Site icon Vistara News

Anant Ambani Wedding: ಅಂಬಾನಿ ಮದುವೆಯಲ್ಲಿ ಮಾಧುರಿ ದೀಕ್ಷಿತ್ ‘ಚೋಲಿ ಕೆ ಪೀಚೆ ಕ್ಯಾ ಹೈ’ ಡ್ಯಾನ್ಸ್! ಶಾರುಖ್‌, ಸಲ್ಮಾನ್ ಸಖತ್ ಸ್ಟೆಪ್ಸ್!

Anant Ambani Wedding

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ (Anant Ambani Wedding) ಮಹಾರಾಷ್ಟ್ರದ ಮುಂಬೈನಲ್ಲಿರುವ ಜಿಯೋ ವರ್ಲ್ಡ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ (Jio World Convention Centre) ಅದ್ಧೂರಿಯಾಗಿ ನೆರವೇರಿದೆ. ಸಮಾರಂಭದಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರಿಂದ ಹಿಡಿದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿವರೆಗೆ ದೇಶ-ವಿದೇಶಗಳಿಂದ ನೂರಾರು ನಟ-ನಟಿಯರು, ಕ್ರಿಕೆಟಿಗರು, ಗಾಯಕರು, ಉದ್ಯಮಿಗಳು ಭಾಗಿಯಾಗಿ ಸಂಭ್ರಮಿಸಿದ್ದಾರೆ.

ಇದೇ ವೇಳೆ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ʼಚೋಲಿ ಕೆ ಪೀಚೆ ಕ್ಯಾ ಹೈ’ ಹಾಡಿಗೆ ಸಖತ್‌ ಡಾನ್ಸ್‌ ಮಾಡಿದ್ದಾರೆ. ಅನಂತ್‌ ಮದುವೆ ಸಮಾರಂಭದಲ್ಲಿ ಕುಪ್ಪಳಿಸಿದ ಮಾಧುರಿ ದೀಕ್ಷಿತ್‌ ಜೊತೆ ಅವರ ಪತಿ ಶ್ರೀರಾಮ್‌ ನೇನೆ ಮತ್ತು ಇತರೆ ಅತಿಥಿಗಳು ಹೆಜ್ಜೆ ಹಾಕಿದರು. 1993ರಲ್ಲಿ ಬಿಡುಗಡೆಯಾದ ತಮ್ಮ ಕಳನಾಯಕ್‌ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ್ದ ಮಾಧುರಿ ತಮ್ಮ ಹಾವ-ಭಾವ, ನಗು ಮುಖ, ನೃತ್ಯ ಶೈಲಿ ಮೂಲಕ ಎಲ್ಲರ ಗಮನ ಸೆಳೆದರು. ಅವರ ಹಿಂದೆ ನಿಂತಿದ್ದ ಅವರ ಪತಿ ಕೂಡ ಡಾನ್ಸ್‌ಗೆ ಹೆಜ್ಜೆ ಹಾಕುವ ಪ್ರಯತ್ನ ಮಾಡಿದರು. ಬಳಿಕ ಅವರು ಸುಮ್ಮನೆ ನಿಂತು ಪತ್ನಿ ಡಾನ್ಸ್‌ ಅನ್ನು ಎಂಜಾಯ್‌ ಮಾಡಿದರು. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಮಾಧುರಿಯ ಡಾನ್ಸ್‌ಗೆ ಫಿದಾ ಆಗಿದ್ದಾರೆ. ಮಾಧುರಿಯ ನೃತ್ಯಕ್ಕೆ ಅವರ ಪತಿ ಮಂತ್ರಮುಗ್ಧರಾಗಿದ್ದಾರೆ ಎಂದು ಕಮೆಂಟ್‌ ಮಾಡಿದ್ದಾರೆ.

ಪೇಸ್ಟಲ್‌ ಲೆಹಂಗಾ ತೊಟ್ಟು ಬಹಳ ಸ್ಟೈಲಿಶ್‌ ಆಗಿ ಎಂಟ್ರಿ ಕೊಟ್ಟಿದ್ದ ಮಾಧುರಿ ತಮ್ಮ ಕುಟುಂಬದ ಜೊತೆ ಕಾರ್ಯಕ್ರಮಕ್ಕೆ ಆಗಮಿಸಿದ್ರು. ಪತಿ ಶ್ರೀರಾಮ್‌ ಕೂಡ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದರು.

ಮತ್ತೊಂದೆಡೆ ಅನಂತ್‌-ರಾಧಿಕಾ ಮದುವೆಯಲ್ಲಿ ಬಾಲಿವುಡ್‌ ಬಾದ್‌ ಶಾ ಶಾರೂಖ್‌ ಖಾನ್‌ ಮತ್ತು ಸಲ್ಮಾನ್‌ ಖಾನ್‌ ಕೂಡ ಭಾಗಿಯಾಗಿ ಸಂಭ್ರಮಿಸಿದರು. ಅನಂತ್‌ ಅಂಬಾನಿ ಬಾರಾತ್‌(ಮದುವೆ ಮಂಟಪಕ್ಕೆ ಮದುಮನ ಆಗಮನ)ನಲ್ಲಿ ಇಬ್ಬರೂ ಬಾಲಿವುಡ್‌ನ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಅವರ ಜೊತೆ ಇತರೆ ವಿಕ್ಕಿ ಕೌಶಲ್‌, ವರುಣ್‌ ಧವನ್‌ ಸೇರಿದಂತೆ ಅನೇಕ ನಟ-ನಟಿಯರು ಹೆಜ್ಜೆ ಹಾಕಿದರು. ಇವರ ಜೊತೆ ನೀತಾ ಅಂಬಾನಿ ಕೂಡ ಸಖತ್‌ ಸ್ಟೆಪ್‌ ಹಾಕಿದರು.

ಇದನ್ನೂ ಓದಿ:Vicky Kaushal: ಅಂಬಾನಿ ಮದುವೆಯಲ್ಲಿ ಪ್ಲೇ ಆಯ್ತು ವಿಕ್ಕಿ ಕೌಶಲ್‌ ಹಿಟ್‌ ಸಾಂಗ್‌; ʻತೌಬಾ ತೌಬಾʼ ಹುಕ್‌ ಸ್ಟೆಪ್ಸ್‌ಗೆ ಹೆಜ್ಜೆ ಹಾಕಿದ ತಾರೆಯರು!

Exit mobile version