Site icon Vistara News

Rashmika Mandanna: ವೈರಲ್ ಆಯ್ತು ರಶ್ಮಿಕಾಳ ಮತ್ತೊಂದು ಡೀಪ್‌ಫೇಕ್ ವಿಡಿಯೋ!

Another deepfake video of Rashmika mandanna has gone viral

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿ, ಕನ್ನಡತಿ ರಶ್ಮಿಕಾ ಮಂದಣ್ಣ (Actor Rashmika Mandanna) ಅವರು ಮತ್ತೊಂದು ಡೀಪ್‌ಫೇಕ್ ವಿಡಿಯೋ (Deepfake Video) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ(viral Video). ನವೆಂಬರ್ 6ರಂದು ಇದೇ ರೀತಿಯ ಡೀಪ್‌ಫೇ‌ಕ್ ವಿಡಿಯೋ ಬಗ್ಗೆ ಸ್ವತಃ ರಶ್ಮಿಕಾ ಅವರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಬಳಿಕ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಹಲವರು ಡೀಪ್‌ಫೇಕ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ರಶ್ಮಿಕಾ ಮಾತ್ರವಲ್ಲದೇ, ಬಾಲಿವುಡ್ ನಟಿಯರಾದ ಕಾಜೋಲ್, ಕರೀನಾ ಕಪೂರ್ ಸೇರಿದಂತೆ ಇತರರ ಡೀಪ್‌ಫೇಕ್ ವಿಡಿಯೋಗಳು ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರವು, ಡೀಪ್‌ಫೇಕ್ ವಿಡಿಯೋ ಪ್ರಸಾರಕ್ಕೆ ಸೋಷಿಯಲ್ ಮೀಡಿಯಾಗಳನ್ನೇ (Social Media) ಹೊಣೆಯನ್ನಾಗಿಸುವುದಾಗಿ ಹೇಳಿದೆ. ಇಷ್ಟೆಲ್ಲ ಆಗುವ ಹೊತ್ತಿಗೆ ರಶ್ಮಿಕಾಳ ಮತ್ತೊಂದು ಡೀಪ್‌ಫೇಕ್ ವಿಡಿಯೋ ಸದ್ದು ಮಾಡುತ್ತಿದೆ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕೊಡಗಿನವರಾದ ರಶ್ಮಿಕಾ ಮಂದಣ್ಣ ಅವರು ಕನ್ನಡದ ಸೂಪರ್ ಸ್ಟಾರ್‌ಗಳ ಜತೆಗೆ ನಟಿಸುತ್ತಾ, ತೆಲುಗು ಮತ್ತು ತಮಿಳು ಚಿತ್ರರಂಗಳಲ್ಲಿ ಬಿಸಿಯಾದರೂ, ಅಂತೆಯೇ ಇಡೀ ದಕ್ಷಿಣ ಭಾರತದಲ್ಲಿ ಸಾಕಷ್ಟು ಹೆಸರು ಮಾಡಿದ ರಶ್ಮೀಕಾ ಈಗ ಹಿಂದಿಯಲ್ಲೂ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ರಣಬೀರ್ ಕಪೂರ್ ಜತೆಗೆ ನಟಿಸಿರುವ ಅನಿಮಲ್ ಚಿತ್ರ ತೆರೆಗೆ ಬರಲು ಸನ್ನದ್ಧವಾಗಿದೆ.

ರಶ್ಮಿಕಾಳ ಮತ್ತೊಂದು ಡೀಪ್ ಫೇಕ್ ವಿಡಿಯೋ

ಎಕ್ಸ್ ವೇದಿಕೆಯ ಸಲ್ಮಾನ್ ಖಾನ್(@SalmanK53465481) ಖಾತೆಯಲ್ಲಿ ರಶ್ಮಿಕಾ ಮಂದಣ್ಣ ಅವರು ಡೀಪ್‌ಫೇಕ್ ವಿಡಿಯೋವೊಂದನ್ನು ಷೇರ್ ಮಾಡಲಾಗಿದೆ ಮತ್ತು ಇದು ನಿಜವಾದ ರಶ್ಮಿಕಾ ಆಗಿದ್ದಾರೆಯೇ ಮತ್ತು ಮತ್ತೊಂದು ಡೀಪ್‌ಫೇಕ್ ವಿಡಿಯೋ ವೈರಲ್ ಆಗುತ್ತಿದೆ ಎಚ್ಚರ ಇರಲಿ ಎಂದು ಬರೆಯಲಾಗಿದೆ. ಈ ವಿಡಿಯೋದಲ್ಲಿ ಬ್ರಾ ಧರಿಸಿರುವ ಡ್ಯಾನ್ಸ್ ಮಾಡುತ್ತಿರುವ ಹುಡುಗಿಯೊಬ್ಬಳಿದ್ದು, ಆಕೆಯ ಮುಖಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಡೀಪ್‌ಫೇಕ್ ಮಾಡಲಾಗಿದೆ. ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗುತ್ತಿದೆ.

