Amritpal Singh rounds Delhi wearing sunglasses and a denim jacket!Amritpal Singh : ಸನ್​ಗ್ಲಾಸ್​, ಡೆನ್ಹಿಮ್​ ಜಾಕೆಟ್​ ಹಾಕಿಕೊಂಡು ಅಮೃತ್​ಪಾಲ್​ ಸಿಂಗ್ ಡೆಲ್ಲಿ ರೌಂಡ್ಸ್​! - Vistara News

ದೇಶ

Amritpal Singh : ಸನ್​ಗ್ಲಾಸ್​, ಡೆನ್ಹಿಮ್​ ಜಾಕೆಟ್​ ಹಾಕಿಕೊಂಡು ಅಮೃತ್​ಪಾಲ್​ ಸಿಂಗ್ ಡೆಲ್ಲಿ ರೌಂಡ್ಸ್​!

ಅಮೃತ್​ಪಾಲ್​ ಸಿಂಗ್​ (Amritpal Singh) ಪೊಲೀಸರು ಪಂಜಾಬ್​ನಲ್ಲಿ ಹುಡುಕುತ್ತಿರುವ ನಡುವೆಯೇ ಡೆಲ್ಲಿಯಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Amritpal Singh rounds Delhi wearing sunglasses and a denim jacket!
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಖಲಿಸ್ತಾನಿ ನಾಯಕ ಅಮೃತ್​ಪಾಲ್​ ಸಿಂಗ್ (Amritpal Singh) ಬಂಧನಕ್ಕಾಗಿ ಪಂಜಾಬ್​ ಪೊಲೀಸರು ಬೆಟ್ಟ, ಬಿಲಗಳಲ್ಲಿ ಹುಡುಕುತ್ತಿದ್ದರೆ, ಆತ ನವ ದೆಹಲಿಯ ರಸ್ತೆಗಳಲ್ಲಿ ಸನ್​ಗ್ಲಾಸ್​, ಡೆನ್ಹಿಮ್​ ಜಾಕೆಟ್​ ಹಾಕಿಕೊಂಡು ಭರ್ಜರಿಯಾಗಿ ಓಡಾಟ ನಡೆಸುತ್ತಿದ್ದಾನೆ. ಒಂದೇ ಒಂದು ವ್ಯತ್ಯಾಸ ಅಂದರೆ ತಲೆಯಲ್ಲಿ ಟರ್ಬನ್​ ಇಲ್ಲ. ಯಾರಿಗೂ ಗುರುತು ಸಿಗುವುದಿಲ್ಲ ಎಂಬ ವಿಶ್ವಾಸದಲ್ಲಿ ಎದೆಯುಬ್ಬಿಸಿ ನಡೆಯುತ್ತಿದ್ದಾನೆ ಪ್ರತ್ಯೇಕತಾವಾದಿ ನಾಯಕ. ಜತೆಗೆ ಸಹಚರ ಪಾಪಲ್​ಪ್ರೀತ್​ ಸಿಂಗ್​ ಕೂಡ ಇದ್ದಾನೆ. ಸಿಸಿ ಟಿವಿ ಕ್ಯಾಮೆರಾವೊಂದರಲ್ಲಿ ಆತ ಬಿಂದಾಸ್​ ಆಗಿ ಬೀದಿ ಸುತ್ತುತ್ತಿರುವ ವಿಡಿಯೊ ಸೆರೆಯಾಗಿದೆ.

ಮಾರ್ಚ್​ 18ರಂದು ಅಮೃತ್​ಪಾಲ್​ ಸಿಂಗ್ ಬಂಧನಕ್ಕೆ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿತ್ತು. 10 ದಿನಗಳಾದರೂ ಆತನ ಪತ್ತೆಯಿಲ್ಲ, ಸುಳಿವಿಲ್ಲ. ನೇಪಾಳದ ಮೂಲಕ ವಿದೇಶಕ್ಕೆ ಹಾರಿದ್ದಾನೆ, ಬಿಯರ್​ ಕ್ಯಾನ್​ ಹಿಡಿದುಕೊಂಡು ಆರಾಮಕ್ಕೆ ಇದ್ದಾನೆ ಎಂದೆಲ್ಲ ಹೇಳಲಾಗುತ್ತಿದ್ದರೂ ಪೊಲೀಸರಿಗೆ ಆತನ ಇರುವಿಕೆಯ ಬಗ್ಗೆ ಕಿಂಚಿತ್ತೂ ಮಾಹಿತಿ ಸಿಗುತ್ತಿಲ್ಲ. ಆದರೆ, ಪೊಲೀಸರು ಅಮೃತ್​ಪಾಲ್​ನನ್ನು ಬೆನ್ನಟ್ಟಿದ ಮೂರು ದಿನಗಳ ಬಳಿಕ ಆತ ದೆಹಲಿಯಲ್ಲಿ ಇದ್ದಿದ್ದು ವಿಡಿಯೊ ಫೂಟೇಜ್​ ಮೂಲಕ ಗೊತ್ತಾಗಿದೆ.

