Site icon Vistara News

ಅರೆಸ್ಟ್ ಮಾಡುವುದು ತನಿಖಾ ಸಂಸ್ಥೆಗಳಿಗೆ ಫ್ಯಾಶನ್ ಆಗಿದೆ: ಸಿಸೋಡಿಯಾ ಪರ ವಕೀಲ

Manish Sisodia

ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (delhi liquor policy case) ಸಂಬಂಧಿಸಿದಂತೆ ಸಿಬಿಐನಿಂದ ಬಂಧಿತರಾಗಿರುವ ದಿಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ (Manish Sisodia) ಅವರನ್ನು 10 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಜಾರಿ ನಿರ್ದೇಶನಾಲಯವು ವಿಶೇಷ ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದೆ. ಇದೇ ವೇಳೆ, ಸಿಸೋಡಿಯಾ ಪರ ವಕೀಲರು, ”ಜಾರಿ ನಿರ್ದೇಶನಾಲಯ ಯಾವುದೇ ನಿಯಮಗಳನ್ನು ಪಾಲಿಸದೇ ಬಂಧಿಸುವುದು ಹಕ್ಕು ಎಂಬಂತೆ ಭಾವಿಸುತ್ತಿದೆ” ಎಂದು ತರಾಟೆಗೆ ತೆಗೆದುಕೊಂಡರು. ಏತನ್ಮಧ್ಯೆ, ಸಿಸೋಡಿಯಾ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಇ.ಡಿ ಕೋರಿದ್ದ ಅರ್ಜಿ ವಿಚಾರಣೆಯ ಆದೇಶನ್ನು ದಿಲ್ಲಿ ರೋಸ್ ಅವೆನ್ಯೂ ಕೋರ್ಟ್ ಕಾಯ್ದಿರಿಸಿದೆ. ಅಲ್ಲದೇ, ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಮಾರ್ಚ್ 21ಕ್ಕೆ ಮುಂದೂಡಿದೆ.

ಸಿಬಿಐನಿಂದ ಬಂಧನಕ್ಕೊಳಗಾದ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವ ಒಂದು ದಿನದ ಮೊದಲು ಜಾರಿ ನಿರ್ದೇಶನಾಲಯವು ಸಿಸೋಡಿಯಾ ಅವರನ್ನು ನಿನ್ನೆ ಅಂದರೆ ಗುರುವಾರ ಬಂಧಿಸಿತ್ತು.

ಇತ್ತೀಚಿನ ದಿನಗಳಲ್ಲಿ ಏಜೆನ್ಸಿಗಳು ಅರೆಸ್ಟ್ ಮಾಡುವುದು ತಮ್ಮ ಹಕ್ಕೆಂದು ಪರಿಗಣಿಸುವುದು ಒಂದು ಫ್ಯಾಶನ್ ಆಗಿದೆ. ನ್ಯಾಯಾಲಯಗಳು ಏಜೆನ್ಸಿಗಳ ಈ ಪ್ರವೃತ್ತಿಯ ವಿರುದ್ಧ ಕ್ರಮಕೈಗೊಳ್ಳಬೇಕಾದ ಸಮಯ ಎದುರಾಗಿದೆ ಎಂದು ಸಿಸೋಡಿಯಾ ಪರ ವಕೀಲ ದಯನ್ ಕೃಷ್ಣ ವಿಶೇಷ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ಇದನ್ನೂ ಓದಿ: Manish Sisodia: ಮನೀಶ್‌ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ, ಹವಾಲ ಕೇಸ್‌ನಲ್ಲಿ ಬಂಧಿಸಿದ ಇ.ಡಿ

ದಿಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಕಡತವನ್ನು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರೇ ಕ್ಲಿಯರ್ ಮಾಡಿದ್ದಾರೆ. ಇ.ಡಿ. ಲೆಫ್ಟಿನೆಂಟ್ ಗವರ್ನರ್ ಅವರನ್ನೂ ಪ್ರಶ್ನಿಸಲಿದೆ ಎಂದು ಆಶಿಸೋಣವೇ ಎಂದು ಅವರು ಪ್ರಶ್ನಿಸಿದರು.

Exit mobile version