ಗುವಾಹಟಿ: ಅಸ್ಸಾಂನಲ್ಲಿ ಬಾಲ್ಯವಿವಾಹದಿಂದಾಗಿ ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿರುವ ಕಾರಣ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ಬಾಲ್ಯವಿವಾಹ ತಡೆಗೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಹಾಗೆಯೇ, “ಹೆಣ್ಣುಮಕ್ಕಳು 22ರಿಂದ 30 ವರ್ಷದೊಳಗೆ ಮಾತ್ರ ಗರ್ಭ ಧರಿಸಬೇಕು” ಎಂದು ಸಲಹೆ ನೀಡಿದ್ದಾರೆ.
“ಹೆಣ್ಣುಮಕ್ಕಳು ತಾಯ್ತನದ ಬಗ್ಗೆ ಜಾಗೃತಿ ಹೊಂದಿರಬೇಕು. 22-30 ವರ್ಷದೊಳಗೆ ತಾಯಿಯಾಗಬೇಕು. ಆಗ ಮಾತ್ರ, ಯಾವುದೇ ವೈದ್ಯಕೀಯ ಸಮಸ್ಯೆ ಎದುರಾಗುವುದಿಲ್ಲ. ಇಲ್ಲದಿದ್ದರೆ, ವೈದ್ಯಕೀಯ ಸಮಸ್ಯೆಗಳು ಎದುರಾಗಿ ತಾಯಿ ಹಾಗೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ, ರಾಜ್ಯದಲ್ಲಿ ಬಾಲ್ಯ ವಿವಾಹ ತಡೆಗೆ ಸರ್ಕಾರವೂ ದಿಟ್ಟ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಿದೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: POCSO Act In Assam: 14ಕ್ಕಿಂತ ಕಡಿಮೆ ವಯಸ್ಸಿನವರನ್ನು ಮದುವೆ ಆಗುವ ಪುರುಷರ ವಿರುದ್ಧ ಪೋಕ್ಸೊ ಕೇಸ್: ಅಸ್ಸಾಂ ಸಿಎಂ
“ರಾಜ್ಯದಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಮದುವೆಯಾಗುವವರ ವಿರುದ್ಧ ಪೋಕ್ಸೊ ಕಾಯ್ದೆ ಅಡಿ ದೂರು ದಾಖಲಿಸಲಾಗುತ್ತದೆ. ಹಾಗೆಯೇ, 14 ವರ್ಷದೊಳಗಿನ ಹೆಣ್ಣುಮಕ್ಕಳ ಜತೆ ಲೈಂಗಿಕ ಸಂಪರ್ಕ ಹೊಂದುವ ಸಾವಿರಾರು ಪತಿಯರನ್ನು ಮುಂದಿನ ಐದಾರು ತಿಂಗಳಲ್ಲಿ ತಿಂಗಳಲ್ಲಿ ಬಂಧಿಸಲಾಗುತ್ತದೆ. ತಾಯಿ ಹಾಗೂ ಶಿಶುಗಳ ಮರಣ ತಡೆಯಲು ರಾಜ್ಯ ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಲಿದೆ” ಎಂದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://vistaranews.com/attribute-category/national/