ಅಮೃತ್​ಪಾಲ್​ ಡೆಲ್ಲಿಯಲ್ಲೇ ಬಚ್ಚಿಕೊಂಡು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾನೆ ಎಂಬ ಗುಮಾನಿಯೂ ಇದೀಗ ಶುರುವಾಗಿದೆ. ಪೊಲೀಸರು ಪಂಜಾಬ್​ನಲ್ಲಿ ಅಮೃತ್​ಪಾಲ್​ಗಾಗಿ ಅಟ್ಟಳಿಗೆ, ಮಂಚದಡಿಯಲ್ಲೆಲ್ಲ ಹುಡುಕುತ್ತಿರುವಾಗ ಆತ ನನ್ನ ಸಂಪರ್ಕಗಳನ್ನು ಬಳಸಿಕೊಂಡು ಹರಿಯಾಣದ ಕುರುಕ್ಷೇತ್ರದ ಮೂಲಕ ಡೆಲ್ಲಿ ತಲುಪಿರಬಹುದು ಎಂದು ಹೇಳಲಾಗುತ್ತಿದೆ. ಬಂದವನೇ ಮೊದಲು ತನ್ನ ಪ್ರಮುಖ ಗುರುತಾಗಿರುವ ಟರ್ಬನ್​ ಕಿತ್ತು ಮೂಲೆಗಿಟ್ಟು ಚಂದದ ತಂಪುಕನ್ನಡಕ ಹಾಕಿಕೊಂಡು ಓಡಾಡುತ್ತಿದ್ದಾನೆ. ಡೆನ್ಹಿಮ್​ ಜಾಕೆಟ್​ ಹಾಕಿಕೊಂಡ ಬಳಿಕವಂತೂ ಯಾರೆಂದು ಗುರ್ತು ಹಿಡಿಯಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.

ಗಡಿಯಲ್ಲಿ ಕಣ್ಗಾವಲು

ಅಮೃತ್​ಪಾಲ್​ ಸಿಂಗ್​ ಇನ್ನೂ ಡೆಲ್ಲಿಯಲ್ಲೇ ಇದ್ದಾನೆ ಎಂಬುದು ಪೊಲೀಸರ ಅನುಮಾನ. ಅಲ್ಲದೆ, ನಕಲಿ ಪಾಸ್​ಪೋರ್ಟ್​ ಬಳಸಿಕೊಂಡು ನೇಪಾಳಕ್ಕೆ ಪರಾರಿಯಾಗುವ ಸಾಧ್ಯತೆಗಳೂ ಹೆಚ್ಚು ಎನ್ನಲಾಗುತ್ತಿದೆ. ಹೀಗಾಗಿ ಅಲ್ಲಿನ ಗಡಿಗಳಲ್ಲಿ ಭಾರತದ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ.

ಸೋಮವಾರ ಅಮೃತ್​ಪಾಲ್​ ಸಿಂಗ್ ಬಿಯರ್​ ಟಿನ್​ ಹಿಡಿದುಕೊಂಡು ಆರಾಮವಾಗಿ ಕುಳಿತಿರುವ ಫೋಟೋ ಒಂದು ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡಿತ್ತು. ಪೊಲೀಸರ ಪ್ರಕಾರ ಪಂಜಾಬ್​ನಿಂದ ಓಡಿ ಹೋಗಿರುವ ಆತ ತನ್ನ ಪರಿಚಿತರ ಮೂಲಕ ಆರಾಮ ಜೀವನ ನಡೆಸುತ್ತಿದ್ದಾನೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

PM Narendra Modi: ಭೂಕುಸಿತ ಪೀಡಿತ ವಯನಾಡಿಗೆ ಇಂದು ನರೇಂದ್ರ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ವಯನಾಡ್‌ ಭೂಕುಸಿತದ ಸಂತ್ರಸ್ತರನ್ನು ಆಸ್ಪತ್ರೆಗಳು ಮತ್ತು ಪರಿಹಾರ ಶಿಬಿರಗಳಲ್ಲಿ ಭೇಟಿ ಮಾಡಲಿದ್ದಾರೆ. ದುರಂತದಲ್ಲಿ ಸಂತ್ರಸ್ತರಾದವರಿಗೆ ಸರಿಯಾದ ಬೆಂಬಲ, ಪರಿಹಾರ ದೊರೆಯುವಿಕೆಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ.

VISTARANEWS.COM


on

pm narendra modi wayanad landslide
Koo

ಹೊಸದಿಲ್ಲಿ: ದಾರುಣ ಭೂಕುಸಿತ (Kerala Landslide) ಸಂಭವಿಸಿದ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು, ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಆಗಸ್ಟ್ 10) ಕೇರಳದ ವಯನಾಡ್ (Wayanad Landslide) ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಪ್ರಧಾನಿ ಮೋದಿ ಭೂಕುಸಿತದ ಸಂತ್ರಸ್ತರನ್ನು ಆಸ್ಪತ್ರೆಗಳು ಮತ್ತು ಪರಿಹಾರ ಶಿಬಿರಗಳಲ್ಲಿ ಭೇಟಿ ಮಾಡಲಿದ್ದಾರೆ. ದುರಂತದಲ್ಲಿ ಸಂತ್ರಸ್ತರಾದವರಿಗೆ ಸರಿಯಾದ ಬೆಂಬಲ, ಪರಿಹಾರ ದೊರೆಯುವಿಕೆಯನ್ನು ಖಚಿತಪಡಿಸಿಕೊಳ್ಳಲಿದ್ದಾರೆ.

ವಯನಾಡ್‌ನ ಮಾಜಿ ಸಂಸದ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಭೇಟಿಯ ನಂತರ ಪ್ರಧಾನಿ ವಯನಾಡ್ ಭೂಕುಸಿತವನ್ನು ʼರಾಷ್ಟ್ರೀಯ ವಿಪತ್ತುʼ ಎಂದು ಘೋಷಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

