Site icon Vistara News

Kejriwal Vs Police | ಗುಜರಾತ್‌ನಲ್ಲಿ ಆಟೊ ಚಾಲಕನ ಮನೆಗೆ ಹೋಗದಂತೆ ಪೊಲೀಸರಿಂದ ಕೇಜ್ರಿವಾಲ್‌ಗೇಕೆ ತಡೆ?

Auto

ಗಾಂಧಿನಗರ: ವರ್ಷಾಂತ್ಯದಲ್ಲಿ ಗುಜರಾತ್‌ ವಿಧಾನಸಭೆ ಚುನಾವಣೆ ನಡೆಯುವುದರಿಂದ ದೆಹಲಿ ಮುಖ್ಯಮಂತ್ರಿ ಪದೇಪದೆ ಗುಜರಾತ್‌ಗೆ ಭೇಟಿ ನೀಡುತ್ತಿದ್ದಾರೆ. ಸಾರ್ವಜನಿಕರೊಂದಿಗೆ ಬೆರೆಯುವ ಮೂಲಕ ಅವರ ಮನ ಗೆಲ್ಲಲು ಯತ್ನಿಸುತ್ತಿದ್ದಾರೆ. ಇದೇ ರೀತಿ, ಸೋಮವಾರ ಅಹಮದಾಬಾದ್‌ನಲ್ಲಿ ಕೇಜ್ರಿವಾಲ್‌ ಅವರು ಆಟೊ ಚಾಲಕರೊಬ್ಬರ ಮನೆಗೆ ತೆರಳಲು ಮುಂದಾದಾಗ ಪೊಲೀಸರು (Kejriwal Vs Police) ಅವರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕೇಜ್ರಿವಾಲ್‌ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಅಹಮದಾಬಾದ್‌ ನಿವಾಸಿಯಾಗಿರುವ ವಿಕ್ರಮ್‌ ದಂತಾನಿ ಎಂಬುವರು ಆಟೊ ಚಾಲಕರಾಗಿದ್ದು, ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಅವರು ಅರವಿಂದ ಕೇಜ್ರಿವಾಲ್‌ ಅವರನ್ನು ಆಮಂತ್ರಿಸಿದ್ದರು. “ನಿಮ್ಮ ವಿಡಿಯೊ ನೋಡಿದ್ದೇನೆ. ನೀವು ಪಂಜಾಬ್‌ನಲ್ಲಿ ಆಟೊ ಚಾಲಕರೊಬ್ಬರ ಮನೆಗೆ ಹೋಗಿದ್ರಿ. ನಾನೂ ನಿಮ್ಮ ಅಭಿಮಾನಿ. ನಮ್ಮ ಮನೆಗೆ ಬನ್ನಿ” ಎಂದು ಆಮಂತ್ರಿಸಿದ್ದರು.

ಇದಕ್ಕೆ ಒಪ್ಪಿದ ಕೇಜ್ರಿವಾಲ್‌ ಅವರು ಆಟೊದಲ್ಲಿಯೇ ಅವರ ಮನೆಗೆ ತೆರಳಲು ಮುಂದಾದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಭದ್ರತೆ ದೃಷ್ಟಿಯಿಂದ ಆಟೊ ಚಾಲಕನ ಮನೆಗೆ ಹೋಗುವುದು ಕಷ್ಟ ಎಂದಿದ್ದಾರೆ. ಆದರೆ, ಇದಕ್ಕೆ ಸೊಪ್ಪು ಹಾಕದ ಕೇಜ್ರಿವಾಲ್‌ ಅವರು ಆಟೊ ಚಾಲಕನ ಮನೆಗೆ ತೆರಳಿ, ಊಟ ಮಾಡಿದ್ದಾರೆ. ಕುಟುಂಬಸ್ಥರೊಡನೆ ಆತ್ಮೀಯವಾಗಿ ಬೆರೆತು, ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದ ಫೋಟೊಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ | ಬಿಜೆಪಿಯಲ್ಲೇ ಇದ್ದುಕೊಂಡು ಆಪ್​​ಗಾಗಿ ಕೆಲಸ ಮಾಡಿ; ಕಾರ್ಯಕರ್ತರಿಗೆ ಕರೆ ನೀಡಿದ ಅರವಿಂದ್ ಕೇಜ್ರಿವಾಲ್​

Exit mobile version