ನವದೆಹಲಿ: ಫೆಬ್ರವರಿ 14ರ ಪ್ರೇಮಿಗಳ ದಿನದಂದು ʼಗೋವುಗಳನ್ನು ಅಪ್ಪಿಕೊಳ್ಳಿʼ (Cow Hug Day) ಎಂದು ಅನಿಮಲ್ ವೆಲ್‌ಫೇರ್ ಬೋರ್ಡ್ ಆಫ್ ಇಂಡಿಯಾ (AWBI) ಹೊರಡಿಸಿದ ಅಧಿಸೂಚನೆಗೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಎಡಬ್ಲ್ಯೂಬಿಐ ಸೂಚನೆ ಹಿಂಪಡೆದಿದೆ.
ಪಶು ಸಂಗೋಪನೆ ಸಚಿವಾಲಯದ ನಿರ್ದೇಶನದ ಮೇರೆಗೆ ಫೆಬ್ರವರಿ 14ರಂದು ಗೋವುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಬೇಕು ಎಂಬುದಾಗಿ ಹೊರಡಿಸಿದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ” ಎಂದು ಎಡಬ್ಲ್ಯೂಬಿಐ ತಿಳಿಸಿದೆ. ಎಡಬ್ಲ್ಯೂಬಿಐ ಫೆಬ್ರವರಿ 6ರಂದು ಅಧಿಸೂಚನೆ ಹೊರಡಿಸಿತ್ತು. ಫೆಬ್ರವರಿ 14ರಂದು ಗೋವುಗಳನ್ನು ಅಪ್ಪಿಕೊಳ್ಳುವ ದಿನವನ್ನಾಗಿ ಆಚರಿಸಬೇಕು ಎಂದು ಸೂಚಿಸಿತ್ತು.
ಸನಾತನ ಆಚರಣೆಗಳನ್ನು ಪಾಲಿಸುವ ದಿಸೆಯಲ್ಲಿ ಗೋವುಗಳನ್ನು ಅಪ್ಪಿಕೊಳ್ಳಬೇಕು ಎಂದು ಉಲ್ಲೇಖಿಸಿತ್ತು. ಅಧಿಸೂಚನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇನ್ನೂ ಕೆಲವರು ವ್ಯಂಗ್ಯ, ಟ್ರೋಲ್‌ಗಳನ್ನು ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಎಡಬ್ಲ್ಯೂಬಿಐ ಆದೇಶ ಹಿಂಪಡೆದಿದೆ.
ಇದನ್ನೂ ಓದಿ: Cow Hug Day: ಬಿಜೆಪಿಗರಿಗೆ ಗೌತಮ್ ಅದಾನಿಯೇ ಪವಿತ್ರ ಗೋವು ಎಂದು ವ್ಯಂಗ್ಯವಾಡಿದ ಸಂಜಯ್ ರಾವತ್