Site icon Vistara News

Ram Gopal Varma: ರಾಮ್ ಗೋಪಾಲ್ ವರ್ಮಾ ಶಿರಚ್ಛೇದನಕ್ಕೆ ಕರೆ, 1 ಕೋಟಿ ರೂ. ಬಹುಮಾನ ಘೋಷಣೆ!

Andhra Man offering rs 1 crore to behead Ram Gopal Varma

ನವದೆಹಲಿ: ಆಂಧ್ರ ಪ್ರದೇಶದ (Andhra Pradesh) ವ್ಯಕ್ತಿಯೊಬ್ಬರು ಖ್ಯಾತ ಸಿನಿಮಾ ನಿರ್ದೇಶಕ (Film Director) ರಾಮ್ ಗೋಪಾಲ್ ವರ್ಮಾ (Ram Gopal Varma) ಶಿರಚ್ಛೇದಕ್ಕೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ(bounty on RGV Head). ಖಾಸಗಿ ಸುದ್ದಿ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೇ ಕೋಲಿಕಪುಡಿ ಶ್ರೀನಿವಾಸ ರಾವ್ ಎಂಬುವವರು ಈ ಬೆದರಿಕೆ ಹಾಕಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರು ಶಿರಚ್ಛೇದಕ್ಕೆ ಕರೆ ನೀಡಿರುವ ವ್ಯಕ್ತಿಯ ವಿರುದ್ಧ ಆಂಧ್ರ ಪ್ರದೇಶ ಪೊಲೀಸರಿಗೆ ದೂರು (Andhra Pradesh Police) ನೀಡಿದ್ದಾರೆ.

ಶಿರಚ್ಚೇದಕ್ಕೆ ಕರೆ ನೀಡಿರುವ ಕೋಲಿಕಪುಡಿ ಶ್ರೀನಿವಾಸ ರಾವ್ ಅವರ ವಿಡಿಯೋ ಕ್ಲಿಪ್ ಷೇರ್ ಮಾಡಿಕೊಂಡಿರುವ ರಾಮ್ ಗೋಪಾಲ್ ವರ್ಮಾ ಅವರು, ಯಾರಾದರೂ ರಾಮ್ ಗೋಪಾಲ್ ವರ್ಮಾ ಅವರ ತಲೆ ಕಡಿದು ತಂದರೆ ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಶ್ರೀನಿವಾಸ್ ರಾವ್ ಹೇಳುತ್ತಾರೆ. ಆಗ ಆ್ಯಂಕರ್, ನಿಮ್ಮ ಮಾತುಗಳನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ಒತ್ತಾಯಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಆ ವ್ಯಕ್ತಿ ಹೇಳಿದ್ದನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಾನೆ. ಆಗ ಆಂಕರ್, “ಇಲ್ಲ ಸರ್, ನಾವು ಕಾನೂನನ್ನು ಅನುಸರಿಸಬೇಕಾಗಿದೆ, ದಯವಿಟ್ಟು ನಿಮ್ಮ ಮಾತುಗಳನ್ನು ಹಿಂಪಡೆಯಿರಿ” ಎಂದು ಒತ್ತಾಯಿಸುತ್ತಾರೆ. ಆದರೆ, ಕೋಲಿಕಪುಡಿ “ಸಮಾಜಕ್ಕಿಂತ ನನಗೆ ಯಾವುದೂ ದೊಡ್ಡದಲ್ಲ, ನಾನು ಕೂಡ ಅಲ್ಲ” ಎಂದು ಹೇಳುತ್ತಾನೆ. ರಾಮ್ ಗೋಪಾಲ್ ವರ್ಮಾ ಅವರು ಆಂಧ್ರಪ್ರದೇಶದ ರಾಜಕೀಯದ ಸುತ್ತ ಸುತ್ತುವ ವ್ಯೋಹಂ ಚಿತ್ರ ತಯಾರಿಸಿದ್ದಾರೆ. ಈ ಕುರಿತು ನಡೆದ ಚರ್ಚೆಯ ವೇಳೆ ಶಿರಚ್ಚೇದಕ್ಕೆ ಕರೆ ನೀಡಲಾಗಿದೆ.

