Site icon Vistara News

Delhi High Court: ಅಮಿತಾಭ್ ಬಚ್ಚನ್ ಮೊಮ್ಮಗಳು ಆರಾಧ್ಯ ದಿಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದೇಕೆ?

Aradhya granddaughter of bachchan moves to Delhi High Court

ನವದೆಹಲಿ: ತನ್ನ ಆರೋಗ್ಯದ ಬಗ್ಗೆ ಫೇಕ್ ನ್ಯೂಸ್ ಪ್ರಸಾರ ಮಾಡಿದ ಯುಟ್ಯೂಬ್ ಟ್ಯಾಬ್ಲಾಯ್ಡ್ ವಿರುದ್ದ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಅವರು ಮೊಮ್ಮಗಳು, 11 ವರ್ಷದ ಆರಾಧ್ಯ ಬಚ್ಚನ್ ಅವರು ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆರಾಧ್ಯ(Aradhya), ನಟಿ ಐಶ್ವರ್ಯ ರೈ (Aishwarya Rai Bachchan) ಹಾಗೂ ಅಭಿಷೇಕ್ ಬಚ್ಚನ್ (Abhishek Bachchan) ಅವರ ಪುತ್ರಿಯಾಗಿದ್ದಾರೆ. ಆರಾಧ್ಯ ಅವರ ಅರ್ಜಿಯ ವಿಚಾರಣೆ ಏಪ್ರಿಲ್ 20 ಅಂದರೆ, ಗುರುವಾರ ನಡೆಯಲಿದೆ(Delhi High Court).

ತಮ್ಮ ಆರೋಗ್ಯ ಮತ್ತು ಜೀವನಕ್ಕೆ ಸಂಬಂಧಿಸಿದಂತೆ ‘ನಕಲಿ ಸುದ್ದಿ’ ವರದಿ ಮಾಡಿದ್ದಕ್ಕಾಗಿ ಯೂಟ್ಯೂಬ್ ಟ್ಯಾಬ್ಲಾಯ್ಡ್ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಆರಾಧ್ಯ ಅರ್ಜಿ ಸಲ್ಲಿಸಿದ್ದಾರೆ. ತಾನು 11 ವರ್ಷದ ಬಾಲಕಿಯಾಗಿದ್ದು, ತನ್ನ ಬಗ್ಗೆ ಮಾಧ್ಯಮಗಳು ಇಂತಹ ವರದಿ ಮಾಡುವುದಿಲ್ಲ ಸರಿಯಲ್ಲ ಎಂದು ಅರ್ಜಿಯಲ್ಲಿ ತಿಳಿಸಿರುವ ಆರಾಧ್ಯ, ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವಿರುದ್ಧ ತಡೆಯಾಜ್ಞೆ ಕೋರಿದ್ದಾರೆ. ಈ ಕುರಿತು ವಿಚಾರಣೆ ನಾಳೆ ಏಪ್ರಿಲ್ 20 ರಂದು ದೆಹಲಿ ಹೈಕೋರ್ಟ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ: Aishwarya Rai Bachchan | ಮಗಳು ಆರಾಧ್ಯಳಿಗೆ ಐಶ್ವರ್ಯಾ ರೈ ಪ್ರೀತಿಯಿಂದ ಸಿಹಿ ಮುತ್ತು: ʻನಾಚಿಕೆಗೇಡುʼಅಂದ್ರು ನೆಟ್ಟಿಗರು!

ಈ ಸೋಷಿಯಲ್ ಮೀಡಿಯಾ ಜಮಾನದಲ್ಲಿ ಮೇಲಿಂದ ಮೇಲೆ ಆರಾಧ್ಯ, ಟ್ರೋಲ್‌ಗಳಿಗ ಆಹಾರವಾಗಿದ್ದಾಳೆ. ಬಾಬ್ ಬಿಸ್ವಾಸ್ ಪ್ರಮೋಷನ್ಸ್‌ ವೇಳೆ, ತನ್ನ ಪುತ್ರ ವಿರುದ್ಧ ನಿರಂತರವಾಗಿ ದಾಳಿ ನಡೆಸುತ್ತಿದ್ದ ಟ್ರೋಲ್‌ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಕುರಿತು ಮಾತನಾಡಿದ್ದ ಅಭಿಷೇಕ್ ಬಚ್ಚನ್, ಇದು ಖಂಡಿತವಾಗಿ ಸ್ವೀಕಾರ್ಹವಲ್ಲ. ಇದನ್ನು ನಾನು ಸಹಿಸಲು ಸಾಧ್ಯವಿಲ್ಲ. ನಾನು ಸಾರ್ವಜನಿಕ ವ್ಯಕ್ತಿಯಾಗಿದ್ದೇನೆ ಓಕೆ. ಈ ವ್ಯಾಪ್ತಿಗೆ ನನ್ನ ಮಗಳು ಬರುವುದಿಲ್ಲ. ನಿಮಗೆ(ಟ್ರೋಲಿಗರಿಗೆ) ಏನಾದರೂ ಹೇಳುವುದಿಲ್ಲ ನನ್ನ ಮುಂದೆ ಬನ್ನಿ, ಎದುರಾರೆದುರು ಮಾತನಾಡಿ ಎಂದು ವಾರ್ನಿಂಗ್ ಮಾಡಿದ್ದರು.