“ಮೋದಿ ಜೀ, ಭೀಕರ ದುರಂತದ ಬಗ್ಗೆ ವೈಯಕ್ತಿಕವಾಗಿ ಅವಲೋಕನ ಮಾಡಲು ವಯನಾಡ್‌ಗೆ ಭೇಟಿ ನೀಡುತ್ತಿರುವುದಕ್ಕಾಗಿ ಧನ್ಯವಾದಗಳು. ಇದೊಂದು ಒಳ್ಳೆಯ ನಿರ್ಧಾರ. ಪ್ರಧಾನಿ ಒಮ್ಮೆ ವಿನಾಶದ ಪ್ರಮಾಣವನ್ನು ನೇರವಾಗಿ ನೋಡಿದ ನಂತರ, ಅವರು ಅದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದು ಗಾಂಧಿ ಶುಕ್ರವಾರ ರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೋದಿ ಭೇಟಿಯ ಪೂರ್ಣ ವೇಳಾಪಟ್ಟಿ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕೇರಳದ ಕಣ್ಣೂರು ತಲುಪುವ ನಿರೀಕ್ಷೆಯಿದೆ. ಅಲ್ಲಿಂದ ಅವರು ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರೆ. ನಂತರ, ಮಧ್ಯಾಹ್ನ 12:15ರ ಸುಮಾರಿಗೆ ಭೂಕುಸಿತದಿಂದ ಸಂತ್ರಸ್ತವಾಗಿರುವ ಸ್ಥಳಗಳಿಗೆ ನೇರ ಭೇಟಿ ನೀಡಲಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಸ್ಥಳಾಂತರ ಕಾರ್ಯಾಚರಣೆಗಳ ಕುರಿತು ರಕ್ಷಣಾ ತಂಡಗಳಿಂದ ವಿವರ ಪಡೆಯಲಿದ್ದಾರೆ. ಭೂಕುಸಿತದಿಂದ ಬದುಕುಳಿದವರು ಪ್ರಸ್ತುತ ಪುನರ್ವಸತಿ ಬಯಸುತ್ತಿರುವ ಪರಿಹಾರ ಶಿಬಿರ ಮತ್ತು ಆಸ್ಪತ್ರೆಗೆ ಪ್ರಧಾನಿ ಭೇಟಿ ನೀಡಲಿದ್ದಾರೆ. ಸಂತ್ರಸ್ತರೊಂದಿಗೆ ಸಂವಾದ ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ನಂತರ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅಲ್ಲಿನ ಪರಿಹಾರ ಪ್ರಯತ್ನಗಳ ಬಗ್ಗೆ ವಿವರವಾಗಿ ತಿಳಿಯಲಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Kearala CM Pinarayi Vijayan) ಅವರು ಈ ವಾರದ ಆರಂಭದಲ್ಲಿ ಮೋದಿ ಅವರ ವಯನಾಡ್ ಭೇಟಿಯನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

400ಕ್ಕೂ ಹೆಚ್ಚು ಸಾವು

ಜುಲೈ 30ರಂದು ವಯನಾಡಿನ ಚೂರಲ್ಮಲಾ ಮತ್ತು ಮುಂಡಕ್ಕೈನಲ್ಲಿ ಸಂಭವಿಸಿದ ಭಾರಿ ಭೂಕುಸಿತ ವ್ಯಾಪಕ ವಿನಾಶವನ್ನು ಸೃಷ್ಟಿಸಿದ್ದವು. ಭೂಕುಸಿತದಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 150 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಪತ್ತೆಯಾದ ಮೃತದೇಹಗಳ ಡಿಎನ್‌ಎ ಫಲಿತಾಂಶದ ಬಳಿಕ ಅಂತಿಮ ಸಾವಿನ ಸಂಖ್ಯೆ ಖಚಿತವಾಗಲಿದೆ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: Wayanad Tragedy: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

Continue Reading

ವಿದೇಶ

Bangladesh Unrest: ಶೇಖ್‌ ಹಸೀನಾ ಓಡಿ ಬಂದ ಬಳಿಕ ಬಾಂಗ್ಲಾದೇಶದಲ್ಲಿ 232 ಜನರ ಕಗ್ಗೊಲೆ, ಹಿಂದೂಗಳೇ ಟಾರ್ಗೆಟ್

Bangladesh Unrest: ಈ ವಾರದ ಆರಂಭದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿರ್ಗಮನದ ನಂತರ ದೇಶದ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಶುಕ್ರವಾರ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನೂರಾರು ಜನ ಹಿಂದೂಗಳ ಪ್ರತಿಭಟನೆ ನಡೆಸಿದರು.

VISTARANEWS.COM


on

Bangladesh Unrest hindus protest
Koo

ಢಾಕಾ: ಕಳೆದ ಮೂರು ದಿನಗಳಲ್ಲಿ ಬಾಂಗ್ಲಾದೇಶದಾದ್ಯಂತ (Bangladesh Unrest) ನಡೆದ ವಿವಿಧ ದಾಳಿಗಳು ಮತ್ತು ಘರ್ಷಣೆಗಳಲ್ಲಿ (Bangladesh violence) ಕನಿಷ್ಠ 232 ಜನರು ಸಾವನ್ನಪ್ಪಿದ್ದಾರೆ. ಹೆಚ್ಚಾಗಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂ (Hindus) ಸಮುದಾಯವನ್ನೇ ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ. ಅಮಾಯಕ ಹಿಂದೂಗಳ ಮೇಲೆ ಹಲ್ಲೆ, ಅತ್ಯಾಚಾರಗಳು (hindus protest) ನಿರಂತರವಾಗಿವೆ.

ಅಲ್ಲಿನ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಆಗಸ್ಟ್ 5ರಂದು ರಾಜೀನಾಮೆ ನೀಡಿ ಭಾರತಕ್ಕೆ (India) ಪಲಾಯನ ಮಾಡಿದ್ದರು. ಅವರ ಪದಚ್ಯುತಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಕಳೆದ ಮೂರು ವಾರಗಳಿಂದ ಬಾಂಗ್ಲಾದೇಶದಲ್ಲಿ ನಡೆದ ತೀವ್ರ ಮತ್ತು ರಕ್ತಸಿಕ್ತ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾಯಿತು.

ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ (Muhammad Yunus) ನೇತೃತ್ವದ ಮಧ್ಯಂತರ ಸರ್ಕಾರ ದೇಶದ ಆಡಳಿತವನ್ನು ವಹಿಸಿಕೊಂಡಿದೆ. ವರದಿಗಳು ತಿಳಿಸುವಂತೆ ಇದುವರೆಗೆ 469 ಜನ ಗಲಭೆಗಳಲ್ಲಿ ಸತ್ತಿದ್ದಾರೆ. ಸ್ಥಳೀಯ ಮಾಧ್ಯಮಗಳು ಹೇಳುವಂತೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆ ತೀವ್ರ ಕಿರುಕುಳ ಸೃಷ್ಟಿಸಲಾಗುತ್ತಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಯಭೀತರಾದ ಬಾಂಗ್ಲಾದೇಶಿಗಳು ಅಕ್ರಮವಾಗಿ ಭಾರತಕ್ಕೆ ದಾಟಲು ಹಲವಾರು ಪ್ರಯತ್ನಗಳನ್ನು ನಡೆಸಿದರು. ಆದರೆ ಅವರನ್ನು ಬಿಎಸ್‌ಎಫ್‌ ಹಿಮ್ಮೆಟ್ಟಿಸಿದೆ.

ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ, ಶೇಖ್ ಹಸೀನಾ ಅವರು ದೇಶದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ. ಶೇಖ್‌ ಹಸೀನಾಗೆ ಆಶ್ರಯ ನೀಡಿರುವ ಹಿನ್ನೆಲೆಯಲ್ಲಿ, ಭಾರತವು ತನ್ನ ನೆರೆಹೊರೆಯವರೊಂದಿಗೆ ಸಂಬಂಧವನ್ನು ಹಾಳುಮಾಡುವ ಅಪಾಯದಲ್ಲಿದೆ ಎಂದು ಎಚ್ಚರಿಸಿದೆ.

ಜುಲೈ 16 ಮತ್ತು ಆಗಸ್ಟ್ 4ರ ನಡುವಿನ ಮೀಸಲಾತಿ ವಿರೋಧಿ ವಿದ್ಯಾರ್ಥಿ ಚಳುವಳಿಗಳ ವೇಳೆ ಒಟ್ಟು 328 ಸಾವುಗಳು ವರದಿಯಾಗಿವೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಹೀಗಾಗಿ, ಕಳೆದ 23 ದಿನಗಳಲ್ಲಿ ಒಟ್ಟು ಸಾವಿನ ಸಂಖ್ಯೆ 560 ಕ್ಕೆ ತಲುಪಿದೆ.

ಈ ವಾರದ ಆರಂಭದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿರ್ಗಮನದ ನಂತರ ದೇಶದ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಶುಕ್ರವಾರ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನೂರಾರು ಜನ ಹಿಂದೂಗಳ ಪ್ರತಿಭಟನೆ ನಡೆಸಿದರು. ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಹಿಂದೂ ಮನೆಗಳು, ವ್ಯಾಪಾರಗಳು ಮತ್ತು ದೇವಾಲಯಗಳ ಮೇಲೆ ದಾಳಿ ನಡೆದಿದೆ. ಇವುಗಳಲ್ಲಿ ಶಾಲಾ ಶಿಕ್ಷಕಿಯೊಬ್ಬರು ಸಾವನ್ನಪ್ಪಿ ಕನಿಷ್ಠ 45 ಮಂದಿ ಗಾಯಗೊಂಡರು.

ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯ ಸುಮಾರು 8 ಪ್ರತಿಶತ ಹಿಂದೂಗಳಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಇದು ಕಳೆದ ತಿಂಗಳು ಕೋಟಾ ವಿರೋಧಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಯ ನಂತರ ಮುಸ್ಲಿಮರ ಕೋಪದ ಕೇಂದ್ರಬಿಂದುವಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗಿದೆ. ಆದರೆ ಯೂನಸ್ ಹಾಗೂ ಮಿಲಿಟರಿ ಮತ್ತು ಅಧ್ಯಕ್ಷರು, ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: Muhammad Yunus: ಹಿಂದುಗಳನ್ನು ಮೊದಲು ರಕ್ಷಿಸಿ; ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ಗೆ ಮೋದಿ ಆಗ್ರಹ

Continue Reading

ಅಂಕಣ

ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!

ರಾಜಮಾರ್ಗ ಅಂಕಣ: ಅತ್ಯಂತ ಪ್ರಬಲ ಇಚ್ಛಾಶಕ್ತಿ, ನಿರಂತರ ಪ್ರಯತ್ನ, ಎಂದಿಗೂ ಬತ್ತಿ ಹೋಗದ ಸ್ಫೂರ್ತಿ, ಬೆಟ್ಟದಷ್ಟು ಆತ್ಮವಿಶ್ವಾಸ ಇವುಗಳ ಜೊತೆಗೆ 2016ರಲ್ಲಿ ಅವರು ಮೊದಲ ಬಾರಿಗೆ ಐಎಎಸ್ ಪರೀಕ್ಷೆಯನ್ನು ಬರೆದು ಮೊದಲನೆಯ ಪ್ರಯತ್ನದಲ್ಲಿಯೇ ತೇರ್ಗಡೆಯಾದರು!

