Site icon Vistara News

Fact Check: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದವರು ಆರೆಸ್ಸೆಸ್‌ ಕಾರ್ಯಕರ್ತರೇ?

Manipur Violence Fact Check

Are Manipur Women Pareded Accused RSS Workers? Here Is Fact Check

ಇಂಫಾಲ: ಮಣಿಪುರದಲ್ಲಿ ಹಿಂಸಾಚಾರದ ಜತೆಗೆ ಅಮಾನುಷ ಘಟನೆಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯ ಸಜೀವ ದಹನ, ಹೆಣ್ಣುಮಕ್ಕಳ ರುಂಡ ಕತ್ತರಿಸುವುದು ಸೇರಿ ಹಲವು ಘಟನೆಗಳು ನಡೆದಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಕೇಳಿಬರುತ್ತಿದೆ. ಇನ್ನು, ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಮೆರವಣಿಗೆ ಮಾಡಿದವರು ಆರ್‌ಎಸ್‌ಎಸ್‌ ಕಾರ್ಯಕರ್ತರು ಎಂಬ ವದಂತಿ (Fact Check) ಹರಡಿದೆ.

ಮೊದಲಿಗೆ ಸಿಪಿಎಂ ಪಕ್ಷದ ನಾಯಕಿ ಸುಭಾಷಿಣಿ ಅಲಿ ಅವರು ಆರ್‌ಎಸ್‌ಎಸ್‌ ಸಮವಸ್ತ್ರದಲ್ಲಿರುವ ಇಬ್ಬರು ವ್ಯಕ್ತಿಗಳ ಫೋಟೊ ಟ್ವೀಟ್‌ ಮಾಡಿದ್ದರು. “ಇವರು ಮಣಿಪುರ ಘಟನೆಯ ಆರೋಪಿಗಳು. ಇವರ ಬಟ್ಟೆ ನೋಡಿ ಯಾರೆಂದು ಗುರುತಿಸಿ” ಎಂದು ಪರೋಕ್ಷವಾಗಿ ಇವರು ಆರ್‌ಎಸ್‌ಎಸ್‌ ಕಾರ್ಯಕರ್ತರು ಎಂದು ಹೇಳಿದ್ದಾರೆ. ಇದಾದ ಬಳಿಕ ಫೋಟೊ ವೈರಲ್‌ ಆಗುವ ಜತೆಗೆ ಆರ್‌ಎಸ್‌ಎಸ್‌ ಕಾರ್ಯಕರ್ತರೇ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ್ದಾರೆ ಎಂದು ಮಾಹಿತಿ ಹರಡಲಾಗಿತ್ತು.

ವದಂತಿ ಹರಡಿಸಿದ ಸುಭಾಷಿಣಿ ಅಲಿ

ಆರೋಪಿಗಳು ಆರ್‌ಎಸ್‌ಎಸ್‌ ಕಾರ್ಯಕರ್ತರೇ?

ಸುಭಾಷಿಣಿ ಅಲಿ ಅವರು ಫೋಟೊ ಅಪ್‌ಲೋಡ್‌ ಮಾಡುತ್ತಲೇ ರಾಷ್ಟ್ರೀಯ ಸ್ವಯಂಸೇವಕ ಸಂಘವು ಆರೋಪವನ್ನು ಅಲ್ಲಗಳೆದಿದೆ. ಫೋಟೊದಲ್ಲಿರುವವರಿಗೂ, ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ ಎಂದು ತಿಳಿಸಿದೆ. ಅಷ್ಟೇ ಅಲ್ಲ, ತಪ್ಪು ಮಾಹಿತಿ ಹರಡಿದ ಸುಭಾಷಿಣಿ ಅಲಿ ವಿರುದ್ಧ ಸಂಘವು ಎಫ್‌ಐಆರ್‌ ದಾಖಲಿಸಿದೆ.

ಇದನ್ನೂ ಓದಿ: Manipur Violence: ಮಣಿಪುರ ಅಲ್ಲ ‘ಹೆಣಪುರ’; ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯನ್ನು ಜೀವಂತ ಸುಟ್ಟ ದುರುಳರು

ಕ್ಷಮೆ ಕೇಳಿದ ಸುಭಾಷಿಣಿ ಅಲಿ

ಆರ್‌ಎಸ್‌ಎಸ್‌ ಪ್ರಕರಣ ದಾಖಲಿಸುತ್ತಲೇ ಟ್ವಿಟರ್‌ನಲ್ಲಿ ಸಿಪಿಎಂ ನಾಯಕಿ ಸುಭಾಷಿಣಿ ಅಲಿ ಅವರು ಕ್ಷಮೆಯಾಚಿಸಿದ್ದಾರೆ. “ನಾನು ಇಬ್ಬರು ವ್ಯಕ್ತಿಗಳ ಫೋಟೊ ಅಪ್‌ಲೋಡ್‌ ಮಾಡಿರುವುದಕ್ಕೆ ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.

“ಮಣಿಪುರ ಘಟನೆ ವಿಚಾರದಲ್ಲಿ ನಾನು ಇಬ್ಬರ ವ್ಯಕ್ತಿಗಳ ಫೋಟೊ ಟ್ವೀಟ್‌ ಮಾಡುವ ಮೂಲಕ ತಪ್ಪು ಮಾಹಿತಿ ಹರಡಿಸಿದ್ದೇನೆ. ನಾನು ಭೇಷರತ್‌ ಕ್ಷಮೆ ಕೇಳುತ್ತೇನೆ. ಉದ್ದೇಶಪೂರ್ವಕವಾಗಿ ನಾನು ಹೀಗೆ ಮಾಡಿಲ್ಲ” ಎಂದು ಟ್ವೀಟ್‌ ಮೂಲಕ ಸುಭಾಷಿಣಿ ಅಲಿ ಟ್ವೀಟ್‌ ಮಾಡಿದ್ದಾರೆ.

ಅಷ್ಟೇ ಅಲ್ಲ ಫೋಟೊದಲ್ಲಿರುವವರು ಚಿದಾನಂದ ಎಂಬುದಾಗಿ ತಿಳಿದುಬಂದಿದ್ದು, ಖುದ್ದು ಅವರೇ ಟ್ವೀಟ್‌ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, “ನನ್ನ ಹಾಗೂ ನನ್ನ ಫೋಟೊವನ್ನು ಏಕೆ ವದಂತಿ ಹರಡಿಸಲು ಬಳಸಲಾಗುತ್ತಿದೆ? ನಾನು ಕ್ರಿಮಿನಲ್‌ ಕೇಸ್‌ ದಾಖಲಿಸುತ್ತೇನೆ” ಎಂದು ಅವರು ಹೇಳಿದ್ದಾರೆ. ಹಾಗೆಯೇ, “ನಾನು ಬಿಜೆಪಿ ಮಣಿಪುರ ಘಟಕದ ರಾಜ್ಯ ಉಪಾಧ್ಯಕ್ಷನಾಗಿದ್ದು, ನಾನಾಗಲಿ, ನನ್ನ ಕುಟುಂಬವಾಗಲಿ ಇಂತಹ ಯಾವುದೇ ಅಪರಾಧದಲ್ಲಿ ತೊಡಗಿಲ್ಲ” ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.

Exit mobile version