Site icon Vistara News

Cash Transfers: ಚುನಾವಣೆ; ಸರ್ಕಾರದ 14 ಸಾವಿರ ಕೋಟಿ ರೂ. ಜನರ ಖಾತೆಗೆ ವರ್ಗಾಯಿಸಲು ಕೋರ್ಟ್‌ ತಡೆ!

Court Order

Removing Girl's Underwear And Getting Naked Not Attempt to Rape, Says Rajasthan HC

ಹೈದರಾಬಾದ್:‌ ಆಂಧ್ರಪ್ರದೇಶದಲ್ಲಿ (Andhra Pradesh) ರಾಜ್ಯ ಸರ್ಕಾರದ ಹಣವನ್ನು ಫಲಾನುಭವಿಗಳಿಗೆ ವರ್ಗಾಯಿಸುವ ದಿಸೆಯಲ್ಲಿ ಆಡಳಿತ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯ ಹೈಕೋರ್ಟ್‌ (High Court) ಮಹತ್ವದ ಆದೇಶ ಹೊರಡಿಸಿದೆ. ಆಂಧ್ರಪ್ರದೇಶದಲ್ಲಿ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಅಂದರೆ, ಮೇ 13ರವರೆಗೆ ಹಣವನ್ನು ಜನರ ಖಾತೆಗಳಿಗೆ ವರ್ಗಾವಣೆ (Cash Transfers) ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಆಂಧ್ರಪ್ರದೇಶದಲ್ಲಿ ಹಲವು ಯೋಜನೆಗಳಿಗಾಗಿ ಮೀಸಲಿಸಿರುವ ಸುಮಾರು 14,165 ಕೋಟಿ ರೂಪಾಯಿಯನ್ನು ವರ್ಗಾವಣೆ ಮಾಡಬೇಕಿದೆ. ಆದರೆ, ಮೇ 13ರಂದು ರಾಜ್ಯ ವಿಧಾನಸಭೆಯ 175 ಸ್ಥಾನಗಳಿಗೆ ಹಾಗೂ 25 ಲೋಕಸಭೆ ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಆದರೆ, ನ್ಯಾಯಾಲಯವೀಗ ಮತದಾನ ಮುಗಿಯುವವರೆಗೆ ಹಣ ವರ್ಗಾವಣೆ ಮಾಡಬಾರದು ಎಂದು ಆದೇಶಿಸಿದೆ. ಇದಕ್ಕೂ ಮೊದಲು, ಮತದಾನಕ್ಕೂ 72 ಗಂಟೆ ಮೊದಲು ವರ್ಗಾವಣೆ ಮಾಡಲು ಅನುಮತಿ ನೀಡಿತ್ತು.

ಒಬ್ಬ ವಿದ್ಯಾರ್ಥಿ ಹಾಗೂ ಹಲವು ಮಹಿಳಾ ಫಲಾನುಭವಿಗಳು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಹಣ ವರ್ಗಾವಣೆಗೆ ಅನುಮತಿ ನೀಡಿತ್ತು. ಮತದಾನಕ್ಕೂ 72 ಗಂಟೆ ಮೊದಲು ಹಣವನ್ನು ವರ್ಗಾವಣೆ ಮಾಡಬಹುದು ಎಂದು ತಿಳಿಸಿತ್ತು. ಆದರೆ, ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸರ್ಕಾರವು ಹಣ ವರ್ಗಾವಣೆ ಮಾಡಬಾರದು. ಅದರಲ್ಲೂ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಹಣ ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದವು.

ಜನರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆ (DBT) ಸೇರಿ ಹಲವು ಯೋಜನೆಗಳ ಹಣವನ್ನು ವರ್ಗಾವಣೆ ಮಾಡುವುದು ಕೆಲ ತಿಂಗಳಿಂದ ಬಾಕಿ ಇದೆ. ಚುನಾವಣೆ ಸಂದರ್ಭದಲ್ಲಿ ಹಣ ವರ್ಗಾವಣೆ ವಿಷಯದಲ್ಲಿ ರಾಜಕೀಯ ಮೇಲಾಟವೂ ಶುರುವಾಗಿದೆ. “ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಹಾಗೂ ಬಿಜೆಪಿಯು ಜನರಿಗೆ ಯೋಜನೆಗಳ ಹಣ ತಲುಪಲು ಬಿಡುತ್ತಿಲ್ಲ. ಇವರಿಂದಾಗಿ ಕೇಂದ್ರದ ನೆರವನ್ನೂ ಪಡೆಯಲು ಆಗುತ್ತಿಲ್ಲ” ಎಂದು ದೂರಿದ್ದಾರೆ.

ಇದನ್ನೂ ಓದಿ: EVMs Damage: ಚುನಾವಣಾ ಸಿಬ್ಬಂದಿ ಇದ್ದ ಬಸ್‌ನಲ್ಲಿ ಬೆಂಕಿ ಅವಘಡ; ಮತಯಂತ್ರಗಳು ಡ್ಯಾಮೇಜ್‌

Exit mobile version