VISTARANEWS.COM


on

pranjal patil ರಾಜಮಾರ್ಗ ಅಂಕಣ
Koo

ಆಕೆಯ ಯಾವ ಕನಸಿಗೂ ಕುರುಡುತನ ಅಡ್ಡಿ ಆಗಲೇ ಇಲ್ಲ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಭಾರತದ ಅತ್ಯಂತ ಕ್ಲಿಷ್ಟವಾದ ಪರೀಕ್ಷೆ ಅಂದರೆ ಐಎಎಸ್. ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ UPSC ನಡೆಸುವ ಈ ಪರೀಕ್ಷೆಯಲ್ಲಿ ಪ್ರತೀ ವರ್ಷವೂ 7ರಿಂದ 8 ಲಕ್ಷದಷ್ಟು ಯುವಕ – ಯುವತಿಯರು ತಮ್ಮ ಪ್ರತಿಭೆಯನ್ನು ನಿಕಷಕ್ಕೆ ಒಡ್ಡುತ್ತಿದ್ದು ತೇರ್ಗಡೆ ಆಗುವವರ ಪ್ರಮಾಣ 2-3% ಮಾತ್ರ! ಅಂತಹ ಕ್ಲಿಷ್ಟವಾದ ಪರೀಕ್ಷೆಯಲ್ಲಿ ಸಂಪೂರ್ಣ ಕುರುಡುತನ (Visually impaired) ಇರುವ ಹುಡುಗಿಯೊಬ್ಬಳು ಎರಡೆರಡು ಬಾರಿ ತೇರ್ಗಡೆ ಆದರು (Pranjal Patil IAS) ಅಂದರೆ ನಂಬೋದು ಹೇಗೆ?

ಆಕೆ ಪ್ರಾಂಜಲ್ ಪಾಟೀಲ್, ಮಹಾರಾಷ್ಟ್ರದವರು

ಆಕೆ ಮಹಾರಾಷ್ಟ್ರದ ಉಲ್ಲಾಸ ನಗರದವರು. ಹುಟ್ಟುವಾಗ ಆಕೆಗೆ ಮಸುಕು ಮಸುಕಾಗಿ ಕಾಣುತ್ತಿತ್ತು. ಆರು ವರ್ಷ ಪ್ರಾಯ ಆದಾಗ ಪೂರ್ತಿಯಾಗಿ ಕುರುಡುತನ ಆವರಿಸಿತ್ತು. ಸಣ್ಣ ಪ್ರಾಯದಲ್ಲಿಯೇ ಆಕೆಯ ದೊಡ್ಡ ಕನಸುಗಳಿಗೆ ಕೊಳ್ಳಿ ಇಟ್ಟ ಅನುಭವ ಆಗಿತ್ತು. ಆದರೆ ಮನೆಯವರು ಮತ್ತು ಹೆತ್ತವರು ಆಕೆಯ ಮನೋಸ್ಥೈರ್ಯವನ್ನು ಕುಸಿಯಲು ಬಿಡಲಿಲ್ಲ.

ಆಕೆ ಮಹಾನ್ ಪ್ರತಿಭಾವಂತೆ. ದಾದರ್ ನಗರದ ಕಮಲ ಮೆಹ್ತಾ ಕುರುಡು ಮಕ್ಕಳ ಶಾಲೆಗೆ ಸೇರಿ ಪ್ರಾಥಮಿಕ ಶಿಕ್ಷಣ ಪೂರ್ತಿ ಮಾಡುತ್ತಾರೆ. ಬ್ರೈಲ್ ಲಿಪಿಯಲ್ಲಿ ಓದಲು ಮತ್ತು ಬರೆಯಲು ಕಲಿಯುತ್ತಾರೆ. ಮುಂದೆ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ರಾಜನೀತಿ ಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ.

ಆಗ ಏನೂ ಕಾಣದಿದ್ದರೂ ಉಲ್ಲಾಸ ನಗರದ ಮನೆಯಿಂದ ಹೊರಟು ಒಬ್ಬಳೇ ಛತ್ರಪತಿ ಶಿವಾಜಿ ಟರ್ಮಿನಲನವರೆಗೆ ಹೋಗಿ ಹಿಂದೆ ಬರುತ್ತಿದ್ದರು. ಮುಂಬೈ ನಗರದ ಜನರು ತನ್ನ ಬಗ್ಗೆ ತುಂಬಾ ಅನುಕಂಪವನ್ನು ಹೊಂದಿದ್ದರು ಅನ್ನುತ್ತಾರೆ ಆಕೆ.

ಆಕೆಯ ಕನಸುಗಳಿಗೆ ಆಕಾಶವೂ ಮಿತಿ ಅಲ್ಲ!

ಮುಂದೆ ಪ್ರಾಂಜಲ್ ಪಾಟೀಲ್ ಹೊರಟದ್ದು ರಾಜಧಾನಿ ದೆಹಲಿಗೆ. ಅಲ್ಲಿನ ಜವಾಹರಲಾಲ್ ನೆಹರು ವಿವಿಯ ಮೂಲಕ ಆಕೆಯು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿಯನ್ನು ಪಡೆಯುತ್ತಾರೆ.

ಅದೇ ಹೊತ್ತಿಗೆ ವಿದುಷಿ ಎಂಬ ತನ್ನ ಗೆಳತಿಯ ಮಾತಿನಿಂದ ಆಕೆಯು ಪ್ರಭಾವಿತರಾಗುತ್ತಾರೆ. ಐಎಎಸ್ ಪರೀಕ್ಷೆಗೆ ಗಂಭೀರವಾದ ಸಿದ್ಧತೆ ನಡೆಸುವಂತೆ ವಿದುಷಿ ಆಕೆಗೆ ಸಲಹೆ ಕೊಡುತ್ತಾರೆ. ಪ್ರಾಂಜಲ್ ಎಷ್ಟು ವೇಗವಾಗಿ ಹೇಳುತ್ತಿದ್ದಳೋ ಅಷ್ಟೇ ವೇಗವಾಗಿ ವಿದುಷಿ ಪ್ರಾಜೆಕ್ಟ ನೋಟ್ಸ್ ಬರೆದು ಕೊಡುತ್ತಿದ್ದಳು.

