Site icon Vistara News

Anant Radhika Wedding: ವಜ್ರದ ರತ್ನ ಖಚಿತ ಸಿಂಹಾಕೃತಿ ಬ್ರೂಚ್ ಧರಿಸಿದ್ದ ಅನಂತ್ ಅಂಬಾನಿ! ಏನಿದರ ವಿಶೇಷ?

Anant Radhika Wedding

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Anant Radhika Wedding) ಅತ್ಯಂತ ಅದ್ಧೂರಿ ಸಮಾರಂಭಗಳ ಮೂಲಕ ಶುಕ್ರವಾರ ದಾಂಪತ್ಯ ಜೀವನಕ್ಕೆ (wedding) ಕಾಲಿಟ್ಟಿದ್ದಾರೆ. ಭಾನುವಾರದವರೆಗೆ ಸಮಾರಂಭ ಮುಂದುವರಿಯಲಿವೆ. ಈ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭವಾದ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಈಗ ಮುಕ್ತಾಯದ ಹಂತದಲ್ಲಿದೆ. ಬ್ರ್ಯಾಂಡೆಡ್ ಉಡುಗೆಯಿಂದ ಹಿಡಿದು ದುಬಾರಿ ಆಭರಣಗಳವರೆಗೆ ಎಲ್ಲವೂ ಈ ವೇಳೆ ಗಮನ ಸೆಳೆದಿವೆ. ಇದೀಗ ಅನಂತ್ ಅಂಬಾನಿ ಧರಿಸಿರುವ ರತ್ನ ಖಚಿತವಾದ ಬ್ರೂಚ್ (brooch) ಬಗ್ಗೆ ಸುದ್ದಿಗಳು ವೈರಲ್ (Viral) ಆಗುತ್ತಿವೆ.

ಜಾಮ್ ನಗರದಲ್ಲಿ ನಡೆದ ವಿವಾಹ ಪೂರ್ವದ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಬೃಹತ್ ಪಚ್ಚೆಗಳು ಮತ್ತು ತೂಗಾಡುವ ಮಾಣಿಕ್ಯಗಳೊಂದಿಗೆ ರತ್ನ ಖಚಿತವಾದ ಬ್ರೋಚ್ ಅನ್ನು ಧರಿಸಿದ್ದರು. ಮಾತ್ರವಲ್ಲ ಇದರಲ್ಲಿ 50 ಕ್ಯಾರಟ್‌ ವಜ್ರವಿತ್ತು. ಭವ್ಯವಾದ ಸಿಂಹದ ಬ್ರೂಚ್ ತನ್ನ ವಿಶಿಷ್ಟ ವಿನ್ಯಾಸ ಮತ್ತು ಬೃಹತ್ ವಜ್ರದಿಂದ ವಿಶೇಷವಾಗಿ ಗುರುತಿಸಿಕೊಂಡಿದೆ. ಆಭರಣ ವಿನ್ಯಾಸಕ ಲೋರೆನ್ ಶ್ವಾರ್ಟ್ಜ್ ತಯಾರಿಸಿದ ಕಸ್ಟಮ್ ಲಯನ್ ಬ್ರೂಚ್‌ನಲ್ಲಿ ಸಿಂಹದ ದೇಹ ಮತ್ತು ಕೂದಲನ್ನು ಸಂಕೀರ್ಣವಾದ ಹಳದಿ ವಜ್ರಗಳಿಂದ ಅಲಂಕರಿಸಲಾಗಿತ್ತು. ಸಿಂಹದ ಕಣ್ಣುಗಳು ಪಚ್ಚೆಗಳಿಂದ ಮಾಡಲ್ಪಟ್ಟಿದ್ದವು.

ಆಧ್ಯಾತ್ಮಿಕ ಚಿಕಿತ್ಸೆಗೆ ಹೆಸರುವಾಸಿಯಾದ ಕಲ್ಲುಗಳು ಇದಾಗಿವೆ. ಸಿಂಹದ ಬಾಯಿಯಿಂದ ತೂಗಾಡುತ್ತಿರುವ 50 ಕ್ಯಾರೆಟ್ ವಜ್ರವು ಬ್ರೂಚ್‌ನ ಪ್ರಮುಖ ಅಂಶವಾಗಿದೆ. ಆಭರಣಗಳ ತಯಾರಿಕೆಯ ಕುರಿತು ಫೋರ್ಬ್ಸ್‌ಗೆ ನೀಡಿದ ಸಂದರ್ಶನದಲ್ಲಿ ಡಿಸೈನರ್ ಅದರೊಳಗಿದ್ಧ ವಿವರಗಳನ್ನು ಹೇಳಿದ್ದಾರೆ. ಹಳದಿ ವಜ್ರಗಳನ್ನು ಸಿಂಹದ ಕೂದಲಿನ ವಿನ್ಯಾಸಕ್ಕೆ ಬಳಸಲಾಗಿತ್ತು. ಸಿಂಹವು ಅಸ್ಚರ್ ಕಟ್‌ನೊಂದಿಗೆ ಬಿಳಿ ವಜ್ರಗಳಿಂದ ಮಾಡಿದ ಪೀಠದಂತಹ ರಚನೆಯ ಮೇಲೆ ಕುಳಿತಿದೆ. ಇದು ವಿನಮ್ರತೆಯನ್ನು ಸೂಚಿಸುತ್ತದೆ ಎಂದು ವಿನ್ಯಾಸಕಾರರು ವಿವರಿಸಿದ್ದರು.


