ಮುಂಬೈ: ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿಗೋಷ್ಠಿ ನಡೆಸುವುದಿಲ್ಲ, ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದೆಲ್ಲ ಹೇಳಿಕೊಂಡು ತಿರುಗಾಡುತ್ತಿದ್ದ ಪ್ರತಿಪಕ್ಷಗಳೀಗ 14 ಪತ್ರಕರ್ತರನ್ನು ನಿಷೇಧಿಸಿವೆ. ರಿಪಬ್ಲಿಕ್ ಸುದ್ದಿ ವಾಹಿನಿಯ ಅರ್ನಬ್ ಗೋಸ್ವಾಮಿ ಸೇರಿ 14 ಪತ್ರಕರ್ತರ ಕಾರ್ಯಕ್ರಮಗಳಿಗೆ ಇಂಡಿಯಾ ಒಕ್ಕೂಟದ (INDIA Bloc) ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂಬುದಾಗಿ ಪ್ರಕಟಣೆ ಹೊರಡಿಸಿದೆ.
ಇಂಡಿಯಾ ಒಕ್ಕೂಟದ ಮಾಧ್ಯಮ ವಿಭಾಗದ ಸಭೆ ನಡೆದಿದ್ದು, ದೇಶದ ಪ್ರಮುಖ ಸುದ್ದಿ ಸಂಸ್ಥೆಗಳ ಪತ್ರಕರ್ತರು, ಸಂಪಾದಕರು, ನಿರೂಪಕರು ನಡೆಸಿಕೊಡುವ ಶೋಗಳಿಗೆ ಇಂಡಿಯಾ ಒಕ್ಕೂಟದ ಪಕ್ಷಗಳ ಪ್ರತಿನಿಧಿಗಳನ್ನು ಕಳುಹಿಸುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ. ಎಐಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ಪವನ್ ಖೇರಾ ಈ ಕುರಿತು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂಡಿಯಾ ಒಕ್ಕೂಟದ ತೀರ್ಮಾನದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಪವನ್ ಖೇರಾ ಟ್ವೀಟ್
The following decision was taken by the INDIA media committee in a virtual meeting held this afternoon. #JudegaBharatJeetegaIndia #जुड़ेगा_भारत_जीतेगा_इण्डिया pic.twitter.com/561bteyyti
— Pawan Khera 🇮🇳 (@Pawankhera) September 14, 2023
ಇಲ್ಲಿದೆ ಪತ್ರಕರ್ತರ ಪಟ್ಟಿ
ಅರ್ನಬ್ ಗೋಸ್ವಾಮಿ (ರಿಪಬ್ಲಿಕ್)
ನಾವಿಕಾ ಕುಮಾರ್ (ಟೈಮ್ಸ್ ನೌ)
ಅದಿತಿ ತ್ಯಾಗಿ (ಜೀ ನ್ಯೂಸ್)
ಅಮನ್ ಚೋಪ್ರಾ (ನ್ಯೂಸ್ 18)
ಆಮಿಷ್ ದೇವಗನ್ (ನ್ಯೂಸ್ 18)
ಆನಂದ್ ನರಸಿಂಹನ್ (ನ್ಯೂಸ್ 18)
ಅಶೋಕ್ ಶ್ರೀವಾಸ್ತವ್ (ಡಿಡಿ ನ್ಯೂಸ್)
ಸುಧೀರ್ ಚೌಧರಿ (ಆಜ್ ತಕ್)
ಚಿತ್ರಾ ತ್ರಿಪಾಠಿ (ಆಜ್ ತಕ್)
ರುಬಿಕಾ ಲಿಯಾಕತ್ (ಭಾರತ್ 24)
ಗೌರವ್ ಸಾವಂತ್ (ಇಂಡಿಯಾ ಟುಡೇ)
ಶಿವ್ ಅರೂರ್ (ಇಂಡಿಯಾ ಟುಡೇ)
ಪ್ರಾಚಿ ಪರಾಶರ್ (ಇಂಡಿಯಾ ಟಿವಿ)
ಸುಶಾಂತ್ ಸಿನ್ಹಾ (ಟೈಮ್ಸ್ ನೌ ನವಭಾರತ್)
ಇದನ್ನೂ ಓದಿ: India Bloc: ಜಾತಿ ಗಣತಿ ಹಿಂದೆ ಬಿದ್ದ ‘ಇಂಡಿಯಾ’, ಭೋಪಾಲ್‌ನಲ್ಲಿ ಕೂಟದ ಮೊದಲ ಎಲೆಕ್ಷನ್ ರ‍್ಯಾಲಿ
ಭೋಪಾಲ್‌ನಲ್ಲಿ ಮೊದಲ ರ‍್ಯಾಲಿ
ಎನ್‌ಸಿಪಿಯ ನಾಯಕ ಶರದ್ ಪವಾರ್ ಮನೆಯಲ್ಲಿ ಇಂಡಿಯಾ ಕೂಟದ ಸಮನ್ವಯ ಸಮಿತಿಯ ಮೊದಲ ಸಭೆ ಬುಧವಾರ (ಸೆಪ್ಟೆಂಬರ್ 13) ನಡೆಯಿತು. ಇಂಡಿಯಾ ವಿರೋಧ ಪಕ್ಷದ ಮೈತ್ರಿಕೂಟವು ಜಾತಿ ಗಣತಿ ವಿಷಯವನ್ನು (Caste Census) ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್ (Congress Leader KC Venugopal) ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಸಮಿತಿಯು, ಸೀಟು ಹಂಚಿಕೆಯನ್ನು ನಿರ್ಧರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ ಎಂದು ಇದೇ ವೇಳೆ ತಿಳಿಸಿದರು. ಅಲ್ಲದೇ, ಕೂಟದ ಮೊದಲ ರ‍್ಯಾಲಿ ಅಕ್ಟೋಬರ್ ಮೊದಲ ವಾರದಲ್ಲಿ ಭೋಪಾಲ್‌ನಲ್ಲಿ ನಡೆಯಲಿದೆ.