ಆಗ ಆಕೆಗೆ JAWS ( Job Access With Speech) ಎಂಬ ಸಾಫ್ಟವೇರ್ ನೆರವಿಗೆ ಬರುತ್ತದೆ. ಅದು ಯಾವುದೇ ಪುಸ್ತಕವನ್ನು ಗಟ್ಟಿಯಾಗಿ ಓದಿ ಹೇಳುವ ಸಾಫ್ಟವೇರ್. ತನ್ನ ಆಲಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆಕೆಯು ಆ ಸಾಫ್ಟವೇರ್ ಬಳಸಿಕೊಂಡು ದಿನಕ್ಕೆ 10-12 ಘಂಟೆಯಷ್ಟು ಪುಸ್ತಕಗಳನ್ನು ಓದುತ್ತಾರೆ. ತುಂಬಾ ವಿಡಿಯೋ ಪಾಠಗಳನ್ನು ಕೇಳುತ್ತಾರೆ. ತನ್ನ ಗೆಳತಿಯ ನೆರವನ್ನು ಪಡೆಯುತ್ತಾರೆ.

ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಿಸಿತು

2016ರಲ್ಲೀ ಅವರು ಭಾರತೀಯ ರೈಲ್ವೇ ಸೇವೆಗೆ ಅರ್ಜಿ ಹಾಕುತ್ತಾರೆ. ಆದರೆ ಆಕೆ ಕುರುಡಿ ಎಂಬ ಕಾರಣಕ್ಕೆ ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಣೆ ಮಾಡುತ್ತದೆ. ಆಗ ಸಿಟ್ಟಿಗೆದ್ದ ಆಕೆ ಪ್ರಧಾನಿ ನರೇಂದ್ರ ಮೋದಿಗೆ ಮತ್ತು ಆಗಿನ ರೈಲ್ವೇ ಮಂತ್ರಿ ಸುರೇಶ್ ಪ್ರಭು ಅವರಿಗೆ ನೇರವಾಗಿ ಪತ್ರವನ್ನು ಬರೆಯುತ್ತಾರೆ. ಆಗ ಸುರೇಶ್ ಪ್ರಭು ಅವರು ಆಕೆಯನ್ನು ಸಂಪರ್ಕ ಮಾಡಿ ನಿಮ್ಮ ವಿದ್ಯೆಗೆ ತಕ್ಕದಾದ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ ಆಗಲೇ ಐಎಎಸ್ ಪರೀಕ್ಷೆಯ ತಯಾರಿಯಲ್ಲಿ ಮುಳುಗಿದ್ದ ಪ್ರಾಂಜಲ್ ಆ ಪ್ರಸ್ತಾಪವನ್ನು ಸ್ವೀಕಾರ ಮಾಡುವುದಿಲ್ಲ.

ಆಕೆ ಎರಡು ಬಾರಿ ಐಎಎಸ್ ಪರೀಕ್ಷೆ ತೇರ್ಗಡೆ ಆದರು!

ಅತ್ಯಂತ ಪ್ರಬಲ ಇಚ್ಛಾಶಕ್ತಿ, ನಿರಂತರ ಪ್ರಯತ್ನ, ಎಂದಿಗೂ ಬತ್ತಿ ಹೋಗದ ಸ್ಫೂರ್ತಿ, ಬೆಟ್ಟದಷ್ಟು ಆತ್ಮವಿಶ್ವಾಸ ಇವುಗಳ ಜೊತೆಗೆ 2016ರಲ್ಲಿ ಅವರು ಮೊದಲ ಬಾರಿಗೆ ಐಎಎಸ್ ಪರೀಕ್ಷೆಯನ್ನು ಬರೆದು ಮೊದಲನೆಯ ಪ್ರಯತ್ನದಲ್ಲಿಯೇ ತೇರ್ಗಡೆಯಾದರು! ಅದೂ ಯಾವ ಕೋಚಿಂಗ್ ಇಲ್ಲದೆ! ಆದರೆ ಆಲ್ ಇಂಡಿಯಾ ರಾಂಕಿಂಗ್ 744 ಬಂದಿತ್ತು. ಅದು ಅವರಿಗೆ ತೃಪ್ತಿ ತರಲಿಲ್ಲ. ಯಾವುದೋ ಒಂದು ಅಜ್ಞಾತ ಇಲಾಖೆಯಲ್ಲಿ ಒಬ್ಬ ಸಾಮಾನ್ಯ ಅಧಿಕಾರಿಯಾಗಿ ಕೆಲಸ ಮಾಡಲು ಆಕೆ ರೆಡಿ ಇರಲಿಲ್ಲ. ಅದಕ್ಕೋಸ್ಕರ ಎರಡನೇ ಬಾರಿಗೆ ಅಷ್ಟೇ ಪ್ರಯತ್ನ ಮಾಡಿ 2017ರಲ್ಲಿ ಮತ್ತೆ ಐಎಎಸ್ ಪರೀಕ್ಷೆ ಬರೆದರು. ಈ ಬಾರಿ ಕೂಡ ತೇರ್ಗಡೆ ಆದರು. ಈ ಬಾರಿ ರಾಂಕಿಂಗ್ 124 ಬಂದಿತ್ತು!

ಅವರ ಕನಸಿನ ರೆಕ್ಕೆಗೆ ಸಾವಿರ ಗರಿಗಳು!

ಪ್ರಾಂಜಲ್ ಭಾರತದ ಮೊಟ್ಟ ಮೊದಲ ದೃಷ್ಟಿ ವಿಕಲತೆಯ ಸಾಧಕಿಯಾಗಿ ಐಎಎಸ್ ಪರೀಕ್ಷೆ ತೇರ್ಗಡೆ ಆಗಿದ್ದರು! ಲಿಖಿತ ಪರೀಕ್ಷೆಯಲ್ಲಿ ಆಕೆಯು ಪಡೆದ ಅಂಕಗಳು 854! ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳು 179! ಒಟ್ಟು 1033 ಅನ್ನುವುದು ಕೂಡ ಆಕೆಯ ನಿಜವಾದ ಕ್ರೆಡಿಟ್.

