Site icon Vistara News

Earthquake In Assam: ಅಸ್ಸಾಂನಲ್ಲಿ 4.9 ತೀವ್ರತೆಯ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ

Earthquake In Jaipur

Three back-to-back Earthquakes In Jaipur in a span of half an hour

ದಿಸ್ಪುರ: ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪವು (Earthquake In Assam) ಎರಡೂ ದೇಶಗಳ ಆತ್ಮವಿಶ್ವಾಸವನ್ನೇ ನಲುಗಿಸಿರುವ, ೨೮ ಸಾವಿರ ಜನ ಸಾವಿಗೀಡಾಗಿರುವ ಬೆನ್ನಲ್ಲೇ ಅಸ್ಸಾಂನಲ್ಲಿ ಕೂಡ ಭಾನುವಾರ ಸಂಜೆ ಭೂಕಂಪ ಸಂಭವಿಸಿದೆ. ಇದರಿಂದಾಗಿ ಜನರಲ್ಲಿ ಆತಂಕ ಹೆಚ್ಚಾಗಿದೆ.

ಅಸ್ಸಾಂನ ನಾಗಾಂವ್‌ನಲ್ಲಿ ಭಾನುವಾರ ಸಂಜೆ ೪.೧೮ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪನದಲ್ಲಿ ೪.೯ ತೀವ್ರತೆಯ ಭೂಕಂಪನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ, ಭೂತಾನ್‌ ಹಾಗೂ ಬಾಂಗ್ಲಾದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಭಾರತದ ಅಸ್ಸಾಂನಲ್ಲಿ ಮಾತ್ರ ಇದರ ಪರಿಣಾಮ ಗೋಚರಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಟರ್ಕಿ ಹಾಗೂ ಸಿರಿಯಾ ಭೂಕಂಪವು ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಆತಂಕ ತಂದಿದೆ. ಭಾರತದಲ್ಲಿ ಭೀಕರ ಭೂಕಂಪಗಳ ಸಂಖ್ಯೆ ಕಡಿಮೆ ಇದ್ದರೂ ಆತಂಕವಂತೂ ಇದೆ. ಹಾಗಾಗಿ, ಅಸ್ಸಾಂನ ನಾಗಾಂವ್‌ ಜನರಲ್ಲಿ ಆತಂಕ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಭೂಕಂಪದಿಂದ ಜನರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Operation Dost: ಟರ್ಕಿ ಭೂಕಂಪಪೀಡಿತ ಪ್ರದೇಶದಲ್ಲಿ ಭಾರತದ ಆಸ್ಪತ್ರೆ, ಗಾಯಾಳುಗಳಿಗೆ ಚಿಕಿತ್ಸೆ

Exit mobile version