ಲಿ ಐಸ್​ಲ್ಯಾಂಡ್​ ಮತ್ತು ಕೊನೇ ಸ್ಥಾನದಲ್ಲಿ ಸಿಯೆರಾ ಲಿಯೋನ್ ದೇಶಗಳು ಇವೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ; ಶಸ್ತ್ರಾಸ್ತ್ರ ಲೂಟಿ ಮಾಡಲು ಯತ್ನಿಸಿದ ಗಲಭೆಕೋರರನ್ನು ಓಡಿಸಿದ ಸೇನೆ, ಒಬ್ಬನ ಹತ್ಯೆ

ಕಳೆದ ಬಾರಿಯೂ 4ನೇ ಸ್ಥಾನ
ಭಾರತದಲ್ಲಿ ಈಗಿನ ಸರ್ಕಾರ ಸೇನೆ ಸಾಮರ್ಥ್ಯ ಉತ್ತೇಜನಕ್ಕೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಲ್ಲೂ ಮೇಕ್​ ಇನ್ ಇಂಡಿಯಾ ಸ್ಪರ್ಶ ಕೊಡಲಾಗುತ್ತಿದೆ. ಭಾರತ 2022ರ ಲಿಸ್ಟ್​ನಲ್ಲಿಯೂ 4ನೇ ಸ್ಥಾನದಲ್ಲಿ ಇತ್ತು. ಈ ಬಾರಿಯೂ ಅದೇ ಸ್ಥಾನ ಕಾಯ್ದುಕೊಂಡಿದೆ. ಅಚ್ಚರಿ ಎಂದರೆ ಪಾಕಿಸ್ತಾನ ಟಾಪ್​ 10 ಲಿಸ್ಟ್​​ನಲ್ಲಿ ಬಂದಿದ್ದು. ಕಳೆದ ವರ್ಷ ಪಾಕಿಸ್ತಾನ 10ರ ನಂತರದ ಸ್ಥಾನದಲ್ಲಿ ಇತ್ತು. ಈ ಸಲ ಏಳನೇ ಸ್ಥಾನದಲ್ಲಿ ಬಂದಿದೆ. ಪಾಕಿಸ್ತಾನ ಆರ್ಥಿಕವಾಗಿ ದುರ್ಬಲವಾಗಿದೆ. ಅಲ್ಲಿ ನಿತ್ಯ ಬಳಕೆ ವಸ್ತುಗಳ ಬೆಲೆಯೆಲ್ಲ ಗಗನಕ್ಕೇರಿದೆ. ಅಲ್ಲಿನ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಇಳಿದಿದೆ. ಆದರೆ ಸೇನೆ ಸದೃಢಗೊಳಿಸಿದ್ದಾರೆ ಎಂಬುದಕ್ಕೆ ಅದು ಲಿಸ್ಟ್​ನಲ್ಲಿ ಮೇಲೆ ಏರಿರುವುದೇ ಸಾಕ್ಷಿ.

Exit mobile version