ನಂತರ ತರಬೇತಿಯನ್ನು ಮುಗಿಸಿ ಮೇ 28, 2018ರಂದು ಅವರು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಸಿಸ್ಟಂಟ್ ಕಲೆಕ್ಟರ್ ಆಗಿ ನೇಮಕ ಪಡೆಯುತ್ತಾರೆ. ಅದರ ನಂತರ ಅಕ್ಟೋಬರ್ 14, 2019ರಂದು ಸಬ್ ಕಲೆಕ್ಟರ್ ಆಗಿ ತಿರುವನಂತಪುರಂ ಜಿಲ್ಲೆಗೆ ನೇಮಕ ಪಡೆಯುತ್ತಾರೆ!

ಯಾರ ಸಹಾಯ ಇಲ್ಲದೆ ತನ್ನ ಎಲ್ಲ ಕೆಲಸಗಳನ್ನು ತಾನೇ ಮಾಡುವ, ಅದ್ಭುತವಾದ ಮೆಮೊರಿ ಪವರ್ ಹೊಂದಿರುವ, ಸಮಾಜ ಸೇವೆಯ ತೀವ್ರವಾದ ತುಡಿತವನ್ನು ಹೊಂದಿರುವ, ಬೆಟ್ಟವನ್ನು ಕರಗಿಸುವ ಧೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಹೊಂದಿರುವ ಪ್ರಾಂಜಲ್ ಪಾಟೀಲ್ ಮತ್ತು ಆಕೆಯ ಗಂಡ ಕೋಮಲ್ ಸಿಂಗ್ ಪಾಟೀಲ್ ಅವರು ಇತ್ತೀಚೆಗೆ ತಮ್ಮ ಅಂಗದಾನಕ್ಕೆ ಜೊತೆಯಾಗಿ ಸಹಿ ಹಾಕಿ ಸುದ್ದಿ ಆಗಿದ್ದಾರೆ.

ಆಕೆಯ ಒಂದು ಮಾತು ನನಗೆ ಭಾರೀ ಕನೆಕ್ಟ್ ಆಗಿದ್ದು ಅದನ್ನು ಇಲ್ಲಿ ಉಲ್ಲೇಖ ಮಾಡುತ್ತೇನೆ.

SUCCESS doesn’t give us INSPIRATION. But the STRUGGLE behind the SUCCESS gives us the INSPIRATION.

ಹೌದು ತಾನೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ನಾಗಾರಾಧನೆ- ಪ್ರಕೃತಿಯ ಆರಾಧನೆ ಆಗಲಿ

Continue Reading

ದೇಶ

PMAY: ನಗರ ಪ್ರದೇಶಗಳ ಬಡವರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್;‌ 1 ಕೋಟಿ ಮನೆ ನಿರ್ಮಾಣಕ್ಕೆ ಕೇಂದ್ರ ಅಸ್ತು

PMAY: ಮುಂದಿನ 5 ವರ್ಷಗಳಲ್ಲಿ ಒಂದು ಕೋಟಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, 1 ಕೋಟಿ ಕುಟುಂಬಗಳಿಗೆ ಹಣಕಾಸು ನೆರವು ನೀಡಲಿದೆ. ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾದ ಮೊದಲ ಸಂಪುಟ ಸಭೆಯಲ್ಲೇ ಪಿಎಂಎವೈ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು.

VISTARANEWS.COM


on

PMAY
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ- ನಗರ 2.0 ಜಾರಿಗೆ (PMAY 2.0) ಕೇಂದ್ರ ಸಚಿವ ಸಂಪುಟ ಸಭೆಯು ಸಮ್ಮತಿ ಸೂಚಿಸಿದ್ದು, ನಗರ ಪ್ರದೇಶಗಳ 1 ಕೋಟಿ ಬಡವರು ಹಾಗೂ ಮಧ್ಯಮವರ್ಗದವರು ಇದರ ಪ್ರಯೋಜನ ಪಡೆಯಲಿದ್ದಾರೆ. ಅಂದರೆ ಪಿಎಂಎವೈ ಯೋಜನೆ ಅಡಿಯಲ್ಲಿ ನಗರ ಪ್ರದೇಶಗಳಲ್ಲಿ 1 ಕೋಟಿ ಮನೆಗಳನ್ನು ನಿರ್ಮಿಸಲಾಗುತ್ತದೆ.

ಮುಂದಿನ 5 ವರ್ಷಗಳಲ್ಲಿ ಒಂದು ಕೋಟಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, 1 ಕೋಟಿ ಕುಟುಂಬಗಳಿಗೆ ಹಣಕಾಸು ನೆರವು ನೀಡಲಿದೆ. ನಗರ ಪ್ರದೇಶಗಳಲ್ಲಿ ಸುಸಜ್ಜಿತ ಮನೆ ನಿರ್ಮಿಸುವವರಿಗೆ ಕೇಂದ್ರ ಸರ್ಕಾರವು 1 ಚದರ ಅಡಿಗೆ 3 ಸಾವಿರ ರೂ. ನೆರವು ನೀಡಲಿದೆ. ಇನ್ನು ಇಂಟರೆಸ್ಟ್‌ ಸಬ್ಸಿಡಿ ಯೋಜನೆ ಅಡಿಯಲ್ಲಿ ಬಡ ಕುಟುಂಬಗಳಿಗೆ 25-35 ಲಕ್ಷ ರೂ.ವರೆಗೆ ಶೇ.4ರ ಬಡ್ಡಿದರದೊಂದಿಗೆ ಸಾಲ ನೀಡುತ್ತದೆ. 1.8 ಲಕ್ಷ ರೂ.ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರವು 2.3 ಲಕ್ಷ ಕೋಟಿ ರೂ. ವ್ಯಯಿಸಲಾಗಿದೆ. ಹಾಗೆಯೇ, ಪಿಎಂಎವೈ 2.0 ಯೋಜನೆಗೆ 10 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದೆ.