ವ್ಯೂಹಂ ರೀತಿಯ ಸಿನಿಮಾಗಳನ್ನು ಅಲ್ಪಸಂಖ್ಯಾತರ ಕುರಿತಾಗಿಯೂ ಮಾಡುವಂತೆ ನಾನು ರಾಮ್ ಗೋಪಾಲ್ ವರ್ಮಾಗೆ ಸವಾಲು ಹಾಕುತ್ತೇನೆ. ಹಾಗೊಂದು ವೇಳೆ ಅಂಥ ಸಿನಿಮಾ ಮಾಡಿದರೆ ರಾಮ್ ಗೋಪಾಲ್ ವರ್ಮಾನನ್ನು ಅವರ ಮನೆಯಲ್ಲಿ ಜೀವ ಸಹಿತ ಸುಟ್ಟು ಹಾಕುತ್ತಾರೆ. ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಕುರಿತು ಕೆಟ್ಟದಾಗಿ ಮಾತನಾಡುವ ರಾಮ್ ಗೋಪಾಲ್ ವರ್ಮಾ ಅವರಿಗೆ, ಆ ನಟರ ಅಭಿಮಾನಿಗಳು ಕೂಡ ಬಿಡಲ್ಲ. ನಾನು ಕೂಡ ಚಿರಂಜೀವಿ ಅಭಿಮಾನಿ. ಅಪರಾಧ ಮಾಡಲು ಸಿದ್ಧನಿದ್ದೇನೆ ಎಂದು ಶ್ರೀನಿವಾಸ್ ಇದೇ ಚರ್ಚೆಯ ವೇಳೆ ಹೇಳುವುದನ್ನು ಕೇಳಬಹುದು.

ತಮ್ಮ ಎಕ್ಸ್ ಖಾತೆಯಲ್ಲಿ ಕ್ಲಿಪ್‌ಗಳನ್ನು ಹಂಚಿಕೊಂಡ ಆರ್‌ಜಿವಿ ಆಂಧ್ರಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿ, ತಮ್ಮ ಟ್ವೀಟ್‌ಗಳನ್ನು ಅಧಿಕೃತ ದೂರು ಎಂದು ಪರಿಗಣಿಸುವಂತೆ ವಿನಂತಿಸಿದ್ದಾರೆ. ಆತ್ಮೀಯ ಆಂಧ್ರ ಪ್ರದೇಶ ಪೊಲೀಸ್ ಶ್ರೀನಿವಾಸರಾವ್ ನನ್ನನ್ನು ಕೊಲ್ಲಲು 1 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಆತನಿಗೆ ಟಿವಿ5 ಚಾನೆಲ್‌ನ ಆ್ಯಂಕರ್ ಬಹಳ ಬುದ್ಧಿವಂತಿಕೆಯಿಂದ ಸಹಾಯ ಮಾಡಿದ್ದಾರೆ. ಆತ ನನ್ನ ಮೇಲೆ 3 ಬಾರಿ ಕಾಂಟ್ರಾಕ್ಟ್ ಕಿಲ್ಲಿಂಗ್ ಬಗ್ಗೆ ಬೆದರಿಕೆ ಹಾಕುವ ಮಾತುಗಳನ್ನಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಿ, ದಯವಿಟ್ಟು ಇದನ್ನು ನನ್ನ ಅಧಿಕೃತ ದೂರು ಎಂದು ಪರಿಗಣಿಸಿ. ಮತ್ತು ಸೂಕ್ತ ಕ್ರಮ ಕೈಗೊಳ್ಳಿ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: ದ್ರೌಪದಿ ಮುರ್ಮು ಅವಹೇಳನ: ರಾಮ್ ಗೋಪಾಲ್ ವರ್ಮಾ ವಿರುದ್ಧ ಕೇಸ್

Exit mobile version