Site icon Vistara News

Raja Singh Row | ಹೈದರಾಬಾದ್‌ನಲ್ಲಿ ಪ್ರತಿಭಟನೆ ಬೆನ್ನಲ್ಲೇ ಶಾಸಕ ರಾಜಾ ಸಿಂಗ್‌ ಮರು ಬಂಧನ

Raja Singh

ಹೈದರಾಬಾದ್:‌ ಪ್ರವಾದಿ ಮೊಹಮ್ಮದ್‌ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಜನಾಕ್ರೋಶಕ್ಕೆ ಗುರಿಯಾಗಿರುವ ಬಿಜೆಪಿ ಉಚ್ಚಾಟಿತ ಶಾಸಕ ಟಿ .ರಾಜಾ ಸಿಂಗ್‌ (Raja Singh Row) ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಹೈದರಾಬಾದ್‌ನಲ್ಲಿರುವ ರಾಜಾ ಸಿಂಗ್‌ ಅವರ ನಿವಾಸದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಪ್ರವಾದಿ ಕುರಿತು ಹೇಳಿಕೆ ನೀಡಿದ ಕಾರಣಕ್ಕಾಗಿ ಇದಕ್ಕೂ ಮೊದಲು ಅವರನ್ನು ಬಂಧಿಸಲಾಗಿತ್ತು. ಆದರೆ, ಬಂಧನದ ದಿನವೇ ಅವರನ್ನು ಬಿಡುಗಡೆ ಮಾಡಿದ ಕಾರಣ ಹೈದರಾಬಾದ್‌ನಲ್ಲಿ ಜನರ ಪ್ರತಿಭಟನೆ ತೀವ್ರವಾಗಿತ್ತು. ಗುರುವಾರವೂ ಪ್ರತಿಭಟನೆ ಮುಂದುವರಿದಿದ್ದು, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮತ್ತೆ ರಾಜಾ ಸಿಂಗ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಆಗಸ್ಟ್‌ ೨೩ರಿಂದಲೂ ಹೈದರಾಬಾದ್‌ನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಹಾಗಾಗಿ, ನಗರದಲ್ಲಿ ಶಾಲೆ-ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ. ನಿತ್ಯವೂ ರಾಜಾ ಸಿಂಗ್‌ ಅವರನ್ನು ಬಂಧಿಸಬೇಕು ಎಂಬ ಒತ್ತಾಯ ಜಾಸ್ತಿಯಾಗಿತ್ತು. ಅಲ್ಲದೆ, ರಾಜಾ ಸಿಂಗ್‌ ಅವರ ರುಂಡ ಚೆಂಡಾಡಬೇಕು ಎಂದೂ ಕೆಲವರು ಪ್ರಚೋದನಾತ್ಮಕ ಭಾಷಣ ಮಾಡಿದ್ದರು.

ಇದನ್ನೂ ಓದಿ | Raja Singh Row | ಬೂದಿಮುಚ್ಚಿದ ಕೆಂಡದಂತಿದೆ ಹೈದ್ರಾಬಾದ್, ಕೆಲವೆಡೆ ಶಾಲೆಗಳಿಗೆ ರಜೆ, ಅಂಗಡಿಗಳು ಬಂದ್!

Exit mobile version