ಒಪ್ಪಿಗೆ ಇಲ್ಲದೇ ಅಮಿತಾಭ್ ಬಚ್ಚನ್ ಫೋಟೋ, ಧ್ವನಿ, ಹೆಸರು ಬಳಸಿಕೊಳ್ಳುವಂತಿಲ್ಲ!

ಕೆಲವು ತಿಂಗಳ ಹಿಂದೆ ಅಮಿತಾಭ್ ಬಚ್ಚನ್ ಅವರೂ ದಿಲ್ಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ತಮ್ಮ ಅನುಮತಿ ಇಲ್ಲಿದೇ ಅವರ ಫೋಟೋ, ಹೆಸರು ಮತ್ತು ಧ್ವನಿಯನ್ನು ಯಾರೂ ಬಳಸಿಕೊಳ್ಳುವಂತಿಲ್ಲ ಎಂದು ಕೋರಿದ್ದರು. ಅವರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಅನುಮತಿ ಇಲ್ಲದೇ ಅಮಿತಾಭ್ ಅವರ ಫೋಟೋ, ಧ್ವನಿ ಮತ್ತು ಹೆಸರು ಬಳಕೆಗೆ ನಿರ್ಬಂಧ ಹೇರಿತ್ತು.

ಒಬ್ಬ ಸೆಲೆಬ್ರಿಟಿಯಾಗಿರುವ ಅಮಿತಾಭ್ ಬಚ್ಚನ್ ಅವರ ಪಬ್ಲಿಸಿಟಿ ಹಕ್ಕುಗಳನ್ನು ದಿಲ್ಲಿ ಹೈಕೋರ್ಟ್ ಮಾನ್ಯ ಮಾಡಿತ್ತು. ಒಂದು ವೇಳೆ ಅವರಿಗೆ ರಕ್ಷಣೆ ಒದಗಿಸದಿದ್ದರೆ ದುರಸ್ತಿ ಮಾಡಲಾರದಷ್ಟು ನಷ್ಟ ಬಚ್ಚನ್ ಅವರಿಗೆ ಆಗಲಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್, ಟೆಲಿಕಾಂ ಸಚಿವಾಲಯ ಹಾಗೂ ಇತರ ಸಂಸ್ಥೆಗಳಿಗೆ ಬಚ್ಚನ್‌ಗೆ ಸಂಬಂಧಿಸಿದ ಕಂಟೆಂಟ್ ತೆಗೆದು ಹಾಕುವಂತೆ ಸೂಚಿಸಿತ್ತು.

ಖ್ಯಾತ ನ್ಯಾಯವಾದಿ ಹರೀಶ್ ಸಾಳ್ವೆ ಅವರು ಅಮಿತಾಭ್ ಬಚ್ಚನ್ ಅವರ ಪರವಾಗಿ ವಾದ ಮಂಡಿಸಿ, ಬಚ್ಚನ್ ಅವರ ಭಾವಚಿತ್ರಗಳು, ಧ್ವನಿ ಮತ್ತು ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಲವು ಉದಾಹರಣೆಗಳನ್ನು ನ್ಯಾಯಾಲಯದ ಮುಂದೆ ಸಾಕ್ಷಾಧಾರಗಳ ಸಮೇತ ಸಾದರಪಡಿಸಿದ್ದರು. ಹಲವರು ಲಾಟರಿ, ಬಟ್ಟೆಗಳು, ಪೋಸ್ಟರ್‌ಗಳು ಸೇರಿದಂತೆ ಅನೇಕ ರೀತಿಯಲ್ಲಿ ಬಚ್ಚನ್ ಹೆಸರು, ಫೋಟೋ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೆಲವರು ಬಚ್ಚನ್ ಹೆಸರಿನಲ್ಲಿ ವೆಬ್‌ಸೈಟ್ ಕೂಡ ತೆರೆದಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.

Exit mobile version