ಶಿಲ್ಲಾಂಗ್, ಮೇಘಾಲಯ: ಮೇಘಾಲಯ ವಿಧಾನ ಸಭೆ ಚುನಾವಣೆ ಫಲಿತಾಂಶ (Meghalaya election result) ಪ್ರಕಟವಾಗುತ್ತಿದ್ದು, ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ 10 ಗಂಟೆ ಹೊತ್ತಿಗೆ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 60 ಕ್ಷೇತ್ರಗಳ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 31 ಸೀಟುಗಳು ಬೇಕು. ಸದ್ಯದ ಟ್ರೆಂಡ್ ನೋಡಿದರೆ, ಮೇಘಾಲಯ ಅತಂತ್ರ ವಿಧಾನಸಭೆಯಾಗುವ ಸಾಧ್ಯತೆಗಳಿದ್ದು, ಕಾನ್ರಾಡ್ ಅವರು ಈಗಾಗಲೇ ಬಿಜೆಪಿ ಜತೆಗೆ ಮಾತುಕತೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ(North East Election Results:).
ಎನ್‌ಪಿಪಿ ಬಳಿಕ, ಬಿಜೆಪಿ 10 ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡರೆ, ತೃಣಮೂಲ ಕಾಂಗ್ರೆಸ್ ಮತ್ತು ಯುಡಿಪಿ ಕ್ರಮವಾಗಿ 8 ಮತ್ತು ಕ್ಷೇತ್ರಗಳಲ್ಲಿ ಮುಂದಿವೆ. ಕಾಂಗ್ರೆಸ್ ಕೂಡ 6 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಳೆದ ಬಾರಿಗೆ ಹೋಲಿಸಿದರೆ, ಕಾಂಗ್ರೆಸ್‌ಗೆ ಈ ಬಾರಿ ಹಿನ್ನಡೆಯಾಗಿದೆ.
ಇದನ್ನೂ ಓದಿ: Northeast Assembly Election Result: ಮೇಘಾಲಯದಲ್ಲಿ ಮುನ್ನಡೆ ಸಾಧಿಸಿದ್ದರೂ, ಮ್ಯಾಜಿಕ್ ನಂಬರ್ ತಲುಪದ ಎನ್‌ಪಿಪಿ
ಒಂದು ವೇಳೆ ನಾವು ಅತಂತ್ರ ಜನಾದೇಶವನ್ನು ಪಡೆದುಕೊಂಡರೆ, ಸರ್ಕಾರ ರಚಿಸಲು ಪಕ್ಷಗಳೊಂದಿಗೆ ಮಾತನಾಡಬೇಕು. ಒಂದು ವೇಳೆ ಪಕ್ಷವು(ಬಿಜೆಪಿ) ರಾಷ್ಟ್ರ ಮಟ್ಟದಲ್ಲಿ ಈಶಾನ್ಯಕ್ಕೆ ಧ್ವನಿ ನೀಡಿದರೆ, ಆ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಬಹುದು ಕಾನ್ರಾಡ್ ಸಂಗ್ಮಾ ತಿಳಿಸಿದ್ದಾರೆ. ಮತಗಟ್ಟೆ ಸಮೀಕ್ಷೆಗಳು ಎನ್‌ಪಿಪಿ 20 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಊಹಿಸಿದ್ದವು .