Site icon Vistara News

Jagan Mohan Reddy: ಬಡ ಹೆಣ್ಣುಮಕ್ಕಳ ಮದುವೆಗೆ ತಲಾ 1 ಲಕ್ಷ ರೂ. ಬಿಡುಗಡೆ ಮಾಡಿದ ಆಂಧ್ರ

Jagan Mohan Reddy

ಅಮರಾವತಿ: ಆಂಧ್ರಪ್ರದೇಶದಲ್ಲಿ ಬಡ ಕುಟುಂಬದ ಹಿನ್ನೆಲೆಯುಳ್ಳ ಹೆಣ್ಣುಮಕ್ಕಳ ಮದುವೆಗಾಗಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ (Jagan Mohan Reddy) ನೇತೃತ್ವದ ರಾಜ್ಯ ಸರ್ಕಾರವು ೩೮.೧೮ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ವೈಎಸ್‌ಆರ್‌ ಕಲ್ಯಾಣಮಸ್ತು ಹಾಗೂ ವೈಎಸ್‌ಆರ್‌ ಶಾದಿ ತೊಹಫಾ ಯೋಜನೆ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಇದರಿಂದ ಸಾವಿರಾರು ಹೆಣ್ಣುಮಕ್ಕಳಿಗೆ ಅನುಕೂಲವಾಗಲಿದೆ.

೨೦೨೨ರ ಅಕ್ಟೋಬರ್‌ನಿಂದ ಡಿಸೆಂಬರ್‌ ಅವಧಿಯಲ್ಲಿ ನೋಂದಣಿ ಮಾಡಿಕೊಂಡ ಅರ್ಹ ೪,೫೩೬ ಹೆಣ್ಣುಮಕ್ಕಳಿಗೆ ೩೮.೧೮ ಕೋಟಿ ರೂ. ನೀಡಲಾಗುತ್ತದೆ. ಬಡ ಹೆಣ್ಣುಮಕ್ಕಳ ಮದುವೆಗೆ ಅನುಕೂಲವಾಗಲಿ ಎಂದು ಜಗನ್‌ ಮೋಹನ್‌ ರೆಡ್ಡಿ ಅವರು ಅಧಿಕಾರಕ್ಕೆ ಬಂದ ಬಳಿಕ ಧನಸಹಾಯದ ಮೊತ್ತವನ್ನು ಏರಿಕೆ ಮಾಡಿದ್ದಾರೆ.

ಎಸ್‌ಸಿ, ಎಸ್‌ಟಿ ಸಮುದಾಯದ ಹೆಣ್ಣುಮಕ್ಕಳಿಗೆ ಒಂದು ಲಕ್ಷ ರೂ., ಅಂತರ್‌ ಧರ್ಮೀಯವಾಗಿ ಮದುವೆಯಾದವರಿಗೆ ೧.೨ ಲಕ್ಷ ರೂ., ಹಿಂದುಳಿದ ವರ್ಗದವರಿಗೆ ೫೦ ಸಾವಿರ ರೂ., ಅಲ್ಪಸಂಖ್ಯಾತರಿಗೆ ಒಂದು ಲಕ್ಷ ರೂ. ಹಾಗೂ ವಿಶೇಷ ಚೇತನರಿಗೆ ೧.೫ ಲಕ್ಷ ರೂ. ನೆರವು ನೀಡಲಾಗುತ್ತದೆ.

ಇದನ್ನೂ ಓದಿ: Smriti Irani Daughter Wedding: ಸ್ಮೃತಿ ಇರಾನಿ ಮಗಳ ಅದ್ಧೂರಿ ಮದುವೆ; ಕೆಂಪು ಸೀರೆಯುಟ್ಟು ಮಿಂಚಿದ ಸಚಿವೆ

Exit mobile version