Site icon Vistara News

Amritpal Singh : ಸನ್​ಗ್ಲಾಸ್​, ಡೆನ್ಹಿಮ್​ ಜಾಕೆಟ್​ ಹಾಕಿಕೊಂಡು ಅಮೃತ್​ಪಾಲ್​ ಸಿಂಗ್ ಡೆಲ್ಲಿ ರೌಂಡ್ಸ್​!

Amritpal Singh rounds Delhi wearing sunglasses and a denim jacket!

#image_title

ನವ ದೆಹಲಿ: ಖಲಿಸ್ತಾನಿ ನಾಯಕ ಅಮೃತ್​ಪಾಲ್​ ಸಿಂಗ್ (Amritpal Singh) ಬಂಧನಕ್ಕಾಗಿ ಪಂಜಾಬ್​ ಪೊಲೀಸರು ಬೆಟ್ಟ, ಬಿಲಗಳಲ್ಲಿ ಹುಡುಕುತ್ತಿದ್ದರೆ, ಆತ ನವ ದೆಹಲಿಯ ರಸ್ತೆಗಳಲ್ಲಿ ಸನ್​ಗ್ಲಾಸ್​, ಡೆನ್ಹಿಮ್​ ಜಾಕೆಟ್​ ಹಾಕಿಕೊಂಡು ಭರ್ಜರಿಯಾಗಿ ಓಡಾಟ ನಡೆಸುತ್ತಿದ್ದಾನೆ. ಒಂದೇ ಒಂದು ವ್ಯತ್ಯಾಸ ಅಂದರೆ ತಲೆಯಲ್ಲಿ ಟರ್ಬನ್​ ಇಲ್ಲ. ಯಾರಿಗೂ ಗುರುತು ಸಿಗುವುದಿಲ್ಲ ಎಂಬ ವಿಶ್ವಾಸದಲ್ಲಿ ಎದೆಯುಬ್ಬಿಸಿ ನಡೆಯುತ್ತಿದ್ದಾನೆ ಪ್ರತ್ಯೇಕತಾವಾದಿ ನಾಯಕ. ಜತೆಗೆ ಸಹಚರ ಪಾಪಲ್​ಪ್ರೀತ್​ ಸಿಂಗ್​ ಕೂಡ ಇದ್ದಾನೆ. ಸಿಸಿ ಟಿವಿ ಕ್ಯಾಮೆರಾವೊಂದರಲ್ಲಿ ಆತ ಬಿಂದಾಸ್​ ಆಗಿ ಬೀದಿ ಸುತ್ತುತ್ತಿರುವ ವಿಡಿಯೊ ಸೆರೆಯಾಗಿದೆ.

ಮಾರ್ಚ್​ 18ರಂದು ಅಮೃತ್​ಪಾಲ್​ ಸಿಂಗ್ ಬಂಧನಕ್ಕೆ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿತ್ತು. 10 ದಿನಗಳಾದರೂ ಆತನ ಪತ್ತೆಯಿಲ್ಲ, ಸುಳಿವಿಲ್ಲ. ನೇಪಾಳದ ಮೂಲಕ ವಿದೇಶಕ್ಕೆ ಹಾರಿದ್ದಾನೆ, ಬಿಯರ್​ ಕ್ಯಾನ್​ ಹಿಡಿದುಕೊಂಡು ಆರಾಮಕ್ಕೆ ಇದ್ದಾನೆ ಎಂದೆಲ್ಲ ಹೇಳಲಾಗುತ್ತಿದ್ದರೂ ಪೊಲೀಸರಿಗೆ ಆತನ ಇರುವಿಕೆಯ ಬಗ್ಗೆ ಕಿಂಚಿತ್ತೂ ಮಾಹಿತಿ ಸಿಗುತ್ತಿಲ್ಲ. ಆದರೆ, ಪೊಲೀಸರು ಅಮೃತ್​ಪಾಲ್​ನನ್ನು ಬೆನ್ನಟ್ಟಿದ ಮೂರು ದಿನಗಳ ಬಳಿಕ ಆತ ದೆಹಲಿಯಲ್ಲಿ ಇದ್ದಿದ್ದು ವಿಡಿಯೊ ಫೂಟೇಜ್​ ಮೂಲಕ ಗೊತ್ತಾಗಿದೆ.

