Site icon Vistara News

Rishi Sunak | ಚರ್ಚಿಲ್‌ ಹೇಳಿಕೆ ಉಲ್ಲೇಖಿಸಿ ಸುನಕ್‌ ಆಯ್ಕೆಯನ್ನು ಸಂಭ್ರಮಿಸಿದ ಆನಂದ್‌ ಮಹೀಂದ್ರಾ; ಏನದು?

Anand Mahindra

ನವ ದೆಹಲಿ : ಭಾರತೀಯ ಸಂಜಾತ ಹಾಗೂ ಬೆಂಗಳೂರು ಅಳಿಯ ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿ ಆಗಿರುವುದಕ್ಕೆ ಭಾರತದಲ್ಲಿ ನಾನಾ ರೀತಿಯಲ್ಲಿ ವಿಶ್ಲೇಷಣೆಗಳನ್ನು ನಡೆಸಲಾಗುತ್ತದೆ. ಆದರೆ, ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್‌ ಮಹೀಂದ್ರಾ ಅವರು ಬ್ರಿಟನ್‌ ಮಾಜಿ ಪ್ರಧಾನಿಯ ವಿನ್‌ಸ್ಟನ್‌ ಚರ್ಚಿಲ್‌ ಅವರ ಮಾತನ್ನು ಸ್ಮರಿಸಿಕೊಂಡು ವಿಭಿನ್ನ ಹೇಳಿಕೆ ನೀಡಿದ್ದಾರೆ.

ಭಾರತಕ್ಕೆ ೧೯೪೭ರಲ್ಲಿ ಸ್ವಾತಂತ್ರ ಕೊಟ್ಟ ಬ್ರಿಟಿಷರು ಭಾರತದಲ್ಲಿ ತಮ್ಮ ವಸಾಹತನ್ನು ಕೊನೆಗೊಳಿಸಿದ್ದರು. ಆ ವೇಳೆ ಬ್ರಿಟನ್‌ನ ಮಾಜಿ ಪ್ರಧಾನಿಯಾಗಿದ್ದ ಚರ್ಚಿಲ್‌ ಅವರು ಭಾರತದ ಮಂದಿ ನಾಯಕತ್ವಕ್ಕೆ ಲಾಯಕ್ಕಿಲ್ಲ ಎಂಬುದಾಗಿ ಹೇಳಿದ್ದರು. ಆ ಮಾತನ್ನು ಸ್ಮರಿಸಿಕೊಂಡಿರುವ ಮಹೀಂದ್ರಾ ಅವರು, ಭಾರತ ೭೫ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಸಂದರ್ಭದಲ್ಲಿ ಭಾರತೀಯ ಮೂಲದವರೇ ಬ್ರಿಟನ್‌ಗೆ ಪ್ರಧಾನಿಯಾಗಿದ್ದಾರೆ ಎಂಬುದಾಗಿ ವಿಡಂಬನಾತ್ಮಕವಾಗಿ ಟ್ವೀಟ್‌ ಮಾಡಿದ್ದಾರೆ.

“1947ರಲ್ಲಿ ಭಾರತಕ್ಕೆ ಸ್ವಾತಂತ್ರ ನೀಡುವ ಸಂದರ್ಭದಲ್ಲಿ ವಿನ್‌ಸ್ಟನ್‌ ಚರ್ಚಿಲ್‌ ಅವರು ಈ ರೀತಿಯಾಗಿ ಹೇಳಿದ್ದರು ಎನ್ನಲಾಗುತ್ತಿದೆ. ಭಾರತೀಯ ನಾಯಕರು ಸಾಮರ್ಥ್ಯ ಹೀನರು ಹಾಗೂ ಒಣ ಮನುಷ್ಯರು. ಇದೀಗ ಭಾರತ ೭೫ನೇ ವರ್ಷದ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಭಾರತೀಯ ಸಂಜಾತ ವ್ಯಕ್ತಿಯೊಬ್ಬರು ಬ್ರಿಟನ್‌ನ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಬದುಕು ಸುಂದರ,” ಎಂದು ಆನಂದ್‌ ಮಹೀಂದ್ರಾ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | Rishi Sunak | ರಿಷಿ ಸುನಕ್‌ ಎದುರು ಬೆಟ್ಟದಷ್ಟು ಸವಾಲು, ಇವುಗಳನ್ನು ಬಗೆಹರಿಸಬೇಕು ಮೊದಲು

Exit mobile version