ಚಂಡೀಗಢ: ಪಂಜಾಬ್‌ನಲ್ಲಿ ಖಲಿಸ್ತಾನಿ ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತಿರುವ, ಹಿಂಸಾತ್ಮಕ ಕೃತ್ಯಗಳಿಗೆ ಕಾರಣವಾಗುತ್ತಿರುವ ‘ವಾರಿಸ್ ಪಂಜಾಬ್ ದೆ’ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್‌ನನ್ನು (Amrit Pal Singh) ಪೊಲೀಸರು ಬಂಧಿಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಈತನನ್ನು ಬಂಧಿಸಲಾಗಿದ್ದು, ಇವನ ಹಿನ್ನೆಲೆ, ಹೊಂದಿರುವ ಉಗ್ರರ ನಂಟು ಭೀತಿ ಹುಟ್ಟಿಸುವಂತಿದೆ.
ಖಲಿಸ್ತಾನಿ ಪ್ರತ್ಯೇತಕತಾವಾದಿ ಅಮೃತಪಾಲ್ ಸಿಂಗ್‌ನ ದುಬೈ ಚಟುವಟಿಕೆಗಳ ಮೇಲೆ ಗುಪ್ತಚರ ಇಲಾಖೆ ಕಣ್ಗಾವಲು ಇಟ್ಟಿದೆ. ಈತ ಇತ್ತೀಚೆಗೆ ದುಬೈಗೆ ತೆರಳಿ ಖಲಿಸ್ತಾನಿ ಪರ ಕೆಲವು ಸಂಸ್ಥೆಗಳನ್ನು ಭೇಟಿ ಮಾಡಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಪಂಜಾಬ್‌ನ ಯುವಕರಲ್ಲಿ ಖಲಿಸ್ತಾನ ಬಗ್ಗೆ ಪ್ರಚಾರ ಮಾಡುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದಲೂ ಈ ಖಲಿಸ್ತಾನಿ ಪರ ಸಂಸ್ಥೆಗಳು ನಿರಂತರ ಸಂಪರ್ಕದಲ್ಲಿವೆ ಎನ್ನಲಾಗುತ್ತಿದೆ. ಪಾಕಿಸ್ತಾನದ ನೆಲದಿಂದ ಕಾರ್ಯಾಚರಣೆ ನಡೆಸುವ ಕೆಲವು ಉಗ್ರ ಸಂಘಟನೆಗಳ ಜತೆಗೂ ಇವರು ಸಂಪರ್ಕ ಹೊಂದಿದ್ದಾರೆ.
ವಾರಿಸ್ ಪಂಜಾಬ್ ದೇ ನಾಯಕ ಹಾಗೂ ಸಂಸ್ಥಾಪಕ ನಟ-ಕಾರ್ಯಕರ್ತ ದೀಪ್ ಸಿಧು ನಿಧನ ಬಳಿಕ ಆ ಸಂಘಟನೆಯ ನೇತೃತ್ವವನ್ನು ಅಮೃತ್ ಪಾಲ್ ವಹಿಸಿಕೊಂಡಿದ್ದಾನೆ. ಖಲಿಸ್ತಾನ ಚಟುವಟಿಕೆಗೆ ಸಂಬಂಧಿಸಿದಂತೆ ಗುಪ್ತಚರ ಬಳಿ ಅಮೃತ್ ಪಾಲ್ ಬಗ್ಗೆ ಮಾತ್ರ ಮಾಹಿತಿ ಇದೆ. ಆತನ ಚಟುವಟಿಕೆಗಳನ್ನು ಮಾತ್ರ ಟ್ರ್ಯಾಕ್ ಮಾಡಲಾಗುತ್ತಿದೆ.
