ಹೈದರಾಬಾದ್: ಮುಂದಿನ ೩೦ರಿಂದ ೪೦ ವರ್ಷಗಳು ಬಿಜೆಪಿಯದ್ದೇ ಯುಗವಾಗಿರಲಿದೆ. ಭಾರತ ವಿಶ್ವಗುರು ಪಟ್ಟಕ್ಕೇರಲಿದೆ ಎಂದು ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯು ತೆಲಂಗಾಣ ಮತ್ತು ಪಶ್ಚಿಮ ಬಂಗಾಳದ ಕುಟುಂಬ ರಾಜಕಾರಣವನ್ನು ಸೋಲಿಸಲಿದೆ. ತೆಲಂಗಾಣದಲ್ಲಿ ಸದ್ಯದಲ್ಲಿಯೇ ಬಿಜೆಪಿ ಸರ್ಕಾರ ರಚಿಸುವುದು ಖಚಿತ ಎಂದು ಘೋಷಿಸಿದರು.
ಕೇರಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿಯೂ ಪಕ್ಷ ಸರ್ಕಾರ ರಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ ಅವರು, ಪ್ರಾದೇಶಿಕ ಮತ್ತು ಕುಟುಂಬ ರಾಜಕಾರಣವನ್ನು ದೇಶದ ಹಿತದೃಷ್ಟಿಯಿಂದ ಸೋಲಿಸಬೇಕಾಗಿದೆ ಎಂದರು.
ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ಎಂದಿನ ದಾಟಿಯಲ್ಲಿ ತರಾಟೆಗೆ ತೆಗದುಕೊಂಡ ಅವರು, ಕುಟುಂಬದ ಹೊರತಾದ ವ್ಯಕ್ತಿಯೋರ್ವನನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಆ ಪಕ್ಷಕ್ಕೆ ಧೈರ್ಯವಿಲ್ಲವಾಗಿದೆ ಎಂದು ಕುಟುಕಿದರು. ದೇಶವನ್ನು ಬಲಿಷ್ಠ ರಾಷ್ಟ್ರವಾಗಿಲಸು ಕೇಂದ್ರದಲ್ಲಿ ಮತ್ತು ರಾಜ್ಯಗಳಲ್ಲಿ ಇನ್ನೂ ೩೦ ವರ್ಷಗಳ ಕಾಲ ಬಿಜೆಪಿ ಆಡಳಿತ ನಡೆಸಬೇಕಾಗಿದೆ ಎಂದರು.
ಇದನ್ನೂ ಓದಿ| BJP Executive | ಅಗ್ನಿಪಥ, ಗತಿಶಕ್ತಿ ಯೋಜನೆಗೆ ಕಾರ್ಯಕಾರಿಣಿ ಪ್ರಶಂಸೆ, ಇಂದು ಪ್ರಧಾನಿ ಮೋದಿ ಭಾಷಣ