ಇದರ ಮಹತ್ವ ಏನು?

ಅನಂತ್ – ರಾಧಿಕಾ ಅವರ ಮದುವೆಯ ಸಿದ್ಧತೆಗಳು ಪ್ರಾರಂಭವಾದಾಗಿನಿಂದ ಎಲ್ಲಾ ಆಚರಣೆಗಳು ಭಾರತೀಯ ಸಂಸ್ಕೃತಿಯಲ್ಲಿ ಬೇರೂರಿವೆ. ಇದು ಅವರ ಉಡುಪುಗಳಲ್ಲಿಯೂ ಪ್ರತಿಬಿಂಬಿಸುತ್ತದೆ. ಭಾರತೀಯ ಕರಕುಶಲತೆಯ ಮೇರುಕೃತಿಗಳ ತುಣುಕುಗಳು ವಧು ವರರ ಉಡುಗೆಗಳಲ್ಲಿ ಮೇಳೈಸಿವೆ.

ಅನಂತ್ ಅಂಬಾನಿ ಅವರು ಪ್ರಾಣಿಗಳ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದ್ದರು. ಬ್ರೂಚ್ ಅನಂತ್‌ಗೆ ಪ್ರಾಣಿಗಳ ಮೇಲಿನ ಪ್ರೀತಿಯ ಸಂಕೇತವಾಗಿತ್ತು. ಇದು ವನ್ಯಜೀವಿ ಸಂರಕ್ಷಣಾ ಯೋಜನೆಯನ್ನು ಪ್ರಾರಂಭಿಸಲು ಅವರನ್ನು ಪ್ರೇರೇಪಿಸಿತು. ಪ್ರೀತಿಯ ಹೃದಯ ಮತ್ತು ದೃಢ ನಿರ್ಧಾರ ಸೇರಿದಂತೆ ಸಿಂಹದ ಎಲ್ಲಾ ವಿಶಿಷ್ಟ ಲಕ್ಷಣಗಳನ್ನು ವರ ಅನಂತ್‌ ಅಂಬಾನಿ ಈ ಬ್ರೂಚ್ ಮೂಲಕ ಹಂಚಿಕೊಂಡಿದ್ದಾರೆ ಎಂದು ಡಿಸೈನರ್ ಹೇಳಿದ್ದಾರೆ.

ಇದನ್ನೂ ಓದಿ: Anant Radhika Wedding: ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್‌ ಮರುಸೃಷ್ಟಿ!

ವಿನ್ಯಾಸಕಾರ ಲೋರೆನ್ ಶ್ವಾರ್ಟ್ಜ್ ಅವರು ಬ್ರೂಚ್ ತಯಾರಿಕೆಯ ತೆರೆಮರೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ಇದಕ್ಕೆ ಈ ಅದ್ಭುತ ಜೋಡಿಯಾದ ರಾಧಿಕಾ ಮತ್ತು ಅನಂತ್ ಅವರ ವಿವಾಹಕ್ಕಾಗಿ ತುಂಬಾ ಉತ್ಸುಕನಾಗಿದ್ದೇನೆ. ಜಾಮ್‌ನಗರದಲ್ಲಿ ಅವರ ವಿವಾಹಪೂರ್ವ ಆಚರಣೆಯಲ್ಲಿ ಅನಂತ್‌ಗಾಗಿ ಎದ್ದುಕಾಣುವ ಹಳದಿ ಡೈಮಂಡ್ ಲಯನ್ ಬ್ರೂಚ್‌ನಲ್ಲಿ ಕೆಲಸ ಮಾಡುವುದನ್ನು ನಾನು ವಿಶೇಷವಾಗಿ ಆನಂದಿಸಿದೆ. ಇದು ಅದ್ಭುತವಾಗಿತ್ತು. ಪ್ರಾಣಿಗಳ ಮೇಲಿನ ಅವರ ಪ್ರೀತಿ ಸ್ಫೂರ್ತಿದಾಯಕವಾಗಿತ್ತು ಎಂದು ಹೇಳಿದ್ದಾರೆ.

Exit mobile version