ಡೀಪ್‌ಫೇಕ್ ವಿಡಿಯೋ ತಡೆಯೋದು ಸೋಷಿಯಲ್ ಮೀಡಿಯಾಗಳ ಜವಾಬ್ದಾರಿ

ನಟಿ ರಶ್ಮಿಕಾ ಮಂದಣ್ಣ (rashmika mandanna) ಅವರು ಡೀಪ್‌ಫೇಕ್ ವಿಡಿಯೋ (Deepfake Video) ವೈರಲ್ ಆದ ಬೆನ್ನಲ್ಲೇ ದೇಶಾದ್ಯಂತ ಡೀಪ್‍ಫೇಕ್‌ ಕುರಿತು ಸಾಕಷ್ಟು ಚರ್ಚೆಗಳು ಶುರವಾಗಿವೆ. ಡೀಪ್‌ಫೇಕ್ ತಂತ್ರಜ್ಞಾನದ (Deepfake Technology) ದುರ್ಬಳಕೆಯ ಬಗ್ಗೆ ಆತಂಕಗಳ ವ್ಯಕ್ತವಾಗಿವೆ. ಈ ಡೀಪ್‍‌ಫೇಕ್ ವಿಡಿಯೋಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರವು (Central Government) ಭಾರತದಲ್ಲಿ ಸಕ್ರಿಯವಾಗಿರುವ ಸೋಷಿಯಲ್ ಮೀಡಿಯಾಗಳು (Social Media) ಕಂಪನಿಗಳ ಜತೆ ಸಭೆ ನಡೆಸಿದೆ. ನವೆಂಬರ್ 24ರಂದು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗಳ ಜತೆಗೆ ಕೇಂದ್ರ ಸರ್ಕಾರವು ಸಭೆ ನಡೆಸಿದೆ. ಸದ್ಯ ಚಾಲ್ತಿಯಲ್ಲಿರುವ ಕಾನೂನುಗಳನ್ನು ಬಳಸಿಕೊಂಡು ಡೀಪ್‌ಫೇಕ್ ಮತ್ತು ಮತ್ತು ಅಂಥ ನಕಲಿ ವಿಡಿಯೋಗಳ ಪ್ರಸರಣ ತಡೆಯುವುದು ಹೇಗೆ ಎಂಬುದರ ಕುರಿತು ಚರ್ಚಿಲಾಗುವುದು ಎಂದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.

ಇಂಟರ್ನೆಟ್ ಸುರಕ್ಷತೆ ಮತ್ತು ಡೀಪ್‌ಫೇಕ್‌ ವಿಡಿಯೋ ಪ್ರಸರಣವನ್ನು ತಡೆಯುವುದು ಸೋಷಿಯಲ್ ಮೀಡಿಯಾ ವೇದಿಕೆಗಳ ಜವಾಬ್ದಾರಿಯಾಗಿದೆ. ಹಾಗಾಗಿ, ಭಾರತೀಯ ಕಾನೂನಿಗೆ ಅನುಗುಣವಾಗಿ ವೇದಿಕೆಗಳು ತಮ್ಮ ಕಂಟೆಂಟ್ ಅನ್ನು ನಿಯಂತ್ರಿಸಬೇಕು ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.

ನವೆಂಬರ್ 24ರಂದು ನಾವು ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗಳ ಜತೆ ಸಭೆ ನಡೆಸಿದ್ದೇವೆ. ಇಂಟರ್ನೆಟ್ ಸುರಕ್ಷತೆಯನ್ನು ಕೈಗೊಳ್ಳುವುದು ಮತ್ತು ಡೀಪ್‌ಫೇಕ್‌ ವಿಡಿಯೋಗಳ ಪ್ರಸರಣವನ್ನು ತಡೆಯುವುು ವೇದಿಕೆಗಳ ಜವಾಬ್ದಾರಿಯಾಗಿದೆ ಎಂಬುದನ್ನು ನಾವು ತಿಳಿಸಿದ್ದೇವೆ. ದೇಶದಲ್ಲಿ ಜಾರಿಯಲ್ಲಿರುವ ಕಾನೂನುಗಳ ಪ್ರಕಾರ, ಈ ಹೊಣೆಗಾರಿಕೆ ಆಯಾ ವೇದಿಕೆಗಳದ್ದೇ ಆಗಿರುತ್ತದೆ. ಒಂದೊಮ್ಮೆ, ಡೀಪ್‌ಫೇಕ್‌ ವಿಡಿಯೋಗಳನ್ನು ಕಿತ್ತುಹಾಕಲು ವಿಫಲರಾದರೆ, ಅಂಥ ವೇದಿಕೆಗಳ ವಿರುದ್ಧ ವಿಚಾರಣೆ ಮತ್ತು ಡೀಪ್‌ಫೇಕ್ ವಿಡಿಯೋ ರಿಮೂವ್ ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರವು ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Deepfake: ಡೀಪ್‌ಫೇಕ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಾರಾ ತೆಂಡೂಲ್ಕರ್

Exit mobile version