Site icon Vistara News

TTD Chairman: ಟಿಟಿಡಿಯ ನೂತನ ಚೇರ್ಮನ್‌ ಆಗಿ ಭೂಮನ ಕರುಣಾಕರ ರೆಡ್ಡಿ ನೇಮಕ; ಯಾರಿವರು?

Bhumana Karunakar Reddy With Jagan Mohan Reddy

Andhra Pradesh Government Bhumana Karunakar Reddy As TTD Chairman

ತಿರುಪತಿ: ಆಂಧ್ರಪ್ರದೇಶದ ಐತಿಹಾಸಿಕ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯಾದ ತಿರುಮಲ ತಿರುಪತಿ ದೇವಸ್ಥಾಮ್ಸ್‌ನ ನೂತನ ಚೇರ್ಮನ್‌ (TTD Chairman) ಆಗಿ ಶಾಸಕ ಭೂಮನ ಕರುಣಾಕರ ರೆಡ್ಡಿ (Bhumana Karunakar Reddy) ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಇದರೊಂದಿಗೆ ಭೂಮನ ಕರುಣಾಕರ ರೆಡ್ಡಿ ಅವರು ಎರಡನೇ ಬಾರಿಗೆ ಟಿಟಿಡಿ ಅಧ್ಯಕ್ಷರಾಗಿ ನೇಮಕಗೊಂಡಂತಾಗಿದೆ.

ತಿರುಪತಿ ಶಾಸಕರಾಗಿರುವ ಭೂಮನ ಕರುಣಾಕರ ರೆಡ್ಡಿ ಅವರನ್ನು ಟಿಟಿಡಿ ಅಧ್ಯಕ್ಷರನ್ನಾಗಿ ನೇಮಿಸಿ ಮುಖ್ಯಮಂತ್ರಿ ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಆಗಸ್ಟ್‌ 8ರಂದು ಭೂಮನ ಕರುಣಾಕರ ರೆಡ್ಡಿ ಅವರು ಟಿಟಿಡಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಾಗಿದ್ದು, ಶೀಘ್ರವೇ ಪದಾಧಿಕಾರಿಗಳನ್ನು ಕೂಡ ನೇಮಕ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಟಿಟಿಟಿ ಅಧ್ಯಕ್ಷರಾಗಿರುವ ವೈ.ವಿ. ಸುಬ್ಬಾರೆಡ್ಡಿ ಅವರ ಅಧಿಕಾರದ ಅವಧಿಯು ಆಗಸ್ಟ್‌ 8ರಂದು ಮುಕ್ತಾಯವಾಗಲಿದೆ. ಭೂಮನ ಕರುಣಾಕರ ರೆಡ್ಡಿ ಅವರು ಎರಡು ವರ್ಷಗಳ ಅವಧಿಗೆ ಟಿಟಿಡಿ ಅಧ್ಯಕ್ಷರಾಗಿರಲಿದ್ದಾರೆ. ಭೂಮನ ಕರುಣಾಕರ ರೆಡ್ಡಿ ಅವರು 2006ರಿಂದ 2008ರವರೆಗೆ ಟಿಟಿಡಿ ಅಧ್ಯಕ್ಷರಾಗಿದ್ದರು. ಈಗಿನ ಸಿಎಂ ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಅವರ ತಂದೆ ಮುಖ್ಯಮಂತ್ರಿಯಾಗಿದ್ದಾಗ ಭೂಮನ ಕರುಣಾಕರ ರೆಡ್ಡಿ ಅವರಿಗೆ ಟಿಟಿಡಿ ಅಧ್ಯಕ್ಷ ಸ್ಥಾನ ಒಲಿದುಬಂದಿತ್ತು. ಇವರು ತಿರುಪತಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Nandini Ghee : ತಿರುಪತಿ ಲಡ್ಡಿನಲ್ಲಿ ತುಪ್ಪ ಇಲ್ಲ; ಕಾಂಗ್ರೆಸ್‌- ಬಿಜೆಪಿ ಆರೋಪ-ಪ್ರತ್ಯಾರೋಪಕ್ಕೆ ಕೊನೆ ಇಲ್ಲ

ಟಿಟಿಡಿ ಆಡಳಿತ ಮಂಡಳಿಯಲ್ಲಿ ಒಬ್ಬ ಅಧ್ಯಕ್ಷ ಹಾಗೂ 35 ಸದಸ್ಯರು ಇರುತ್ತಾರೆ. ಐತಿಹಾಸಿಕ ದೇವಸ್ಥಾನದ ಮಂಡಳಿಯ ಚೇರ್ಮನ್‌ ಆಗಿ ಆಯ್ಕೆಯಾಗುವುದು ಆಂಧ್ರಪ್ರದೇಶದಲ್ಲಿ ಪ್ರತಿಷ್ಠೆಯಾಗಿದೆ. ಅದರಲ್ಲೂ, ಭೂಮನ ಕರುಣಾಕರ ರೆಡ್ಡಿ ಅವರು 15 ವರ್ಷದ ಬಳಿಕ ಚೇರ್ಮನ್‌ ಆಗಿ ಆಯ್ಕೆಯಾಗಲಿದ್ದಾರೆ. ವೈ.ವಿ. ಸುಬ್ಬಾರೆಡ್ಡಿ ಅವರು ಆಗಸ್ಟ್‌ 7ರಂದು ತಮ್ಮ ಅಧಿಕಾರದ ಅವಧಿಯ ಕೊನೆಯ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Exit mobile version