Site icon Vistara News

Amul milk price: ಅಮುಲ್‌ ಹಾಲಿನ ದರಗಳಲ್ಲಿ ಏರಿಕೆ, ಇಂದಿನಿಂದಲೇ ಜಾರಿ

Amul milk price

ಹೊಸದಿಲ್ಲಿ: ಅಮುಲ್ ಎಂದು ಕರೆಯಲ್ಪಡುವ ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್‌ನ ಹಾಲಿನ ದರವನ್ನು ಲೀಟರ್‌ಗೆ 3 ರೂ.ವರೆಗೆ ಹೆಚ್ಚಿಸಲಾಗಿದೆ.

ಬೆಲೆ ಪರಿಷ್ಕರಣೆ ನಂತರ ಅಮುಲ್ ಹಾಲಿನ ಪ್ಯಾಕೆಟ್‌ನ ಹೊಸ ದರಗಳು ಲೀಟರ್‌ಗೆ 66 ರೂ.(ಗೋಲ್ಡ್‌), ಅಮುಲ್ ತಾಜಾ 1 ಲೀಟರ್ ಹಾಲಿನ ಬೆಲೆ 54 ರೂ., ಹಸುವಿನ ಹಾಲಿನ 1 ಲೀಟರ್ ಬೆಲೆ 56 ರೂ. ಮತ್ತು ಅಮುಲ್ ಎ2 ಎಮ್ಮೆ ಹಾಲಿನ ಬೆಲೆ ಲೀಟರ್‌ಗೆ 70 ರೂ. ಆಗಲಿದೆ ಎಂದು ಕಂಪನಿ ತಿಳಿಸಿದೆ. ಈ ದರಗಳು ಇಂದಿನಿಂದಲೇ ಜಾರಿಯಾಗಲಿವೆ.

ಈ ವರ್ಷದಲ್ಲಿ ಅಮುಲ್ ಹಾಲಿನ ದರದಲ್ಲಿ ಮೊದಲ ಏರಿಕೆ ಮಾಡಿದೆ. ಕಳೆದ ವರ್ಷ 3 ಬಾರಿ ಹಾಲಿನ ದರ ಹೆಚ್ಚಿಸಲಾಗಿತ್ತು. ಮಾರ್ಚ್, ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ಹೆಚ್ಚಿಸಿತ್ತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ದೆಹಲಿ- ಎನ್‌ಸಿಆರ್ ಮಾರುಕಟ್ಟೆಯಲ್ಲಿ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚಿಸಿದೆ. ದೆಹಲಿ-ಎನ್‌ಸಿಆರ್‌ನ ಪ್ರಮುಖ ಹಾಲು ಪೂರೈಕೆದಾರರಲ್ಲಿ ಒಂದಾದ ಅಮುಲ್‌, ದಿನಕ್ಕೆ 30 ಲಕ್ಷ ಲೀಟರ್‌ಗಿಂತ ಹೆಚ್ಚಿನ ಪ್ರಮಾಣದ ಹಾಲು ಪೂರೈಸುತ್ತದೆ.

ಇದರ ಜತೆಗೆ ಪೂರ್ಣ ಕ್ರೀಮ್ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ. ಏರಿಸಿ 66 ರೂ.ಗೆ ಹೆಚ್ಚಿಸಿದೆ. ಟೋನ್ಡ್ ಹಾಲಿನ ದರವನ್ನು ಲೀಟರ್‌ಗೆ 51 ರೂ.ನಿಂದ 53 ರೂ.ಗೆ ಪರಿಷ್ಕರಿಸಿದೆ.

ಇದನ್ನೂ ಓದಿ: Amul Milk Price Hike | ಮತ್ತೆ ಹಾಲಿನ ದರ ಹೆಚ್ಚಳ ಮಾಡಿದ ಅಮುಲ್​; ದೀಪಾವಳಿ ಎದುರಲ್ಲಿ ಗ್ರಾಹಕರಿಗೆ ಇನ್ನಷ್ಟು ಹೊರೆ

Exit mobile version