Site icon Vistara News

Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು

Goods Train Derails In Odisha

Another train derails in Odisha's Bargarh District

ಭುವನೇಶ್ವರ: ಒಡಿಶಾದ ಬಾಲಾಸೋರ್‌ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಸಂಭವಿಸಿದ ತ್ರಿವಳಿ ರೈಲುಗಳ ಅಪಘಾತದಲ್ಲಿ 288 ಜನ ಮೃತಪಟ್ಟು, ಸಾವಿರಾರು ಜನ ಗಾಯಗೊಂಡಿರುವ ಘಟನೆ ದೇಶವನ್ನೇ ಬೆಚ್ಚಿಬೀಳಿಸಿದ ಬೆನ್ನಲ್ಲೇ ಒಡಿಶಾ ರಾಜ್ಯದಲ್ಲೇ ಮತ್ತೊಂದು ರೈಲು (Odisha Train Accident) ಹಳಿ ತಪ್ಪಿದೆ.

ಹೌದು, ಬಾರ್‌ಗಢ ಜಿಲ್ಲೆಯಲ್ಲಿ ಗೂಡ್ಸ್‌ ರೈಲೊಂದು ಹಳಿ ತಪ್ಪಿದೆ. ರೈಲಿನ ಹಲವು ಬೋಗಿಗಳು ಹಳಿತಪ್ಪಿದ್ದು, ಯಾವುದೇ ಸಾವು-ನೋವಿನ ಕುರಿತು ವರದಿಯಾಗಿಲ್ಲ. ಗೂಡ್ಸ್‌ ರೈಲಾದ ಕಾರಣ ಹಾಗೂ ಭೀಕರ ಅಪಘಾತವಲ್ಲದ ಕಾರಣ ಸಾವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ, ಬಾಲಾಸೋರ್‌ ರೈಲು ದುರಂತದ ಬೆನ್ನಲ್ಲೇ ಮತ್ತೊಂದು ರೈಲು ಅಪಘಾತಕ್ಕೀಡಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ವಿಡಿಯೊ ನೋಡಿ

ಬಾರ್‌ಗಢ ಜಿಲ್ಲೆಯ ಮೆಂದಾಪಲಿ ಗ್ರಾಮದ ಬಳಿ ರೈಲು ಹಳಿ ತಪ್ಪಿದೆ. ಬಾರ್‌ಗಢ ಜಿಲ್ಲೆಯಿಂದ ರೈಲು ದುಂಗುರಿಗೆ ತೆರಳುತ್ತಿತ್ತು. ಇದೇ ವೇಳೆ ಅವಘಡ ಸಂಭವಿಸಿದೆ. ರೈಲಿನ ಐದು ಬೋಗಿಗಳು ಹಳಿ ತಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ರೈಲು ಬೋಗಿಯ ತಳದಲ್ಲಿ ಬಿರುಕು, ತಪ್ಪಿದ ದುರಂತ

ಇದಲ್ಲದೆ, ತಮಿಳುನಾಡಿನ ಶೆಂಗೊಟ್ಟಾಯ್‌ ಪಟ್ಟಣದಲ್ಲಿ ಎಕ್ಸ್‌ಪ್ರೆಸ್‌ ರೈಲಿನ ಬೋಗಿಯ ಕೆಳಗೆ ಬಿರುಕುಬಿಟ್ಟಿದ್ದು, ರೈಲು ಸಿಬ್ಬಂದಿ ಗಮನಿಸಿದ ಕಾರಣ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಕೊಲ್ಲಂ ಜಂಕ್ಷನ್‌-ಚೆನ್ನೈ ಎಗ್‌ಮೊರೆ ಎಕ್ಸ್‌ಪ್ರೆಸ್‌ ರೈಲಿನ ಕೆಳಗೆ ಬಿರುಕು ಬಿಟ್ಟಿದ್ದು, ರೈಲಿನ ಸಿಬ್ಬಂದಿಯು ಗಮನಿಸಿದ್ದಾರೆ. ರೈಲಿನ ಎಸ್‌-3 ಬೋಗಿಯ ಕೆಳಗೆ ಬಿಉರುಕು ಬಿಟ್ಟಿದೆ. ಕೂಡಲೇ ರೈಲ್ವೆ ಸಿಬ್ಬಂದಿಯು ಬೇರೆ ಬೋಗಿಯನ್ನು ಅಳವಡಿಸಿದ್ದಾರೆ. ಇದರಿಂದ ಒಂದೂವರೆ ಗಂಟೆ ತಡವಾಗಿ ರೈಲು ಮದುರೈಗೆ ಹೊರಟಿದೆ.

ಇದನ್ನೂ ಓದಿ: Odisha Train Accident: ಅಪಘಾತ ನಡೆದು 51 ಗಂಟೆಯಲ್ಲೇ ಹಳಿ ಸಿದ್ಧ, ರೈಲು ಸಂಚಾರ; 36 ತಾಸು ಸ್ಥಳದಲ್ಲೇ ಇದ್ದ ಸಚಿವ

Exit mobile version