Site icon Vistara News

Amritpal Singh: ಅಮೃತ್ ಪಾಲ್ ಸಿಂಗ್ ಪೊಲೀಸರಿಗೆ ಶರಣಾಗುವ ಸಾಧ್ಯತೆ! ಗುರುದ್ವಾರಗಳಲ್ಲಿ ಅಡಗಿರುವ ಶಂಕೆ

Amritpal Singh

ನವದೆಹಲಿ: ತಲೆಮರೆಸಿಕೊಂಡಿರುವ ವಾರಿಸ್ ಪಂಜಾಬ್ ದೇ (Waris Punjab De) ಮುಖ್ಯಸ್ಥ, ಖಲಿಸ್ತಾನಿ ಪರ ನಾಯಕ ಅಮೃತ್ ಪಾಲ್ ಸಿಂಗ್ (Amritpal Singh) ಪಂಜಾಬ್‌ ಪೊಲೀಸರಿಗೆ ಶರಣಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಪಂಜಾಬ್‌ನ ಅಮೃತಸರ್, ತಲವಂಡಿ ಸಾಬೋ ಮತ್ತು ಬಟಿಂಡಾ, ಆನಂದಪುರ ಸಾಹೀಬ್‌ ಪ್ರದೇಶಗಳ ಗುರುದ್ವಾರ‌ಗಳ ಆಶ್ರಯವನ್ನು ಆತ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳು ನೀಡಿವೆ.

ಈ ಮೂರ್ನಾಲ್ಕು ನಗರಗಳಲ್ಲಿ ಇರುವ ಯಾವುದೋ ಒಂದು ಗುರುದ್ವಾರವನ್ನು ಅಮೃತ್ ಪಾಲ್ ಸಿಂಗ್ ಸೇರಿಕೊಳ್ಳಬಹುದು ಎಂಬ ಮಾಹಿತಿ ತಮಗೆ ದೊರೆತಿದೆ ಎಂದು ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ ಹೊರಗೆ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿದೆ. ಅಮೃತ್ ಪಾಲ್ ಸಿಂಗ್ ಮಹಿಳೆಯ ವೇಷವನ್ನು ಧರಿಸಿಕೊಂಡು ದರ್ಬಾರ್ ಸಾಹೀಬ್ ಕಾಂಪ್ಲೆಕ್ಸ್ ಪ್ರವೇಶಿಸುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ಗುಪ್ತಚರ ಸಂಸ್ಥೆಗಳಿಗೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: Amritpal Singh: ನೇಪಾಳದಲ್ಲಿ ಅಮೃತ್ ಪಾಲ್ ಸಿಂಗ್, ದೇಶ ಬಿಟ್ಟು ಹೋಗದಂತೆ ಆತನನ್ನು ತಡೆಯಲು ಭಾರತ ಮನವಿ

ಮಂಗಳವಾರ ಮುಂಜಾನೆ, ಅಮೃತಪಾಲನನ್ನು ಫಗ್ವಾರಾ ಬಳಿಯ ಹಳ್ಳಿಯೊಂದರಲ್ಲಿ ಇರುವುದನ್ನು ಪತ್ತೆ ಹಚ್ಚಲಾಗಿತ್ತು. ಆದರೆ ಆತನನ್ನು ಬೆನ್ನಟ್ಟಿದ ಪೊಲೀಸರನ್ನು ಯಾಮಾರಿಸಿ ಆತ ಮತ್ತೆ ತಪ್ಪಿಸಿಕೊಂಡಿದ್ದಾನೆ ಎನ್ನಲಾಗಿದೆ. ಈ ಘಟನೆಯ ಬಳಿಕ, ಪ್ರತ್ಯೇಕತಾವಾದಿ ನಾಯಕ ಈ ಪ್ರದೇಶದಲ್ಲಿ ಸಕ್ರಿಯವಾಗಿದ್ದಾನೆ ಎಂದು ಸೂಚಿಸುವ ತಾಜಾ ಗುಪ್ತಚರ ಮಾಹಿತಿಯೊಂದಿಗೆ ದೋಬಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಅಮೃತಪಾಲ್ ಅವರು ಫಗ್ವಾರಾದಿಂದ ಓಡಿಹೋದ ನಂತರ ಕೊನೆಯದಾಗಿ ತಿಳಿದಿರುವ ಸ್ಥಳವಾಗಿದೆ.

Exit mobile version