Site icon Vistara News

Anand Mahindra | ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಆನಂದ್‌ ಮಹೀಂದ್ರಾ ನೀಡಿದ ಸಲಹೆಯೇನು?

Anand Mahindra

ನವದೆಹಲಿ: ಮಹೀಂದ್ರಾ ಗ್ರೂಪ್‌ನ ಚೇರ್ಮನ್‌ ಆದರೂ ಆನಂದ್‌ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಣ್ಣಪುಟ್ಟ ಖುಷಿಯ ಸಂಗತಿಗಳನ್ನೂ ಹಂಚಿಕೊಳ್ಳುತ್ತಾರೆ. ಸಾಧಕರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಹಾಗೆಯೇ, ಸಮಾಜದಲ್ಲಿ ಸುಧಾರಣೆ ತರಲು ಸರಕಾರಕ್ಕೆ ಹಲವು ಸಲಹೆಗಳನ್ನೂ ನೀಡುತ್ತಾರೆ. ಇದೇ ದಿಸೆಯಲ್ಲಿ ಆನಂದ್‌ ಮಹೀಂದ್ರಾ ಅವರೀಗ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ಹೊಸ ಸಲಹೆ ನೀಡಿದ್ದಾರೆ.

ರಸ್ತೆಯ ಎರಡೂ ಬದಿ ಮರಗಳು ಇರುವ ವಿಡಿಯೊ ಹಂಚಿಕೊಂಡಿರುವ ಮಹೀಂದ್ರಾ, “ನನಗೆ ಸುರಂಗಗಳು ಎಂದರೆ ಇಷ್ಟ. ಅದಕ್ಕಿಂತ ಎರಡೂ ಬದಿ ಮರಗಳಿರುವ ರಸ್ತೆಗಳಲ್ಲಿ ಸಂಚರಿಸುವುದು ಇನ್ನೂ ಇಷ್ಟ. ಹಾಗಾಗಿ, ನಿತಿನ್‌ ಗಡ್ಕರಿ ಅವರೇ, ಗ್ರಾಮೀಣ ಭಾಗದಲ್ಲಿ ನಿರ್ಮಿಸುವ ರಸ್ತೆಗಳ ಬದಿಗಳಲ್ಲಿ ಸಸಿಗಳನ್ನು ನೆಡುವುದು ಒಳಿತು” ಎಂದಿದ್ದಾರೆ. ಆನಂದ್‌ ಮಹೀಂದ್ರಾ ಅವರು ಟ್ವೀಟ್‌ ಮಾಡಿದ ವಿಡಿಯೊ ವೈರಲ್‌ ಆಗುವ ಜತೆಗೆ ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ | Anand Mahindra | ಜುಂಜುನ್‌ವಾಲಾ ಅವರ ಈ ಸಲಹೆ ಸಹಸ್ರಾರು ಕೋಟಿ ರೂ. ಮೌಲ್ಯದ್ದು ಎಂದು ಆನಂದ್‌ ಮಹೀಂದ್ರಾ ಹೇಳಿದ್ದೇಕೆ?

Exit mobile version