ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನವೇ ಚುನಾವಣೆ ಆಯೋಗದ ಆಯುಕ್ತರಾಗಿ ಐಎಎಸ್ ನಿವೃತ್ತ ಅಧಿಕಾರಿ (Arun Goel) ಅವರನ್ನು ನೇಮಿಸಲಾಗಿದೆ. ಚುನಾವಣೆ ಆಯೋಗದ ಮೂರನೇ ಅತ್ಯುನ್ನತ ಹುದ್ದೆಯು ಕಳೆದ ಆರು ತಿಂಗಳಿಂದ ಖಾಲಿ ಇತ್ತು. ಈಗ ಇದಕ್ಕೆ ಅರುಣ್ ಗೋಯಲ್ ಅವರನ್ನು ನೇಮಿಸಲಾಗಿದೆ.
“ಐಎಎಸ್ ನಿವೃತ್ತ ಅಧಿಕಾರಿ ಅರುಣ್ ಗೋಯಲ್ ಅವರನ್ನು ಚುನಾವಣೆ ಆಯುಕ್ತರಾಗಿ ನೇಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆದೇಶ ಹೊರಡಿಸಿದ್ದಾರೆ” ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯ ತಿಳಿಸಿದೆ. ಕಳೆದ ಮೇ ತಿಂಗಳಲ್ಲಿ ರಾಜೀವ್ ಕುಮಾರ್ ಅವರು ಮುಖ್ಯ ಚುನಾವಣೆ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದು, ಮೂರನೇ ಆಯುಕ್ತರ ಹುದ್ದೆ ಮಾತ್ರ ಖಾಲಿ ಇತ್ತು. ಗೋಯಲ್ ಅವರ ನೇಮಕದಿಂದ ಆಯೋಗವು ಚುನಾವಣೆಯಲ್ಲಿ ಮತ್ತಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ ಎಂದು ತಿಳಿದುಬಂದಿದೆ.
1985ನೇ ಬ್ಯಾಚ್‌ನ ಪಂಜಾಬ್ ಕೇಡರ್ ಅಧಿಕಾರಿಯಾಗಿರುವ ಗೊಯಲ್ ಅವರು ಚುನಾವಣೆ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹಾಗೂ ಚುನಾವಣೆ ಆಯುಕ್ತ ಅನೂಪ್ ಚಂದ್ರ ಪಾಂಡೆ ಅವರ ಜತೆಗೂಡಿ ಕಾರ್ಯನಿರ್ವಹಿಸಲಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (GST) ಸಮಿತಿ ಹೆಚ್ಚುವರಿ ಕಾರ್ಯದರ್ಶಿ, ಪ್ರಧಾನಮಂತ್ರಿ ಕಚೇರಿಯಲ್ಲಿ (PMO) ಯೋಜನಾ ಮೇಲ್ವಿಚಾರಣಾ ತಂಡದ ಮುಖ್ಯಸ್ಥ ಸೇರಿ ಹತ್ತಾರು ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಇದನ್ನೂ ಓದಿ | CV Ananda Bose | ಮ್ಯಾನ್ ಆಫ್ ಐಡಿಯಾಸ್ ಖ್ಯಾತಿಯ ಸಿ.ವಿ ಆನಂದ ಬೋಸ್ ಈಗ ಪಶ್ಚಿಮ ಬಂಗಾಳ ಗವರ್ನರ್