ಸಿಕ್ಕಿಂ: ಮೇಘಸ್ಫೋಟದಿಂದ (Cloud burst) ಸಿಕ್ಕಿಂನಲ್ಲಿ ಸಂಭವಿಸಿದ ದಿಢೀರ್ ಪ್ರವಾಹಕ್ಕೆ (Sikkim Flash Flood) ಈವರೆಗೆ 40 ಜನರು ಮೃತಪಟ್ಟಿದ್ದಾರೆ(40 People Dead). ಈ ಪೈಕಿ 7 ಯೋಧರೂ (Indian Army Jawans) ಇದ್ದಾರೆ. ಸೇನೆಯೂ ಸೇರಿದಂತೆ ವಿವಿಧ ತಂಡಗಳು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ. ಈಗಲೂ ಸಾವಿರಾರು ಜನರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ರಕ್ಷಿಸಿಸುವ ಕೆಲಸ ನಡೆದಿದೆ. ಮತ್ತೊಂದು ನೀರ್ಗಲ್ಲು ಸರೋವರ (glacial lake burst) ಒಡೆದು ಹೋಗುವ ಸಾಧ್ಯತೆ ಇರುವುದರಿಂದ ಸಿಕ್ಕಿಮ್ ಪ್ರಯಾಣವನ್ನು (Sikkim Tour) ರದ್ದುಪಡಿಸುವಂತೆ ಅಧಿಕಾರಿಗಳು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.
ಸಿಕ್ಕಿಂನಲ್ಲಿ ಮೇಘಸ್ಫೋಟದ ನಂತರ ಹಠಾತ್ ಪ್ರವಾಹಕ್ಕೆ ಕಾರಣವಾದ ಮೂರನೇ ದಿನ, ಸಾವಿನ ಸಂಖ್ಯೆ 40 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ತಂಡಗಳು ರಾತ್ರಿಯಿಡೀ ಶವಗಳನ್ನು ಶೋಧಿಸಿದವು. ಮೇಘಸ್ಫೋಟದಿಂದ ಉಂಟಾಗಿರುವ ಪ್ರವಾಹದ ನೀರು ಬಂಗಾಳ ಕೊಲ್ಲಿಗೆ ರಭಸವಾಗಿ ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Sikkim Flash Flood: ಸಿಕ್ಕಿಂನಲ್ಲಿ ಮೇಘಸ್ಫೋಟ, ದಿಢೀರ್ ಪ್ರವಾಹ ಹೇಗಾಯ್ತು? ಉಪಗ್ರಹ ಫೋಟೋದಲ್ಲಿದೆ ಮಾಹಿತಿ!
“ಲಾಚೆನ್ ಮತ್ತು ಲಾಚುಂಗ್‌ನಲ್ಲಿ ಸುಮಾರು 3,000 ಜನರು ಸಿಲುಕಿಕೊಂಡಿದ್ದಾರೆ. ಮೋಟರ್‌ಸೈಕಲ್‌ಗಳಲ್ಲಿ ಅಲ್ಲಿಗೆ ಹೋದ 3,150 ಜನರು ಸಹ ಪ್ರವಾಹದಿಂದಾಗಿ ಸಿಲುಕಿಕೊಂಡಿದ್ದಾರೆ. ನಾವು ಸೇನೆ ಮತ್ತು ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ಎಲ್ಲರನ್ನೂ ಸ್ಥಳಾಂತರಿಸುತ್ತೇವೆ” ಎಂದು ಸಿಕ್ಕಿಂ ಮುಖ್ಯ ಕಾರ್ಯದರ್ಶಿ ವಿಜಯ್ ಭೂಷಣ್ ಪಾಠಕ್ ಹೇಳಿದ್ದಾರೆ.
ಇದೇ ವೇಳೆ, ಮತ್ತೊಂದು ನೀರ್ಗಲ್ಲು ಸರೋವರ ಒಡೆದು ಹೋಗುವ ಸಾಧ್ಯತೆಗಳಿವೆ. ಹಾಗೇನಾದರೂ ಮತ್ತೊಂದು ದಿಢೀರ್ ಪ್ರವಾಹವನ್ನು ನಿರೀಕ್ಷಿಸಬಹುದು. ಹಾಗಾಗಿ, ಸಿಕ್ಕಿಮ್ ಪ್ರಯಾಣವನ್ನು ರದ್ದುಪಡಿಸುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.