Site icon Vistara News

Jammu And Kashmir: ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾಧಿಕಾರಿ, ಇಬ್ಬರು ಯೋಧ ಹುತಾತ್ಮ

Terror Attack in Kashmir, Terrorists ambush Army truck in Poonch district

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿ ಜಿಲ್ಲೆಯ (Rajouri district ) ಬಾಜಿ ಮಾಲ್ ಅರಣ್ಯದಲ್ಲಿ (Baji Mall forest) ಉಗ್ರರರೊಂದಿಗೆ (Terrorists) ನಡೆದ ಭೀಕರ ಎನ್‌ಕೌಂಟರ್‌ನಲ್ಲಿ ಕ್ಯಾಪ್ಟನ್ ಶ್ರೇಣಿಯ ಇಬ್ಬರು ಸೇನಾ ಅಧಿಕಾರಿ (Army Officer) ಮತ್ತು ಇಬ್ಬರು ಯೋಧರು (Soldier Died) ಹುತಾತ್ಮರಾಗಿದ್ದಾರೆ. ಮತ್ತಿಬ್ಬರು ಯೋಧರು ಗಾಯಗೊಂಡಿರುವ ಘಟನೆ ನಡೆದಿದೆ. ಅರಣ್ಯದಲ್ಲಿ ಉಗ್ರರು ಬೀಡು ಬಿಟ್ಟಿರುವ ಖಚಿತ ಮಾಹಿತಿಯ ಮೇರೆಗೆ, ಸೇನೆಯ ವಿಶೇಷ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆಗಳು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದವು. ಈ ವೇಳೆ ಭಾರೀ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಿರ್ ಪಂಜಾಲ್ ಅರಣ್ಯವು ಕಳೆದ ಕೆಲವು ವರ್ಷಗಳಲ್ಲಿ ಸರಣಿ ಎನ್‌ಕೌಂಟರ್‌ಗಳ ನಂತರ ಭದ್ರತಾ ಪಡೆಗಳಿಗೆ ಸವಾಲಾಗಿದೆ. ಈಗ ಈ ದಟ್ಟಾರಣ್ಯವನ್ನೇ ತಮ್ಮ ಕಾರಸ್ಥಾನವನ್ನು ಮಾಡಿಕೊಳ್ಳುತ್ತಿರುವ ಬೆಳವಣಿಗೆಯಾಗುತ್ತಿವೆ. ಅರಣ್ಯ ಪರಿಸ್ಥಿತಿಯನ್ನು ಲಾಭವನ್ನು ಪಡೆದುಕೊಂಡು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈ ಮೊದಲು ಉಗ್ರರು ಹಳ್ಳಿಗಳು, ನಗರಗಳಲ್ಲಿ ಇದ್ದುಕೊಂಡು ತಮ್ಮ ಉಗ್ರ ಕೃತ್ಯಗಳನ್ನು ನಡೆಸುತ್ತಿದ್ದರು. ಈಗ ಅವರು ತಮ್ಮ ಕಾರ್ಯಯೋಜನೆಯನ್ನು ಬದಲಿಸಿಕೊಂಡಿದ್ದಾರೆ. ಭಯೋತ್ಪಾದಕರು ತಮ್ಮ ತಾವಿರುವ ಸ್ಥಳವನ್ನು ಗುಪ್ತವಾಗಿಡಲು ಪರ್ವತಗಳು, ದಟ್ಟವಾದ ಕಾಡುಗಳು ಮತ್ತು ಆಲ್ಪೈನ್ ಕಾಡುಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.

ರಾಜೌರಿ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕಳೆದ ವಾರ ಭದ್ರತಾ ಪಡೆಗಳು ಒಬ್ಬ ಉಗ್ರನನ್ನು ಹೊಡೆದು ಹಾಕಿದ್ದರು.

ವಾರದ ಹಿಂದೆ ಉಗ್ರರ ಕಮಾಂಡರ್ ಬಶೀರ್ ಮಲಿಕ್ ಹತ್ಯೆ

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉರಿ ಸೆಕ್ಟರ್‌ನಲ್ಲಿ (Uri Sector) ಗಡಿಯೊಳಗೆ ನುಸುಳುತ್ತಿದ್ದ ಉಗ್ರರ ಪ್ರಮುಖ ಕಮಾಂಡರ್ ಬಶೀರ್ ಅಹ್ಮದ್ ಮಲಿಕ್‌ನನ್ನು(Terrorist Commander Bashir Ahmad Malik) ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಸೇನೆ ಗುರುವಾರ ಹೇಳಿದೆ(Indian Army). ಈ ಮೂಲಕ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ವ್ಯವಸ್ಥೆ ಮತ್ತು ಭಯೋತ್ಪಾದಕರ ಸಹಾನುಭೂತಿ ಹೊಂದಿದವರಿಗೆ ಭಾರತೀಯ ಭದ್ರತಾ ಪಡೆಗಳು ದೊಡ್ಡ ಹೊಡೆತವನ್ನು ನೀಡಿವೆ. ಮಲಿಕ್ ಮತ್ತು ಮತ್ತೊಬ್ಬ ಭಯೋತ್ಪಾದಕ ಅಹ್ಮದ್ ಗನಿ ಶೇಖ್‌ನನ್ನು ಗಡಿ ನಿಯಂತ್ರಣ ರೇಖೆಯಲ್ಲಿ (LOC) ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ್ ಪೊಲೀಸ್ ಪೊಲೀಸರು ನಡೆಸಿದ ಆಪರೇಷನ್ ಕಾಲಿ ಜಂಟಿ ಕಾರ್ಯಾಚರಣೆಯಲ್ಲಿ ಬುಧವಾರ ಕೊಲ್ಲಲಾಗಿದೆ.

ಮಲಿಕ್ ಮೂರು ದಶಕಗಳಿಂದ ಭಯೋತ್ಪಾದನೆ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲದೊಂದಿಗೆ ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ. ಉತ್ತರದ ಲೀಪಾದಿಂದ ದಕ್ಷಿಣದ ರಜೌರಿ ಎದುರು ಪಾಕಿಸ್ತಾನ ಆಕ್ರಮಿತ-ಕಾಶ್ಮೀರದ ಪ್ರದೇಶಗಳವರೆಗೆ ಭಯೋತ್ಪಾದಕ ಸಂಘಟನೆಗಳಿಗೆ ಪ್ರಮುಖ ಭಯೋತ್ಪಾದಕ ಕಮಾಂಡರ್ ಆಗಿದ್ದ ಎಂದು ಸೇನೆಯ 8 ರಾಷ್ಟ್ರೀಯ ರೈಫಲ್ಸ್ ಕಮಾಂಡಿಂಗ್ ಅಧಿಕಾರಿ ಕರ್ನಲ್ ರಾಘವ್ ಉರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಗ್ರ ಮಲಿಕ್ ನಿಯಂತ್ರಣ ರೇಖೆಯಾದ್ಯಂತ ಅಸಂಖ್ಯಾತ ಭಯೋತ್ಪಾದಕರ ಒಳನುಸುಳುವಿಕೆಯನ್ನು ಯಶಸ್ವಿಗೊಳಿಸಿದ್ದಾನೆ. ಇದರ ಪರಿಣಾಮವಾಗಿ ಅನೇಕ ಭಾರತೀಯ ನಾಗರಿಕರು, ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕರ್ನಲ್ ರಾಘವ್ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಐವರು ಲಷ್ಕರ್ ಉಗ್ರರ ಹತ್ಯೆ

Exit mobile version