Site icon Vistara News

Armaan Malik Wives | ಯುಟ್ಯೂಬರ್‌ ಅರ್ಮಾನ್ ಮಲಿಕ್‌ ಇಬ್ಬರು ಪತ್ನಿಯರೂ ಏಕಕಾಲಕ್ಕೆ ಪ್ರೆಗ್ನೆಂಟ್‌, ಟ್ಯಾಲೆಂಟ್‌ ಎಂದ ಜನ

Arman Malik Wives Pregnant

ಹೈದರಾಬಾದ್:‌ ಖ್ಯಾತ ಯುಟ್ಯೂಬರ್‌ ಅರ್ಮಾನ್‌ ಮಲಿಕ್‌ ಅವರು ಯುಟ್ಯೂಬ್‌ ಸೇರಿ ಯಾವುದೇ ಜಾಲತಾಣದಲ್ಲಿ ವಿಡಿಯೊ ಅಪ್‌ಲೋಡ್‌ ಮಾಡಿದರೂ ಅದು ಲಕ್ಷಾಂತರ ಜನರನ್ನು ತಲುಪುತ್ತದೆ, ಸುದ್ದಿಯಾಗುತ್ತದೆ. ಆದರೆ, ಈಗ ಅರ್ಮಾನ್‌ ಮಲಿಕ್‌ ಅವರೇ ಸುದ್ದಿಯಾಗಿದ್ದಾರೆ. ಅರ್ಮಾನ್‌ ಮಲಿಕ್‌ ಅವರ ಇಬ್ಬರೂ ಪತ್ನಿಯರು (Armaan Malik Wives) ಏಕಕಾಲಕ್ಕೆ ಗರ್ಭ ಧರಿಸಿದ್ದು, ಇಂಟರ್‌ನೆಟ್‌ನಲ್ಲಿ ಅರ್ಮಾನ್‌ ಮಲಿಕ್‌ ಟ್ರೋಲ್‌ ಆಗುತ್ತಿದ್ದಾರೆ.

ಇಬ್ಬರೂ ಪತ್ನಿಯರೊಂದಿಗೆ ಇರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು, ಅವರು ಗರ್ಭಿಣಿಯಾಗಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಪತ್ನಿಯರಾದ ಪಾಯಲ್‌ ಹಾಗೂ ಕೃತಿಕಾ ಅವರ ಫೋಟೊಗಳನ್ನೂ ಪ್ರತ್ಯೇಕವಾಗಿ ಶೇರ್‌ ಮಾಡಿದ್ದಾರೆ. ಆದರೆ, ಇದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಿನಗೆ ನಾಚಿಕೆಯಾಗಬೇಕು” ಎಂದಿದ್ದಾರೆ. “ಮೂವರು ಹೇಗೆ ಒಟ್ಟಿಗೆ ವಾಸಿಸುತ್ತೀರೋ, ನಾಚಿಕೆಯಾಗುವುದಿಲ್ಲ”, “ಇದು ವಿಶೇಷ ಟ್ಯಾಲೆಂಟ್” ಎಂದೆಲ್ಲ ಕಾಲೆಳೆದಿದ್ದಾರೆ.

ಅಲ್ಲದೆ, “ಇಬ್ಬರೂ ಏಕಕಾಲಕ್ಕೆ ಹೇಗೆ ಪ್ರೆಗ್ನೆಂಟ್‌ ಆಗಲು ಸಾಧ್ಯ” ಎಂಬ ಪ್ರಶ್ನೆಯನ್ನೂ ತೂರಿಬಿಟ್ಟಿದ್ದಾರೆ. ಅರ್ಮಾನ್‌ ಮಲಿಕ್‌ ಖ್ಯಾತ ಯುಟ್ಯೂಬರ್‌ ಆಗಿದ್ದು, ಯುಟ್ಯೂಬ್‌ನಲ್ಲಿ ಅವರಿಗೆ ೨೦ ಲಕ್ಷ ಫಾಲೋವರ್ಸ್‌ ಇದ್ದಾರೆ. ಅರ್ಮಾನ್‌ ಅವರಿಗೆ ಈಗಾಗಲೇ ಚಿರಾಯು ಎಂಬ ಮಗನಿದ್ದಾನೆ.

ಇದನ್ನೂ ಓದಿ | Janhvi Kapoor | ಮಾಲ್ಡೀವ್ಸ್‌ಗೆ ಹಾರಿದ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌: ಚಳಿ ನಡುವೆ ಹಾಟ್‌ ಫೋಟೊ ವೈರಲ್‌!

Exit mobile version