Site icon Vistara News

Manipur Violence: ಸರ್ಜಿಕಲ್ ಸ್ಟ್ರೈಕ್ ನೇತೃತ್ವ ವಹಿಸಿದ್ದ ಸೇನಾಧಿಕಾರಿಗೆ ಮಣಿಪುರ ಹಿಂಸಾಚಾರ ತಡೆಯುವ ಹೊಣೆ!

army officer who led the surgical strike has to control Manipur Violence task

ಇಂಫಾಲ್, ಮಣಿಪುರ: 2015ರ ಮಯನ್ಮಾರ್ ಸರ್ಜಿಕಲ್ ಸ್ಟ್ರೈಕ್ (Myanmar Surgical Strike) ನೇತೃತ್ವದ ವಹಿಸಿದ್ದ ಸೇನಾಧಿಕಾರಿ(ಈಗ ನಿವೃತ್ತ) ಅವರು(Army Officer) ಮಣಿಪುರ ಹಿಂಸಾಚಾರ (Manipur Violence) ತಡೆಗಟ್ಟಲು ರಾಜ್ಯ ಸರ್ಕಾರಕ್ಕೆ ನೆರವು ನೀಡಲಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ 170 ಅಧಿಕ ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಜನರು ನಿರ್ಗತಿಕರಾಗಿದ್ದಾರೆ. ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದೆ.

ಮಣಿಪುರ ಸರ್ಕಾರವು ಆಗಸ್ಟ್ 24 ರಂದು ಕರ್ನಲ್ (ನಿವೃತ್ತ) ನೆಕ್ಟರ್ ಸಂಜೆನ್ಬಮ್ ಅವರನ್ನು ಐದು ವರ್ಷಗಳ ಅಧಿಕಾರಾವಧಿಗೆ ಮಣಿಪುರ ಪೊಲೀಸ್ ಇಲಾಖೆಯಲ್ಲಿ ಹಿರಿಯ ಸೂಪರಿಂಟೆಂಡೆಂಟ್ (ಕಾರ್ಯಾಚರಣೆ) ಆಗಿ ನೇಮಿಸಿದೆ. ಸೇನೆಯ ಅಧಿಕಾರಿಯು 21 ಪ್ಯಾರಾ ವಿಶೇಷ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಶಾಂತಿ ಕಾಲದ ಎರಡನೇ ಅತ್ಯುನ್ನುತ ಕೀರ್ತಿ ಚಕ್ರ ಹಾಗೂ ಮೂರನೇ ಅತ್ಯುತನ್ನತ ಅವಾರ್ಡ್ ಶೌರ್ಯ ಚಕ್ರ ಪಡೆದುಕೊಂಡಿದ್ದಾರೆ.

ಮಣಿಪುರದ ಜಂಟಿ ಕಾರ್ಯದರ್ಶಿ ಆಗಸ್ಟ್ 28 ರಂದು ಹೊರಡಿಸಿದ ಆದೇಶದಲ್ಲಿ ಜೂನ್ 12 ರ ಕ್ಯಾಬಿನೆಟ್ ನಿರ್ಧಾರದ ನಂತರ ನೇಮಕಾತಿ ಮಾಡಲಾಗಿದೆ ಎಂದು ಹೇಳಲಾಗಿದೆ. ಮೂರ್ನಾಲ್ಕು ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರ ತಡೆಯಲು ಮಣಿಪುರದ ಬಿರೇನ್ ಸಿಂಗ್ ಸರ್ಕಾರ ಕೇಂದ್ರ ಸರ್ಕಾರವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಅದರ ಭಾಗವಾಗಿಯೇ ಈಗ ನಿವೃತ್ತ ಸೇನಾಧಿಕಾರಿಯನ್ನು ನೇಮಕ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ಮಣಿಪುರ ಹಿಂಸಾಚಾರ; ಸಂಸತ್‌ನಲ್ಲಿ ಸಮಗ್ರ ಚರ್ಚೆ ನಡೆಯಲಿ

ಇತ್ತೀಚೆಗೆ, ಕುಕಿ ಸಮುದಾಯದ ಮೂವರು ಯುವತಿಯನ್ನು ಬೆತ್ತಲೆ ಮೆರವಣಿಗೆ ಮಾಡಿ, ಒಬ್ಬಳನ್ನು ಗ್ಯಾಂಗ್ ರೇಪ್ ಮಾಡಿದ ಪ್ರಕರಣವು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಅವಿಶ್ವಾಸ ನಿರ್ಣಯವನ್ನು ಎದುರಿಸಬೇಕಾಯಿತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version