Site icon Vistara News

Aramane Giridhar | ಮೊಯ್ಲಿ ಕೇಂದ್ರ ಮಂತ್ರಿ ಆಗಿದ್ದಾಗ ಅವರ ನಡೆ ಟೀಕಿಸಿದ್ದ ಅರಮನೆ ಗಿರಿಧರ್‌ ಈಗ ರಕ್ಷಣಾ ಕಾರ್ಯದರ್ಶಿ

Giridhar

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಕಾರ್ಯದರ್ಶಿ ಆಗಿದ್ದ ಅರಮನೆ ಗಿರಿಧರ್‌ (Aramane Giridhar) ಅವರನ್ನು ರಕ್ಷಣಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಅಧ್ಯಕ್ಷ ಅಲ್ಕಾ ಉಪಾಧ್ಯಾಯ ಅವರು ಈಗ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಕಾರ್ಯದರ್ಶಿಯಾಗಿದ್ದಾರೆ.

ಕನ್ನಡಿಗ ವೀರಪ್ಪ ಮೊಯ್ಲಿ ಅವರು ಯುಪಿಎ ಅವಧಿಯಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವರಾಗಿದ್ದಾಗ ಅರಮನೆ ಗಿರಿಧರ್‌ ಅವರು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಇಲಾಖೆಯ ಜಂಟಿ ಕಾರ್ಯದರ್ಶಿ ಆಗಿದ್ದರು. ಆಗ ವೀರಪ್ಪ ಮೊಯ್ಲಿ ಅವರ ನಿರ್ಧಾರಗಳನ್ನು ಅರಮನೆ ಗಿರಿಧರ್‌ ವಿರೋಧಿಸಿದ್ದರು. ಇವರು ೧೯೮೮ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿಯಾಗಿದ್ದಾರೆ.

ಇದನ್ನೂ ಓದಿ | KPSC Recruitment 2022 | ಸಹಾಯಕ ಸಾಂಖ್ಯಿಕ ಅಧಿಕಾರಿ, ನಿರೀಕ್ಷಕರ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಪ್ರಕಟ

Exit mobile version