ಕೆಲವು ಮೂಲಗಳ ಪ್ರಕಾರ, ದುಬೈ ಸಂಪರ್ಕ ಹೊಂದಿರುವ ಖಲಿಸ್ತಾನಿ ಘಟಕಗಳ ವಿರುದ್ಧ ಎನ್‌ಐಎ ತನಿಖೆ ನಡೆಸುತ್ತಿರುವ ವಿವಿಧ ಭಯೋತ್ಪಾದಕ ಹಣಕಾಸು ಪ್ರಕರಣಗಳಿವೆ. ಆದರೆ, ದುಬೈನಲ್ಲಿರುವ ತನ್ನ ಹತ್ತಿರದ ಸಂಬಂಧಿಯೊಂದಿಗೆ ಸಂಪರ್ಕ ಹೊಂದಿರುವ ಸಂಧು ಕಾರ್ಗೋ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಮೃತಪಾಲ್ ಬಗ್ಗೆ ಈವರೆಗೆ ಸಂಸ್ಥೆಗಳು ಯಾವುದೇ ಮಾಹಿತಿಯನ್ನು ಸಂಗ್ರಹಿಸಲು ಯಶಸ್ವಿಯಾಗಿಲ್ಲ ಎನ್ನಲಾಗುತ್ತಿದೆ. ಕಪುರ್ತಲಾನಲ್ಲಿ ಶಿಕ್ಷಣ ಪೂರೈಸಿದ ಅಮೃತ್ ಪಾಲ್ ಕೆಲಸಕ್ಕಾಗಿ ದುಬೈಗೆ ತೆರಳಿದರು. ಇಲ್ಲಿ ಸುಮಾರು ಹತ್ತು ವರ್ಷ ಕೆಲಸ ಮಾಡಿದ್ದಾನೆ.
ಉಗ್ರ ಸಂಘಟನೆಗಳ ಜತೆ ಸಂಪರ್ಕ
ಉಗ್ರ ಸಂಘಟನೆಗಳಾದ ಜೈಷೆ ಮೊಹಮ್ಮದ್(JeM), ಲಷ್ಕರೆ ತಯ್ಯಬಾ(LeT) ಮತ್ತು ಖಲಿಸ್ತಾನ್ ಲಬರೇ,ನ್ ಫೋರ್ಸ್(KLF) ನಡುವೆ ಸಂಪರ್ಕ ಏರ್ಪಟ್ಟಿದೆ. ಡ್ರೋನ್‌ಗಳ ಮೂಲಕ ಪಂಜಾಬ್‌ನೊಳಗೇ ಡ್ರಗ್ಸ್ ಸಪ್ಲೈ ಮಾಡಲಾಗುತ್ತಿದೆ. ಈ ಮೂಲಕ ಭಿನ್ನ ತಂತ್ರವನ್ನು ಹೆಣೆದಿರುವ ಸಾಧ್ಯತೆಗಳಿವೆ. ಪಾಕಿಸ್ತಾನ ಮೂಲದ ಕೆಎಲ್ಎಫ್ ನಾಯಕ ಹರ್ಮೀತ್ ಸಿಂಗ್ ಮತ್ತು ದುಬೈ ಮೂಲದ ಡ್ರಗ್ ಡೀಲರ್ ಜಸ್ಮೀತ್ ಸಿಂಗ್ ಹಕೀಮಜಾದಾ ಅವರು ಪಂಜಾಬ್‌ನಲ್ಲಿ ಡ್ರಗ್ ಜಾಲವನ್ನು ಹೊಂದಿದ್ದು, ಭಯೋತ್ಪಾದನೆಗೆ ಹಣಕಾಸು ನೆರವು ನೀಡಲಾಗುತ್ತಿದೆ ಎನ್ನುತ್ತವೆ ಗುಪ್ತಚರ ಮೂಲಗಳು.
ಐಎಸ್ಐ ಕೈಗೊಂಬೆ ಅಮೃತಪಾಲ್ ಸಿಂಗ್?
ಭಾರತದಲ್ಲಿ ಭಯೋತ್ಪಾದನಗೆ ಕುಮ್ಮಕ್ಕು ನೀಡುವ ಪಾಕಿಸ್ತಾದನ ಗುಪ್ತಚರ ಸಂಸ್ಥೆ ಐಎಸ್ಐ, ಖಲಿಸ್ತಾನಪರ ನಾಯಕ ಅಮೃತಪಾಲ್‌ನನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಪಂಜಾಬ್‌ನಲ್ಲಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲು ಪಾಕಿಸ್ತಾನ ಮುಂದಾಗಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಈ ಹಿಂದೆಯೇ ಎಚ್ಚರಿಸಿವೆ. ಈಗ ಕೊನೆಗೂ ಅಮೃತ್‌ಪಾಲ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Amritpal Singh: ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ವಿಷಬೀಜ ಬಿತ್ತುತ್ತಿರುವ ಅಮೃತ್ ಪಾಲ್ ಸಿಂಗ್ ಬಂಧನ