ಅಮೃತ್​ಪಾಲ್​ ಡೆಲ್ಲಿಯಲ್ಲೇ ಬಚ್ಚಿಕೊಂಡು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾನೆ ಎಂಬ ಗುಮಾನಿಯೂ ಇದೀಗ ಶುರುವಾಗಿದೆ. ಪೊಲೀಸರು ಪಂಜಾಬ್​ನಲ್ಲಿ ಅಮೃತ್​ಪಾಲ್​ಗಾಗಿ ಅಟ್ಟಳಿಗೆ, ಮಂಚದಡಿಯಲ್ಲೆಲ್ಲ ಹುಡುಕುತ್ತಿರುವಾಗ ಆತ ನನ್ನ ಸಂಪರ್ಕಗಳನ್ನು ಬಳಸಿಕೊಂಡು ಹರಿಯಾಣದ ಕುರುಕ್ಷೇತ್ರದ ಮೂಲಕ ಡೆಲ್ಲಿ ತಲುಪಿರಬಹುದು ಎಂದು ಹೇಳಲಾಗುತ್ತಿದೆ. ಬಂದವನೇ ಮೊದಲು ತನ್ನ ಪ್ರಮುಖ ಗುರುತಾಗಿರುವ ಟರ್ಬನ್​ ಕಿತ್ತು ಮೂಲೆಗಿಟ್ಟು ಚಂದದ ತಂಪುಕನ್ನಡಕ ಹಾಕಿಕೊಂಡು ಓಡಾಡುತ್ತಿದ್ದಾನೆ. ಡೆನ್ಹಿಮ್​ ಜಾಕೆಟ್​ ಹಾಕಿಕೊಂಡ ಬಳಿಕವಂತೂ ಯಾರೆಂದು ಗುರ್ತು ಹಿಡಿಯಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.

ಗಡಿಯಲ್ಲಿ ಕಣ್ಗಾವಲು

ಅಮೃತ್​ಪಾಲ್​ ಸಿಂಗ್​ ಇನ್ನೂ ಡೆಲ್ಲಿಯಲ್ಲೇ ಇದ್ದಾನೆ ಎಂಬುದು ಪೊಲೀಸರ ಅನುಮಾನ. ಅಲ್ಲದೆ, ನಕಲಿ ಪಾಸ್​ಪೋರ್ಟ್​ ಬಳಸಿಕೊಂಡು ನೇಪಾಳಕ್ಕೆ ಪರಾರಿಯಾಗುವ ಸಾಧ್ಯತೆಗಳೂ ಹೆಚ್ಚು ಎನ್ನಲಾಗುತ್ತಿದೆ. ಹೀಗಾಗಿ ಅಲ್ಲಿನ ಗಡಿಗಳಲ್ಲಿ ಭಾರತದ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ.

ಸೋಮವಾರ ಅಮೃತ್​ಪಾಲ್​ ಸಿಂಗ್ ಬಿಯರ್​ ಟಿನ್​ ಹಿಡಿದುಕೊಂಡು ಆರಾಮವಾಗಿ ಕುಳಿತಿರುವ ಫೋಟೋ ಒಂದು ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡಿತ್ತು. ಪೊಲೀಸರ ಪ್ರಕಾರ ಪಂಜಾಬ್​ನಿಂದ ಓಡಿ ಹೋಗಿರುವ ಆತ ತನ್ನ ಪರಿಚಿತರ ಮೂಲಕ ಆರಾಮ ಜೀವನ ನಡೆಸುತ್ತಿದ್ದಾನೆ.

Exit mobile version