ನವದೆಹಲಿ: ಮಾಂಡೌಸ್ ಸೈಕ್ಲೋನ್ ಅಬ್ಬರ ಇನ್ನೂ ಕಮ್ಮಿಯಾಗಿಲ್ಲ. ಆಗಲೇ ಮತ್ತೊಂದು ಚಂಡಮಾರುತವು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಸಿದ್ಧವಾಗುತ್ತಿದೆ (Cyclone in Andaman Sea) ಎಂದು ಹವಾಮಾನ ಇಲಾಖೆ ತಿಳಿಸಿದೆ. ಡಿಸೆಂಬರ್ 13ರಂದು ಈ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯ ಭುವನೇಶ್ವರ ವಿಜ್ಞಾನಿ ಉಮಾಶಂಕರ್ ದಾಸ್ ಅವರು ಟ್ವೀಟ್ ಮಾಡಿದ್ದಾರೆ.
ಸೈಕ್ಲೋನಿಕ್ ಪರಿಚಲನೆಯು ಕ್ರಮೇಣ ಕಡಿಮೆ ಒತ್ತಡದ ಪ್ರದೇಶಕ್ಕೆ ತೀವ್ರಗೊಳ್ಳುತ್ತದೆ. ಆದಾಗ್ಯೂ, ಇದು ಪ್ರಬಲ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಬಗ್ಗೆ ಸದ್ಯಕ್ಕೆ ಯಾವುದೇ ಮುನ್ಸೂಚನೆ ಇಲ್ಲ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಮಾಂಡೌಸ್ ಚಂಡಮಾರುತವು ಸಂಪೂರ್ಣವಾಗಿ ಭೂಮಿಗೆ ಅಪ್ಪಳಿಸಿದ್ದು, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಈಗಾಗಲೇ ಈ ಚಂಡಮಾರುತವು ಅಶಕ್ತಗೊಳ್ಳುತ್ತಾ ಸಾಗುತ್ತಿದೆ.
ಇದನ್ನೂ ಓದಿ | Cyclone Mandous | ಮಾಂಡೌಸ್ ದುರ್ಬಲವಾಗಿದ್ದರೂ ನಿಲ್ಲುತ್ತಿಲ್ಲ ಮಳೆ; ಆಂಧ್ರಪ್ರದೇಶದಲ್ಲಿ ಒಬ್ಬ ಸಾವು, ಪ್ರವಾಹ ಪರಿಸ್ಥಿತಿ