8 ರೈಲ್ವೆ ಲೈನ್‌ ಯೋಜನೆಗಳಿಗೆ ಅನುಮೋದನೆ

ದೇಶದ 7 ರಾಜ್ಯಗಳ 14 ಜಿಲ್ಲೆಗಳ ಮೂಲಕ ಹಾದು ಹೋಗುವ 8 ಹೊಸ ರೈಲ್ವೆ ಲೈನ್‌ ಯೋಜನೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ವ್ಯಾಪಾರ, ಸಂಪರ್ಕ ಹಾಗೂ ಉದ್ಯೋಗ ಸೃಷ್ಟಿಗೆ ಈ ಯೋಜನೆಗಳು ಸಹಕಾರಿಯಾಗಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಒಡಿಶಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್‌, ಬಿಹಾರ, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ 8 ಹೊಸ ರೈಲ್ವೆ ಲೈನ್‌ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಡವರು ಸ್ವಂತ ಮನೆ ಕನಸನ್ನು ನನಸು ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್‌ ಯೋಜನೆ ಜಾರಿಗೆ ತಂದಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸುಮಾರು 4.21 ಕೋಟಿ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಪಿಎಂಎವೈ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು.

ಇದನ್ನೂ ಓದಿ: CM Siddaramaiah: ಬಜೆಟ್ ಮೂಲಪಾಠವೇ ಗೊತ್ತಿಲ್ಲದ ನಿರ್ಮಲಾ ಸೀತಾರಾಮನ್; ಸಂಪುಟದಿಂದ ಕೈಬಿಡಲು ಸಿಎಂ ಒತ್ತಾಯ

Continue Reading
Advertisement
Aman Sehrawa
ಕ್ರೀಡೆ13 mins ago

Aman Sehrawat: 10 ಗಂಟೆ ಅವಧಿಯಲ್ಲಿ 4.6 ಕೆಜಿ ತೂಕ ಇಳಿಸಿ ಕಂಚು ಗೆದ್ದ ಅಮನ್​ ಸೆಹ್ರಾವತ್; ಹೇಗಿತ್ತು ಅವರ ಪರಿಶ್ರಮ?

Duniya Vijay Starrer Bheema Movie Collects three and half crore
ಸ್ಯಾಂಡಲ್ ವುಡ್26 mins ago

Duniya Vijay: ಮೊದಲ ದಿನದ ಗಳಿಕೆಯಲ್ಲಿ ʻಬ್ಲಾಕ್‌ ಕೋಬ್ರಾʼ ಭರ್ಜರಿ ಅಬ್ಬರ; ʻಭೀಮʼಗೆ ಬಹುಪರಾಕ್ ಎಂದ ಪ್ರೇಕ್ಷಕರು!

Namma Metro ticket price hike
ಬೆಂಗಳೂರು45 mins ago

Namma Metro Ticket Price Hike: ಮೆಟ್ರೋ ಟಿಕೆಟ್‌ ದರದ ಮೇಲೆ ಕೈ ಇಟ್ರೋ! ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ?

IPL 2025
ಕ್ರೀಡೆ1 hour ago

IPL 2025: ರಾಜಸ್ಥಾನ್​ ರಾಯಲ್ಸ್​ಗೆ ರಾಹುಲ್​ ದ್ರಾವಿಡ್​ ನೂತನ ಕೋಚ್​?

pm narendra modi wayanad landslide
ಪ್ರಮುಖ ಸುದ್ದಿ1 hour ago

PM Narendra Modi: ಭೂಕುಸಿತ ಪೀಡಿತ ವಯನಾಡಿಗೆ ಇಂದು ನರೇಂದ್ರ ಮೋದಿ ಭೇಟಿ

Nikkita Ghag Breaks Internet With Naked Photoshoot
ಬಾಲಿವುಡ್1 hour ago

Nikkita Ghag: ಬೆತ್ತಲೆ ಫೋಟೋಶೂಟ್‌ನೊಂದಿಗೆ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಖ್ಯಾತ ಬಾಲಿವುಡ್‌ ನಟಿ!

Aman Sehrawat
ಕ್ರೀಡೆ2 hours ago

Aman Sehrawat: ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಅಮನ್​ ಇಂದು ದೇಶಕ್ಕಾಗಿ ಕಂಚು ಗೆದ್ದ ಸಾಧಕ

Venu Swamy Prediction On Naga Chaitanya And Sobhita Dhulipala Engagement
ಟಾಲಿವುಡ್2 hours ago

Venu Swamy: ಚೈತು-ಶೋಭಿತಾದು ಜಾತಕ ಮಾತ್ರವಲ್ಲ ನಿಶ್ಚಿತಾರ್ಥ ಮುಹೂರ್ತವೇ ಸರಿಯಿಲ್ಲ ಎಂದ ಜ್ಯೋತಿಷಿ ವೇಣುಸ್ವಾಮಿ!

Bangladesh Unrest hindus protest
ವಿದೇಶ2 hours ago

Bangladesh Unrest: ಶೇಖ್‌ ಹಸೀನಾ ಓಡಿ ಬಂದ ಬಳಿಕ ಬಾಂಗ್ಲಾದೇಶದಲ್ಲಿ 232 ಜನರ ಕಗ್ಗೊಲೆ, ಹಿಂದೂಗಳೇ ಟಾರ್ಗೆಟ್

Tharun Sudhir And Sonal Montero Haldi Shastra Photos
ಸ್ಯಾಂಡಲ್ ವುಡ್2 hours ago

Tharun Sudhir: ತರುಣ್ ಸುಧೀರ್-ಸೋನಲ್ ಮದುವೆ ಸಂಭ್ರಮ; ಅದ್ಧೂರಿಯಾಗಿ ನಡೆದ ಅರಿಶಿಣ ಶಾಸ್ತ್ರ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ7 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